Lo ಸ ಚಂದ್ರ, ಮೇಲೆ ಯೋಗಿನಿಯನ್ನು ಬಂಧಿಸಿಕೊಂಡು ಆ ಸ್ವಾರನು ಬಾದಶಹನ ಬಳಿಗೆ ಬಂದನು. ತನ್ನ ಹಿರಿಯ ಮಗನಾದ ಗಾಯಸುದ್ದೀನನೇ ತನ್ನ ಇಚ್ಛಿತ ಪಾತ್ರವನ್ನು -ಶಕ್ತಿಮಯಿಯನ್ನು ಹರಣಮಾಡಿಕೊಂಡು, ಅರಣ್ಯದಲ್ಲಿ ಗುಪ್ತನಾದನೆಂಬ ಸುದ್ದಿಯು ಬಾದಶಹನಿಗೆ ತಿಳಿಯಲು ಅವನು ಕ್ರೋಧದಿಂದ ಉರಿಯ ಹತ್ತಿದನು. ಸುಲ್ತಾನನು ತನ್ನ ಮಗನ ವಿಷಯಕ್ಕೆ ಅಂತರಂಗದಲ್ಲಿ ದ್ವೇಷವನ್ನು ತಾಳಿ, ಅವನನ್ನು ಹಿಡಿದು ಶಿಕ್ಷಿಸುವದನ್ನು ಗೊತ್ತುಪಡಿಸಿದರು. ಬಳಿಕ ಅವನು ಗಾ ಯಸುದ್ದೀನನನ್ನು ಹುಡುಕಿ ಹಿಡತರಬೇಕೆ' '೦ದು ಸೈನಿಕರಿಗೆ ಆಜ್ಞಾ ಪಿಸಿದನು. ಕೂಡಲೆ ಸೈನಿಕರು ತಂಡತಂಡಾಗಿ ಆ ಅರಣ್ಯವ ನೆಲ್ಲ ಸುತ್ತ ಹತ್ತಿದರು. ಆ ಸೈನ್ಯದ ಡಂಗುರದವರು ಆಗಾಗ್ಗೆ ಡಂಗುರ ಬಾರಿಸುತ್ತ-ನಬಾಬ ಗಾಯಸುದ್ದೀನನು ರಾಜದ್ರೋ ಹಿಯೊಗಿರುವನು. ಸುಲ್ತಾನಶಹನ ಅಪ್ಪಣೆಯ ಪ್ರಕಾರ ಅವನೊಡನೆ ಯುದ್ಧವಾಗತಕ್ಕದ್ದದೆ, ದಂಡಿನಲ್ಲಿ ಸೇರಲಿಚ್ಚಿಸುವವರು ಬೇಗನೆಸೇರಿ ಕೊಳ್ಳಿರಿ ಎಂದು ಸಾರುತ್ತಿದ್ದರು,
- ಡಂಗುರದ ಈ ಸಪ್ಪಳವು ಅದೇ ಅರಣ್ಯದ ಒಂದು ಭಾಗದಲ್ಲಿ ತನ್ನ ಚಿಕ್ಕ ದಂಡಿನೊಡನೆ ತಳವೂರಿದ್ದ ಒಬ್ಬ ವ್ಯಕ್ತಿಗೆ ಅಸ್ಪಷ್ಟವಾಗಿ ಕೇಳಿಸಿತು. ಆಗ ಆ ವ್ಯಕ್ತಿಯು ಬಾದಶಹನ ದಂಡು ಸಾಗಿದ್ದ ಮಾರ್ಗಕ್ಕೆ ಬಂದು ಡಂಗುರದವನನ್ನು ಕುರಿತು-ಅದೇನು ಡಂಗುರ ಹೊಡೆಯುವೆ? ನಬಾಬ ಗಾಯಸುದ್ದೀನನು ಏನು ತಪ್ಪು ಮಾಡಿ .ರುವನು? ಎಂದು ಕೇಳಿದನು.
“ನಿನ್ನೆ ಅಸ್ರೋತ್ಸವದಲ್ಲಿ ಯಾವ ಹಿಂದೂ ಲಾವಣ್ಯವತಿ ಯನ್ನು ಬಾದಶಹನು ಮಿಕಿ ಮಿಕಿ ನೋಡಿದ್ದನೋ ಇ೦ದು ಅವಳೊ ಡನೆ ಅವನು ವಿವಾಹ ಬೆಳಿಸಬೇಕೆಂದಿರಲು, ನವಾಬ ಗಾಯಸುದ್ದಿ ನನು ಆ ರಮಣಿಯನ್ನು ತನ್ನವಳನ್ನಾಗಿ ಮಾಡಿಕೊಂಡು ರಾಜ