ನಿ ಶಕ್ತಿಮಯಿ, ನಾಲ್ಕನೆಯ ಪ್ರಕರಣ •cs ಅಭಿಶಾಪ. +++ ಕುಮಾರನು ತಲೆ ತಗ್ಗಿಸಿದನು. ಅನುತಾಪವೆಂಬ ತೀವ್ರ ವೃಶ್ಚಿ ಕದಂಶದ ಅಗ್ನಿಯಿಂದ ಅವನು ಉರಿಯಹತ್ತಿದನು. ಶಕ್ತಿಯು ಕುಮಾರನನ್ನು ಸ್ವಾಮಿಯೆಂದು ತಿಳಿದು ಈ ವರೆಗೂ ಕುಮಾರಿಯಾ ಗಿದ್ದಳು. ಆದರೆ ಕುಮಾರನು ಮಾತ್ರ ವಿವಾಹಿತನಾಗಿ ಸುಖದಲ್ಲಿ ಕಾಲಕಳೆಯುತ್ತಿದ್ದನು. ಆದರೆ ಅನುತಾಪಗ್ರಸ್ತನಾದ ಅವನು ಈಗ ಬಾಯಿಂದ ಒಂದು ಚಕಾರಶಬ್ದವನ್ನು ಕೂಡ ಉಚ್ಚರಿಸಲಿಲ್ಲ. ಹಾಗೇ ಆಗಲಿ ಶಕ್ತಿಯು ಪರಸ್ತ್ರೀಯಳಲ್ಲವೆಂಬದನ್ನು ತಿಳಿದು ಮನಸ್ಸಿನಲ್ಲಿಯೇ ಅವನು ಸಂತೋಷಪಟ್ಟನು. ಶಕ್ತಿ--ರಾಜಕುಮಾರನ ವಿವಾಹವು ಆಗಿರಬಹುದಲ್ಲವೆ? ಎಂದು ಹೇಳಲು, ಕ್ಷಣಹೊತ್ತು ಅವನ ತೇಜೋಭಂಗವಾದಂತಾಯಿ ತು, 1 ಕಣ್ಣುಗಳಿಂದ ಅಶ್ರುಗಳನ್ನು ದುರಿಸುತ್ತ ಅವನು-ಶಕ್ತಿ, ನೀನೇಕೆ ಹೊರಟುಹೋದೆ? ಶಕ್ತಿ-ಮತ್ತೂ ಅದನ್ನೇ ಕೇಳುತ್ತೀಯಲ್ಲ? ಕುಮಾರ -- ಹಾಗಲ್ಲ. ಲಗ್ನ ಮಾಡಿಕೊಡುವದಕ್ಕಾಗಿಯೇ ನಿನ್ನ ತಂದೆಯು ನಿನ್ನನ್ನು ಪರಸ್ಥಳಕ್ಕೆ ಕರೆದೊಯ್ದನೆಂದು ತಿಳಿದಿದ್ದೆನು. ಆಂತೇ ನಾನು ನಿನ್ನನ್ನು ಪರಸ್ತ್ರೀಯೆಂದು ಭಾವಿಸಿದ್ದೆನು. ಶಕ್ತಿಯತಂದೆಯ ವಾಸಸ್ಥಳವು ಖದ್ದ ದಿನಾವರವಲ್ಲ; ವಿನಾಜವುರದ ಬಳಿಯಲ್ಲಿರುವ ದೇವಕೋಟಿಯು ಆತನಊರು. ಅವ ನು ರಾಜದರ್ಬಾರದಲ್ಲಿ ಕೆಲಸಮಾಡಬಂದ ಹತ್ತು ವರ್ಷಗಳಿಂದ ದಿನಾ ಜಪುರದಲ್ಲಿಯೇ ವಾಸಮಾಡುತ್ತಿದ್ದನು,
ಪುಟ:ಶಕ್ತಿಮಾಯಿ.djvu/೩೬
ಗೋಚರ