ಪುಟ:ಶಕ್ತಿಮಾಯಿ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ, ರ್9 ಹೋಗುವೆ; ನಿನಗೆ ಆಟವು; ಆದರೆ ನನಗೆ ಮಾತ್ರ ಪ್ರಾಣಸಂಕಟವು! ಕುಮಾರನ ಬಾಯಿಂದ ಶಬ್ದಗಳು ಹೊರಡದಾದವು. ಅರಳಿದ ಹೂವಿನಲ್ಲಿ ಸರ್ಪವನ್ನು ಕಂಡಂತೆ ಅವನು ವಿಸ್ಮಯಚಕಿತನಾದನು. ಶಕ್ತಿಯ ಈ ಪ್ರಕಾರದ ಹುಸಿಗಂಟಿಕ್ಕಿದ ವಿಷಮಯಭಾವ ವನ್ನು ಕಂಡಕೂಡಲೆ ಈವರೆಗೆ ಮರೆತುಹೋಗಿದ್ದ ನಿರೂಪಮೆಯ ಭಕ್ತಿ-ಪ್ರೇಮ-ಕ್ಷಮಾ-ಕೋಮಲ ಕರುಣಾಯುಕ್ತ ಮುಖಮಂಡ ಲವುಕುಮಾರನಿಗೆ ಕಾಣಹತ್ತಿತು. ಅವನು ಮನಃಶ್ಚಕ್ಷುಗಳಿಂದ ನೋಡ ಹತ್ತಿದನು; ಈ ಈರ್ಷೆಯಿಂದ ಕುರೂಪಳಾದ ಶಕ್ತಿಮಯಿಯು ತನ್ನ ರಾಣಿಯು; ಮತ್ತು ಆ ಸುಕುಮಾರ-ಸುಕೋಮಲವಾದ ನಿರೂಪಮಾ ಕುಸುಮವು ತನ್ನ ಆಲಿಂಗನಕ್ಕೆ ಪಾತ್ರವಾಗದೆ, ಕಾಲಲ್ಲಿ ತುಳಿಯಲ್ಪಟ್ಟು ಒಣಗಿ ಭೂಮಿಯಮೇಲೆ ಬಿದ್ದಿದೆ. ಇದರಿಂದ ಅವನ ಹೃದಯವು ನಡುಗಿತು. ನಿರೂಪಮೆಯು ಅವನ ಲಗ್ನದ ಹೆಂಡತಿಯು, ಅವನ ಮಕ್ಕಳ ಮರಿಗಳ ತಾಯಿಯು, ಅವನ ಸುಖದುಃಖಗಳ ಪಾಲುಗಾರ್ತಿಯು. ಆದ್ದರಿಂದ ಅವಳಲ್ಲಿ ಕುಮಾರನ ಶ್ರದ್ಧೆ-ಭಕ್ತಿ-ಕರುಣಾ ಸ್ನೇಹಗಳು ಎಳ್ಳಷ್ಟಾದರೂ ಕಡಿಮೆ ಇದ್ದಿಲ್ಲ. ಅವನಿಗೆ ಬೇರೊಂದು ಕಾರಣ ದಿಂದಅವನಲ್ಲಿ ಆತ್ಮಪರಿಪೂರ್ಣವಾದ ಪ್ರೇಮದ ಕೊರತೆಯೊಂದೇ ಇತ್ತು, ಆದರೆ ನಿರೂಪಮೆಯಕೋಮಲಗುಗಳು, ಆಕೆಯ ಪರಿಪೂರ್ಣ ಆತ್ಮ ದಾನವು, ಆಕೆಗೆ ಕುಮಾರನ ಈ ಕೊರತೆಯನ್ನು ತೋರಗೊಟ್ಟಿದ್ದಿಲ್ಲ, ಈದಿನಕುಮಾರನಹೃದಯದಲ್ಲಿ ಯಾವಾಗನಿರೂಪಮೆಯ ಮೂರ್ತಿಯು ನೆಲೆಗೊಂಡಿತೋ, ಆವಾಗ ಆ ಮೂರ್ತಿಯು ತನ್ನ ದೋಷವನ್ನು ಎಲ್ಲಿ ಕಂಡುಹಿಡಿಯುವದೋ ಎಂಬಂತೆ ಅವನಿಗಾಯಿತು. ಆದರೆ ಆ ಮೂರ್ತಿಯು ಅವನ ಈ ಕ್ಷುಲ್ಲಕದೋಷವನ್ನು ನೋಡಲಿಕ್ಕೆ ಮನಸ್ಸು ಮಾಡದೆ ಸ್ಥಿರವಾಗಿದ್ದಿತು. ಆಗ ಅವರು ತನ್ನನ್ನೂ ಮರೆತು, ಜಗ