ಶವಯಿ, ೧೬೫
- ಬೇಡ, ವಾಗೇ ಹೊರಟುಹೋಗಬೇಡ ಎಂದು ಕಾವಲು ಗಾರರ ಮುಖ್ಯಸ್ಥನು ಪಹರೆಯ ಚಾವಡಿಯೊಳಗೆ ಗುಡಗುಡೀ ಸೇದುತ್ತ ನುಡಿದನು. ಆದರೂ ಶಕ್ತಿಯು ನಿಲ್ಲದೆ ಹಾಗೇ ಒತ್ತರದಿಂ ದ ಕಾಲು ಬಿಡುತ್ತಿರುವದನ್ನು ನೋಡಿ ಅವನ ಸಂಜ್ಞೆಯ ಮೇರೆಗೆ ಇಬ್ಬರು ಕಾವಲುಗಾರರು ಓಡುತ್ತ ಬಂದು ಅವಳನ್ನು ತರುಬಿ“ಎಲ್ಲಿ, ಉಂಗುರವೆಲ್ಲಿ? ಎಂದು ಹೇಳಿದರು.
ಅವಳು ಅವರ ಮಾತಿನ ಕಡೆಗೆ ಲಕ್ಷ್ಯ ಗೊಡದೆ ಮಗ್ಗಲಿನಿಂದ ಮತ್ತೆ ನಡೆದಳು. ಆಗ ಕಾವಲುಗಾರರು ಇವಳು ಉಂಗುರವನ್ನು ಕೊಡದೆ ಓಡಿಹೋಗಲು ಪ್ರಯತ್ನಿಸುತ್ತಾಳೆಂದು ಬಗೆದು, ಒಳ್ಳೆ ಗೊಗ್ಗರದನಿಯಿ೦ದ..."ಎಲ್ಲಿ, ಉಂಗುರವೆಲ್ಲಿದೆ? ಅದನ್ನು ಕೊಟ್ಟು ಹೋಗು; ಉಂಗುರವನ್ನು ಕೊಡದಿದ್ದರೆ ಬಿಡಬೇಡಿರೆಂದು ಕುತು ಬಶಹನ ಆಜ್ಞೆಯಾಗಿರುತ್ತದೆ. ಎ೦ದು ಕೇಳಿದರು; ಕೂಡಲೆ ಆಕೆಯು ಸಿಟ್ಟಿನ ಅತಿರೇಕದಿಂದ ಬಿಡು, ದಾರಿಬಿಡು. ಸುಲ್ತಾನೆಯ ಹುಕು ಮೆಂದು ತಿಳಿ ” ಎಂದು ಕೂಗಿದಳು. ಆ ಕಾವಲುಗಾರರೆಲ್ಲರು ಆ ಹೆ ಣ್ಣು ಮಗಳನ್ನು ಗಣೇಶದೇವನ ಹೆಂಡತಿಯೆಂದೇ ಈವರೆಗೆ ಭಾವಿಸಿದ್ದ ರು. ಗಣೇಶದೇವನು ನಾಳೆ ಬೆಳಿಗ್ಗೆ ವಧಸ್ಥಾನಕ್ಕೆ ಒಯ್ಯಲ್ಪಡುತ್ತಿ ರುವದರಿಂದ ಅವಳು ಕುತುಬನ ವಶೀಲಿಯಿಂದ ತನ್ನ ಗಂಡನ ಕಟ್ಟ ಕಡೆಯ ಭೆಟ್ಟಿಗಾಗಿ ಹೀಗೆ ರಾತ್ರಿ-ಅಪರಾತ್ರಿಯಲ್ಲಿ ಒಬ್ಬೊಂಟಿಗಳಾ ಗಿ ಈ ಜೇಲಖಾನೆಗೆ ಬಂದಿರಬಹುದೆಂದು ಅವರು ಊಹಿಸಿದ್ದರು. ಆದರೆ ಸುಲತಾನೆಯ ಹುಕುಮ” ಎಂಬ ಶಬ್ದಗಳನ್ನು ಕೇಳಿ ಅವರೆಲ್ಲರು ಗರ್ಭಗಲಿತರಾಗಿಹೋದರು. ಒಬ್ಬನೂ ಒಟ್ಟಿ೦ದುಮಾತಾಡ ದಾದನು. ಶಕ್ತಿಮಯಿಯು ಹೊರಟುಹೋದ ಎಷ್ಟೋ ಹೊತ್ತಿನ ಲೆ ಆ ಕಾವಲುಗಾರರ ಮುಖ್ಯ ಸ್ತನು ಆದಸಂಗತಿಯನ್ನು ಕುತುಬನಿಗೆ ತಿಳಿಸಲು ಒಬ್ಬನನ್ನು ಕಳಿಸಿ, “ಶ್ರೀಮಂತರ ಮನೆಯ ಹೆಂಗಸರ ಚಾರಿ