ಪುಟ:ಶಕ್ತಿಮಾಯಿ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫ aÀ– – 4 - ಈ -4-lan ಶಕ್ತಿಮಯಿ. ಚುಂಬಿಸಿನು. ಆಗ ನಿರೂಪಮೆಯು ಅವನ ಎದೆಯಮೇಲೆ ತನ್ನ ಶಿರವನ್ನೊ ರಗಿಸಿಕುಮಾರ, ಶಕ್ತಿಯು ಇಲ್ಲಿ ಇದ್ದರೆ ನೀನು ನಿಶ್ಚಯ ವಾಗಿ ನನ್ನನ್ನು ಮರೆತುಬಿಡುತ್ತಿದ್ದೀಯಲ್ಲವೆ? ಎನ್ನ ಲು, ಕುಮಾರನ ಚಿತ್ರವು ಮತ್ತೆ ಶಕ್ತಿಯನ್ನು ಆವರಿಸಲು, ಅವನು ಪುನಃ ಚಿತ್ರದೊ ಳಗಿನ ಗೊಂಬೆಯಂತೆ ವಿಚಾರಮಗ್ನನಾದನು. ಹೀಗೆ ಕುಮಾರ ಗಣೇಶದೇವನು ಶಕ್ತಿಯವಿರಹತಾಪದಿಂದ ಅಂದು ಬೆಂದುಬೆಂಡಾದನು. ಒಂಬತ್ತನೆಯ ಪ್ರಕರಣ ಮುದಿ ಹುಚ್ಚು! ಹಿಂದೆ ಏಳನೆಯ ಪ್ರಕರಣದ ಕೊನೆಯಲ್ಲಿ ಹೇಳಿದಂತೆ ಬಾದಶ ಹನ ಸೇನಾಪತಿಯಾದ ಆಜೀಮಖಾನನು ಕುಮಾರ ಗಣೇಶದೇವನ ಬಿಡಾರದಿಂದ ಹೊರಟು ನೆಟ್ಟಗೆ ರಾಜದರ್ಬಾರವನ್ನು ಸೇರಿದನು. ಬಾದಶಹನು ಮಗನ ವಿಶ್ವಾಸಘಾತಕತನದ ವಿಚಾರವನ್ನು ಮಾಡಿ ಅವನಿಗೆ ವಿಧಿಸಬಹುದಾದ ಶಿಕ್ಷೆಯನ್ನು ನಿರ್ಧರಿಸುವದಕ್ಕಾಗಿ ಇಂದು ದರ್ಬಾರವನ್ನು ಕೂಡಿಸಿದ್ದನು. ಆಜೀಮಖಾನನು ಆ ದರ್ಬಾರದಲ್ಲಿ “ಕುಮಾರ ಗಣೇಶದೇವನು ಜಾದಶಹನಿಗೆ ಸಹಾಯಮಾಡುವದೊ, ಟೈಗೇ `ಉಳಿದು, ಅವನು ನಮ್ಮ ಸೈನಿಕರಿಂದ ಪ್ರತಿಬಂಧಿಸಲ್ಪಟ್ಟ ಸನ್ಯಾಸಿನಿಯನ್ನು ಮುಕ್ತ ಮಾಡಿರುವನು, ಎಂದು ತಿಳಿಸಿದನು. ಇದನ್ನು ಕೇಳಿ ಬಾದಶಹನು ಸಿಟ್ಟಿನಿಂದ ಉರಿಯಹತ್ತಿದನು. ಆಗ ಅವನು ನುಡಿದನೇನಂದರೆ-ಸೇನಾಪತೀ, ಅಸನದ ಮೇಲೆ ಅಪಮಾನವು; ನಮ್ಮ ಅಪ್ಪಣೆಯ ವಿನಃ ಸನ್ಯಾಸಿನಿಯನ್ನು ಬಂಧಮುಕ್ತ ಮಾಡಿದ ಆ ಕುಮಾರಗಣೇಶದೇವನು ಅಪರಾಧಿಯಲ್ಲವೆ? ಅಂಥವನನ್ನು ನೀನು