ರ್ಶಿ ಶಕ್ತಿವಯೋ * ಸ್ವಾರನೀವು ಈ ವಿಷಯದಲ್ಲಿ ರಾಜಾಜ್ಞೆಯನ್ನು ಭಂಗ ಮಾಡುತ್ತಿರುವಿರಿ, ರಾಜೀಖುಷಿಯಿಂದ ನೀವು ಅವಳನ್ನೊಪ್ಪಿಸದಿ ದ್ದರೆ, ನಾನು ಆಕೆಗಾಗಿ ಈ ಗೃಹಪ್ರವೇಶಮಾಡಬೇಕಾಗುತ್ತದೆ. ನೋಡಿಕೊಳ್ಳಿರಿ ಮುಂದಿನ ಪರಿಣಾಮವನ್ನು, ಯೋಗಿನಿ-ಪ್ರಜೆಗಳನ್ನು ಕಾಪಾಡುವದು ರಾಜನ ಆದ್ಯಕ ರ್ತವ್ಯವು. ಪ್ರಜೆಗಳ ಮೇಲೆ ಜುಲುಮೆ-ಅತ್ಯಾಚಾರ ಮಾಡುವದು ರಾಜಧರ್ಮವಲ್ಲ. ನಾನು ಅವಳನ್ನು ಕೊಡುವದಿಲ್ಲ, ಹೋಗು, ಹೀಗೆಂದು ನೀನು ಸುಲ್ತಾನಶಹನಿಗೆ ಅರುಹು, ಸ್ವಾರ-ತಾಯಿ, ಒಳ್ಳೇ ಮಾತಿನಿಂದ ನೀನು ಆ ಯುವತಿ ಯನ್ನೊಪ್ಪಿಸಿಬಿಡು. ಇಲ್ಲದಿದ್ದರೆ ರಾಜದ್ರೋಹಿಯೆಂದು ನಿನ್ನನ್ನೇ ಪ್ರತಿಬಂಧಿಸುವ ಪ್ರಸಂಗ ಬಂದೀತು, ಎಂದು ನುಡಿದು ಸ್ವಾರನು ಕುದುರೆಯಿಂದಿಳಿದನು. ಅದನ್ನು ಕಂಡು ಯೋಗಿನಿಯು ವಿದ್ಯು ದ್ವೇಗದಿಂದ ಆ ಮಂದಿರದ ಹಿಮ್ಮಗ್ಗಲಿರುವ ಕಾಲಿಯ ಗುಡಿಗೆ ಹೊರ ಟಳು. ಆದರೆ ಅಲ್ಲಿ ಶಕ್ತಿಯು ಯಾವನೋ ಒಬ್ಬ ಯವನ ರಾಜ ಪ್ರತ್ರನ ಕೈಯಲ್ಲಿ ಕೈಯಿಕ್ಕಿ ನಿಂತದ್ದು ಕಂಡಿತು. ಕೂಡಲೆ ಯೋ ಗಿನಿಯು ಹೌಹಾರಿ-ಶಕ್ತಿ, ಇದೇನು? ಎಂದು ಕೇಳಿದಳು. “ಈ ಯುವರಾಜ ಗಾಯಸುದ್ದೀನನೇ ನನ್ನ ವಿವಾಹಿತ ಸತಿಯು ಎಂದು ಶಕ್ತಿಯು ನುಡಿದಳು.
- ಆಯಿತು, ಯೋಗಿನಿಯು ಚಿತ್ರಪಟದೊಳಗಿನ ಗೊಂಬಿಯಂತೆ ಸುಮ್ಮನೆ ನಿಂತುಬಿಟ್ಟಳು. ಸುಲ್ತಾನ ಪುತ್ರ ಗಾಯಸುದ್ದೀನನು ಶಕ್ತಿಯನ್ನು ಕರಕೊಂಡು ಅರಣ್ಯದಲ್ಲಿ ಗುಪ್ತನಾದನು. ಯೋಗಿ ನಿಯು ವಿಸ್ಮಯದಿಂದ ವಿಚಾರಮಗ್ನಳಾದಳು. ಬಹಳ ಹೊತ್ತಾ ದರೂ ಆಕೆಯ ದೇಹವು ಲವಮಾತ್ರವಾದರೂ ಚಲಿಸಲಿಲ್ಲ. ನಿಂತ ಲ್ಲಿಯೇ ಆಕೆಗೆ ಸಮಾಧಿಯು ಹತ್ತಿದಂತಾಯಿತು! ಕೆಲಹೊತ್ತಿನ
ಶ ob