ಪುಟ:ಶಕ್ತಿಮಾಯಿ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ. ೧೭ ಒಳ್ಳೆವಿಶ್ವಾಸವೂರ್ವಕವಾಗಿ ಎತ್ತಿಕೊಂಡು ತನ್ನ ರತ್ನ ಖಚಿತವಾದ ಶಾಲಿನ ಸೆರಗಿನಲ್ಲಿ ಕಟ್ಟಿ ಕೊಂಡಳು. ಬಳಿಕ ಅವಳು ಪುನಃ ಮುಂದಿ ನ ದಾರಿಯನ್ನು ಕ್ರಮಿಸಹತ್ತಿ ತುಸ ಹೊತ್ತಿನಲ್ಲಿ ಒಂದು ಪುರಾತನವಾದ ಜೀರ್ಣ ಕಾಲಿಕಾ ಮಂದಿರವನ್ನು ಮುಟ್ಟಿದಳು. ಪೂರ್ವದಲ್ಲಿ ಅವಳು ತನ್ನ ಸೋದರತ್ತೆಯಾದ ಯೋಗಿನಿಯ ಬಳಿಯಲ್ಲಿರುವಾಗ ಆ ಮಂದಿರವು ಹಾಗೆ ಇತ್ತೋ, ಹಾಗೆಯೇ ಅದು ಈವಾಗಲೂ ಇದ್ದಿತು. ಅನಂತರ ಅವಳು ಆ ಮಂದಿರದ ಕದವನ್ನು ಮೆಲ್ಲನೆ ನೂಕಿನೋಡಿದಳು. ಅದಕ್ಕೆ ಒಳಗಿನಿಂದ ಅಗಳಿ ಚಿಲಕಗಳೊಂದೂ ಹಾಕಿರಲಿಲ್ಲ. ಆಗ ಅವಳು ಅದನ್ನು ಸಪ್ಪಳವಾಗದಹಾಗೆ ಮೆಲ್ಲಗೆಗೂಡಿ ಒಳಗೆ ಪ್ರವೇಶಮಾಡಿ ದಳು. ಅಲ್ಲಿ ಪ್ರಜ್ವಲಿತವಾದ ಹೇಮಾಗ್ನಿಯಿಂದ ಪರಿಶೋಭಿಸುವ ಒಂದು ಅಗ್ನಿ ಕುಂಡದ ಎದುರಿಗೆ ಸನ್ಯಾಸಿನಿಯು ಕಣ್ಣು ಮುಚ್ಚಿ ಕೊಂಡು ಕುಳಿತಿದ್ದಳು. ಆಗ ಶಕ್ತಿಯು ನಿಃಶಬ್ದದಿಂದ ಆ ಸನ್ಮಾ ಸಿನಿಯ ಹಿಮ್ಮಗ್ಗಲಲ್ಲಿ ಬಂದು ನಿಂತಳು. ಧ್ಯಾನಸ್ತಳಾದ ಯೋಗಿನಿ ಯು ಅದಾವುದನ್ನೂ ಅರಿಯಳು. ನಂತರ ಯೋಗಿನಿಯು ತನ್ನ ಯೋಗವನ್ನಿಳಿಸಿ, ಬಾಯಿಂದ ಸ್ವಾಹಾಕಾರ ಮಂತ್ರವನ್ನು ತ್ವರಿಸುತ್ತ ಸುಖಸ್ಥ ಪ್ರದೀಪ್ತಾಗ್ನಿಯಲ್ಲಿ ಆಜ್ಞಾಹುತಿಯನ್ನು ಹಾಕಿದಳು. ಕೂಡಲೆ ಆ ಅಗ್ನಿ ಯು ಮತ್ತಿಷ್ಟು ಪ್ರಜ್ವಲಿತವಾಯಿತು. ಆ ಅಗ್ನಿಯ ತರತರದ ಜ್ವಾಲೆಗಳು ಒಂದ ಕ್ಕಿಂತ ಒಂದು ಹೆಚ್ಚು ಎತ್ತರವಾಗಿ ಎದ್ದು ಆ ಮಂದಿರವನ್ನು ಸುಟ್ಟು ಬಿಡುವವೋ ಏನೋ ಎಂಬಂತೆ ತೋರಹತ್ತಿತು. ಹಿಮ್ಮಗ್ಗಲು ನಿಂತಿದ್ದ ಶಕ್ತಿಯ ಕಣ್ಣುಗಳು ಹೊಗೆಯಿಂದ ಕೆಂಡದಂತೆ ಕೆಂಪಗಾದವು. ಅಗ್ನಿಯ ಜ್ವಾಲೆಗಳ ಕುಡಿಗಳು ಗಾಳಿಗೆ ಚದುರಿದ್ದ ಆಕೆಯ ತಲೆ ಗೂದಲುಗಳಿಗೆ ತಗಲುತ್ತಿದ್ದದರಿಂದ ಅವು ಒಂದೊಂದೇಆಗಿ ಉದುರಿ ಹೊಗೆಯಿಂದ ಆ ಮಂದಿರದ ತುಂಬೆಲ್ಲ ಹಾರಾಡುತ್ತಿದವು. ಆದರೆ