هندا دة ا ತ ರಿಣಿಯೆಂದೇ ನಿನ್ನನ್ನು ನಿನ್ನ ತಂದೆಯು ಎಲ್ಲಿಯೂ ಕಳಿಸಲಿಕ್ಕೆ ಸಮ್ಮತಿಸುವದಿಲ್ಲ. ಶಕ್ತಿಯ ತಂದೆಯು ಆಕೆಯನ್ನು ಈ ಯೋಗಿನಿಯ ಬಳಿಯಲ್ಲಿ ಟ್ಟು ಕೆಲವು ದಿವಸ ಬೇರೂರಿಗೆ ಹೋಗಿದ್ದನು.
- ಶಕ್ತಿಯು ಸಮಾಧಾನದಿಂದ ಯೋಗಿನಿಯ ತಿರಸ್ಕಾರದ ಮಾ ತನ್ನು ಕೇಳಿ, ಆತ್ಮ ದೋಷದ ಕ್ಷಾಲನಕ್ಕೆ ಸ್ವಲ್ಪವೂ ಪ್ರಯತ್ನಿಸದೆ, ಸಹಜವಾಗಿ ನುಡಿದನಂದೆರೆ-ರಾಜಕುಮಾರನು ಬಂದಿದ್ದನು, ಶಕ್ತಿ
ಯು ಹೆಚ್ಚಿಗೆ ಮಾರಾಡುವ ಅವಶ್ಯಕತೆಯೇ ಉಳಿಯಲಿಲ್ಲ. ಮಂದಿರ ಕ್ಕೆ ಈ ವರೆಗೂ ಆಕೆಯು ಬಾರದಿರುವ ಕಾರಣವನ್ನು ಯೋಗಿನಿಯು ಈ ಮೊದಲೇ ತಿಳಿದಿದ್ದಳು; ಮತ್ತು ಯಾವ ಕಾರಣದಿಂದಲೋ ಕುಮಾ ರನು ಶಕ್ತಿಯಿಂದೊಡಗೂಡಿ ಅರಮನೆಗೆ ಹೋಗಿರಬಹುದೆಂದೂ ಅವಳು ತರ್ಕಿಸಿದ್ದಳು. ತನ್ನ ತರ್ಕವನ್ನು ಒರೆಹಚ್ಚುವದಕ್ಕಾಗಿಯೇ ಅವ ಳು ಶಕ್ತಿಯನ್ನು ಕುರಿತು--ಕುಮಾರನ್ಯಾರು? ಎಂದು ಕೇಳಿದಳು, ಶಕ್ತಿ- ಬಾಲಸನಾದ ಗಣೇಶದೇವನು, ದಿನಾಪುರದ ಈಗಿನ ಅರಸನು. ಯೋಗಿನಿ-ಹಾಗಾದರೆ, ಸೂರ್ಯದೇವನು ಇಷ್ಟರಲ್ಲಿ ಮರ ಣ ಹೊಂದಿದನೇನು? ಶಕ್ತಿಯು ಗೋಣನ್ನು ಅಲ್ಲಾಡಿಸಿ ಸಮ್ಮತಿಯನ್ನು ಸೂಚಿಸಿ ದಳು. ಯೋಗಿನಿಯು ಗಾಬರಿಗೊಂಡು ಮೆಲ್ಲಗೆ ಓಂ ಶಾಂತಿಃ ಓಂ ಶಾಂತಿ! ಎಂದು ನುಡಿದು ಸುಮ್ಮನೆ ಕುಳಿತುಬಿಟ್ಟಳು. ಶಕ್ತಿ-ತಾವು ಅವರನ್ನು ಬಲ್ಲಿರಷ್ಟೇ? ಎಂದು ಕೇಳಿ ದಳು. ಅದಕ್ಕೆ ಯೋಗಿನಿಯು ಏನೂ ಉತ್ತರಕೊಡದೆ-ತಂಗೀ, ನೀನು ಹರೆಯದ ಹುಡುಗಿ, ರಾಜಕುಮಾರನು ನಿನ್ನ ಬಾಲಸಖನಾಗಿ ದ್ದರೂ ಈಗ ಅವನೊಡನೆ ಹೀಗೆ ನಡುರಾತ್ರಿಯವರೆಗೆ ಏಕಾಂತ