ಪುಟ:ಶಕ್ತಿಮಾಯಿ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

rik 4. ಕಂದ್ರ.' ತ್ರವು ವಿಚಿತ್ರವಾದದ್ದೆಂಬದು ಸುಳ್ಳಲ್ಲ.” ಎಂದು ಮನದಂದು ಸುಮ್ಮನಾದನು. ಶಕ್ತಿಮಯಿಯು ಆ ಕತ್ತಲಲ್ಲಿ ಒಬ್ಬಳೇ ನಡೆದಳು. ಆದರೆ ಆಕೆಯು ತನ್ನ ಪ್ರಾಸಾದದ ಮಾರ್ಗವನ್ನು ಹಿಡಿಯದೆ, ಅರಣ್ಯದ ಕಡೆಗೆ ಸಾಗಿ ದಳು. ಶಕ್ತಿಯ ಪೂರ್ವ ಚಾರಿತ್ರ್ಯವನ್ನು ಬಲ್ಲವರಿಗೆ ಆಕೆಯಂಥ ಮಹಾ ರಾಣಿಯು ಅಂಥ ಕಗ್ಗತ್ತಲೆಯಲ್ಲಿ ಒಬ್ಬಳೇ ಹ್ಯಾಗೆ ಹೋದಳೆಂಬದು ಆಶ್ಚರ್ಯವಾಗಿ ತೋರಲಿಕ್ಕಿಲ್ಲ. ಶಕ್ತಿಯು ಸಹಜವಾಗಿ ಕೆಲದಾರೀನಡೆದು ಹೋಗಿ ಒಂದು ಚಿಕ್ಕ ನದಿಯನ್ನು ದಾಟಿ ಅದರ ದಂಡೆಯೊಳಗೆ ಕಡಿದು ಬಿದ್ದಿದ್ದ ಒಂದು ಹುಣಿಶೀಗಿಡವನ್ನು ತಲುಪಿದಳು, ಒಂದಾನೊಂದು ದಿ ವಸ ಯಾವ ಮರದ ಬೊಜ್ಜಿಗೆ ಕುಳಿತು ಶಕ್ತಿಯು ತನ್ನ ಪ್ರಿಯ ಸಖ ನಾದ ಗಣೇಶದೇವನೊಡನೆ ಪ್ರೇಮಾಲಾಪಗಳನ್ನಾಡುತ್ತಿರುವಾಗ ಆತನ ತಾಯಿಯಿಂದ ಅಸನಹೊಂದಿ ಅವರಿಗೆ ಅಭಿಶಾಪವನ್ನಿತ್ತು ಅಂದಿನಿಂದ ಸೇಡಿನ ಹವ್ಯಾಸಕ್ಕೆ ಒಳಗಾಗಿ ಪ್ರಸ್ತುತದ ಈ ಅನಿ ವಾರ್ಯ ಪಶ್ಚಾತ್ತಾಪದ ಪ್ರಸಂಗವನ್ನು ತಂದು ಕೊಂಡಿದ್ದಳೊ, ಆ ಜೋಡಿ ಹುಣಿಶೀಗಿಡವೇ ಇದಾಗಿತ್ತು. ಅಂಥ ಆ ದುಷ್ಟ ಸ್ಮಾರಕದಕಡೆಗೆ ಮುಹೂರ್ತ ಮಾತ್ರ ನೋಡುತ್ತ ನಿಂತು ಶಕ್ತಿಯು ಹಾಗೆಯೇ ಮುಂದಕ್ಕೆ ನಡೆದಳು, ಹಿಂದೆ ಐದನೆಯೆ ಪ್ರಕರಣದಲ್ಲಿ ವರ್ಣಿಸಿದಂತೆ ಅವಳು ಯಾವ ಗಿಡದ ಕೆಳಗೆ ಒಂದಾನೊಂದು ದಿವಸ ಭೋಳಿಬಂದು ಬಿದ್ದಿದ್ದಳೋ ಹಾಗು ಯಾವ ಗಿಡದ ಕೆಳಗೆ ಗಣೇಶದೇವನ ವಿಷಯದ ಪ್ರೇಮ ರಜ್ಜುವಿನಂತಿದ್ದ ತನ್ನ ಶುಷ್ಕ ಬಕುಲ ಮಾಲೆಯನ್ನು ಹರಿದು ಹೋಗ ಇನ್ನು ಕೈಯಿಂದ ತಿಕ್ಕಿ ನುಗ್ಗು ನುಗ್ಗು ಮಾಡಿ ಧೂಳಿಯಲ್ಲಿ ಕೂಡಿಸಿ ಬಿಟ್ಟಿದ್ದಳೊ, ಆ ವೃಕ್ಷವು ಆಕೆಗೆ ದಾರಿಯಲ್ಲಿ ಕಾಣಿಸಿತು. ಆಗ ಅವಳು ಆ ಗಿಡದ ಕೆಳಗೆ ಯಾವ ಸ್ಥಳದಲ್ಲಿ ಆ ಒಣ ಹೂಮಾಲೆಯನ್ನು ಪುಡಿ ಮಾಡಿ ಮಣ್ಣಗೂಡಿಸಿದ್ದಳೋ, ಆ ಸ್ಥಳದಲ್ಲಿಯ ಒಂದು ಹಿಡಿಮಣ್ಣನ್ನು