ಪುಟ:ಶಕ್ತಿಮಾಯಿ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - - - - - - - - - part==== ~ ೧೬೪ ಸ, ಚಂದ್ರಿಕೆ ರ್ಮವನ್ನಾ ಶ್ರಮಿಸಿದವಳು; ಮೇಲಾಗಿ ಪರಸ್ತ್ರೀಯಳು! ಅವನು ಆಕೆ ಯ ಸಹಾಯದಿಂದ ಮುಕ್ತನಾಗಿದ್ದರೆ ಅವನ ಆ ಹಿಂದೂಧರ್ಮದ ಜಾಜ್ವಲ್ಯ ವೃತ್ತಿಗೆ ತುಸುಮಟ್ಟಿಗಾದರೂ ಕು೦ದು ಉಂಟಾಗದೆ ಇರುತ್ತಿರಲಿಲ್ಲ. ಗಣೇಶದೇವನಂಧ ಧರ್ಮಭೀರುಗಳು ನಮ್ಮ ಆರ್ಯಾ ವರ್ತದಲ್ಲಿ ಯಾವಾಗಲೂ ಹುಟ್ಟಿ ಬರುತ್ತಿರುವದರಿಂದಲೇ ನಮ್ಮ ಸ ನಾತನ ಹಿಂದೂ ಧರ್ಮವು ಜಗತ್ತಿನೊಳಗಿನ ಎಲ್ಲ ಧರ್ಮಗಳಿಗಿಂತ ಶ್ರೇಷ್ಠ ವೂ ಪ್ರಾಚೀನವೂ ಆಗಿದ್ದು, ಅದಕ್ಕೆ ಎಂದೂ ಚ್ಯುತಿ ಯುಂಟಾಗಲರಿಯದು, ಇರಲಿ. ಒಳಿತ ಆವನು ಶಕ್ತಿಮಯಿಯ ವಸ್ತ್ರಗಳನ್ನು ಆಕೆಗೆ ತಿರುಗಿಕೊಟ್ಟು-ಒಲ್ಲೆನು, ಶಕ್ತಿ, ನಾನು ಹೊರಟು ಹೋಗಲಿಕ್ಕೆ ಒಲ್ಲೆನು ಎಂದು ನುಡಿದನು. 'ಯಾಕೆ? ಎಂದು ಆಶ್ಚರ್ಯಚಕಿತಳಾದ ಶಕ್ತಿಯು ಕೇಳ ಲು, ನಿನ್ನ ಕೈಯಿಂದ ಬಂಧಮುಕ್ತನಾಗುವದು ನನಗೆ ಪ್ರಶಸ್ತವಾಗಿ ತೋರುವದಿಲ್ಲ. ಆದ್ದರಿಂದ ನಾನು ಒಡಿಹೋಗಲಾರೆನು ಎಂದು ಗಣೇಶದೇವನು ನಿಶ್ವಯ ಪೂರ್ವಕವಾಗಿ ಹೇಳಿದನು. ಇವನನ್ನು ಇಲ್ಲಿಂದ ಹೊರ ಹೊರಡಿಸುವದು ಇನ್ನು ಅಸಾಧ್ಯವೆಂದು ಆಗ ಆಕೆಗೆ ಗೋಚ ರವಾಯಿತು. ಅದರಿಂದ ಶಕ್ತಿಮಯಿಯ ಆಶಾಪ್ರದೀಪ್ತ ಮುಖಲಕ್ಷಣವು ಸುಟ್ಟು ಕಪ್ಪಿಟ್ಟಂತೆ ಮಲೀನವಾಗಿ ಹೋಯಿತು. ಆಕೆಗೆ ಸಮದುಃ ಖವುಂಟಾಗಿ ಅದರಿಂದ ಅವಳಿಗೆ ಮೋಳಿಬಂದತಾಯಿತು. ಆದರೆ ಆಗ ಅವಳು ಲಗುಬಗೆಯಿಂದ ಒಂದು ಗೋಡೆಯ ಆಶ್ರಯವನ್ನು ಮಾಡಿರ ದಿದ್ದರೆ, ಅಂದು ಆಕೆಯಿಂದಾಗಬೇಕಾಗಿದ್ದ ಸಾಹಸದ ಕಾರ್ಯವು ಅಲ್ಲಿಗೇ ಮುಗಿತಾಯಹೊಂದಬೇಕಾಗಿತ್ತು; ಆದರೆ ಈಶ್ವರೀಸಂಕೇತವು ಹಾಗಿದ್ದಿಲ್ಲ. ಕ್ಷಣದಲ್ಲಿ ಶಕ್ತಿಯು ಕಾರಾಗೃಹದ ಹೊರಗೆಬಂದಳು. ಅವಳು ಇನ್ನು ನೆಟ್ಟಗೆ ಆ ಕಗ್ಗತ್ತಲೆಯಲ್ಲಿ ತನ್ನ ಇಷ್ಟಕಾ ರ್ಯಸಾಧನಕ್ಕಾಗಿ ಸಾಗತಕ್ಕವಳು; ಅಷ್ಟರಲ್ಲಿ,