ಪುಟ:ಶಕ್ತಿಮಾಯಿ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

mm me, + ಶ್ರೀ

  1. , ಚಂದ್ರಿಕೆ ಹೇಳಿ ಅದರಂತೆ ಮಾಡಿದರು. ಬಳಿಕ ಮತ್ತೊಬ್ಬ ದಾಳಿಯು, ಬೇಗಂಸಾಹೇಬ, ತಮಗೆ ಉಟ್ಟು ಕೊಳ್ಳಲಿಕ್ಕೆ ಯಾವ ವಸ್ತ್ರವನ್ನು ತರಲಿ; ಎಂದು ಕೇಳುತ್ತ ನಾನಾ ವಿಧದ ವಸ್ತ್ರಗಳನ್ನು ತೋರಿಸುತ್ತಿದ್ದಳು. ಆಗ ಶಕ್ತಿಮಯಿಯು ಅವುಗಳೊಳಗಿಂದ ಪಚ್ಚದಂಚಿನ ಒಂದು ಮನೋಹರವಾದ ಶುಭ್ರ ಪತ್ರಲವನ್ನೂ ಬಂಗಾ ರಬಳಿಯ ಒಂದು ಸುಂದರ ಕುಪ್ಪಸವನ್ನೂ ತನಗಾಗಿ ತೆಗೆದಿಡಲಿಕ್ಕೆ ಸೂಚಿಸಿದಳು. * ಸ್ನಾನಾನಂತರ ಶಕ್ತಿಯು ಆ ವಸ್ತ್ರಗಳನ್ನು ಧರಿಸಿಕೊಂಡು ಹಾಸಿಗೆಯ ಮೇಲೆ ಲೇಡಿಗಾತು ಕುಳಿತು ವಿಶ್ರಾಂತಿಯನ್ನು ಹೊoದುತ್ತಲಿದ್ದಳು. ಸಖಿಯರಲ್ಲಿ ಕೆಲವರು ಆಕೆಯ ಕೂದಲುಗಳನ್ನು ಒರಿಸುತ್ತಿದ್ದರು. ಕೆಲವರು ಅವಳ ಕೈ ಕಾಲುಗಳನ್ನು ಒರಿಸುತ್ತಿದ್ದರು. ಬೇರೆ ಕೆಲವರು ಅವಳ ಕಾಲುಗಳಿಗೆ ಮದರಂಗಿಯ ಹೂಗಳ ಬಣ್ಣದಿಂದ ಜಾವಡಿಗೆಯನ್ನು ಹಚ್ಚುತ್ತಿದ್ದರು. ಮತ್ತೆ ಕೆಲವರು ಆತ್ತರ-ಗುಲಬಗಳನ್ನು ಆಕೆಗೆ ಹಚ್ಚುತ್ತಿದ್ದರು. ಇಬ್ಬ ರು ದಾಸಿಯರು ಬಳಿಯಲ್ಲಿಯೇ ಇದ್ದ ಗಹನವಾದ ತಿಜೋರಿಯೊಳ ಗಿಂದ ಅಮೂಲ್ಯ ವಸ್ತ-ಒಡವೆಗಳನ್ನು ತೆಗೆತೆಗೆದು ಶಕ್ತಿಮಯಿಗೆ ಇಡುತ್ತಿದ್ದರು. ಶಕ್ತಿಯು ಈ ಪ್ರಕಾರದ ಮಣಿರತ್ನಗಳ ಅನುವ ಮ ಕಾಂತಿಯನ್ನು ಎಲ್ಲಿಯೂ ನೋಡಿದ್ದಿಲ್ಲ. ವಸ್ತ- ಒಡವೆಗಳನ್ನು ಧರಿಸುವದಾದ ಬಳಿಕ ಶಕ್ತಿಯು ಪುನಃ ಆ ಕನ್ನಡಿಯ ಮಹಾಲಿಗೆ ಬಂದಳು, ನವಾಬ ಗಾಯಸುದ್ದೀನನು ಇಷ್ಟರಲ್ಲಿ ಅಲ್ಲಿಗೆ ಬಂದು ಕುಳಿತಿದ್ದನು. ಅವನ ಎದುರಿಗಿನ ಕನ್ನಡಿಗಳಲ್ಲಿ ಹಿಂದಿನಿಂದ ಬರುವ ಸಾಳಂಕೃತ ಶಕ್ತಿಯ ಮೂರ್ತಿಯು ಪ್ರತಿಬಿಂಬಿತವಾಯಿತು. ಆ ಪ್ರತಿಛಾಯೆಯನ್ನು ನೋಡಿ ಶಕ್ತಿಯು ತನ್ನನ್ನು ತಾನೇ ಗುರ್ತಿಸದಾದಳು. ಇದಾವ ಭುವ ಶ ಮೊ ಹ ಕ ಮ ತಿ೯ ಯು!