ಪುಟ:ಶಕ್ತಿಮಾಯಿ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಶವಯಿ, ರ್೮ ಆದರೆ ಶಕ್ತಿಮಯಿ, ಈ ಸುಂದರ ರೂಪವನ್ನು ನೀನು ಇಲ್ಲಿ ಯಾರಿಗೆ ತೋರಿಸ ಬಂದಿರುವೆ? ಯಾರ ಸಲುವಾಗಿ ಈ ನಿನ್ನ ಸಿದ್ಧತೆಯು? ಹಾಗು ಯಾವ ತರದ ಸುಖ ಭೋಗಿಸಬೇಕೆನ್ನು ವೆ? ಮುಂತಾದ ವಿಚಾರಗಳು ಅವಳ ಮನಸ್ಸಿನಲ್ಲಿ ಮನೆ ಮಾಡಲು, ಒಂದೊಂದೇ ದುಃಖಾಶ್ರುಗಳು ಅವಳ ಕಣ್ಣುಗಳಿಂದ ಬಳ ಬಳ ಉದುರ ತೊಡಗಿದವು! ಹಾಯ್! ಸುಖವೆಲ್ಲಿಯದು? ಎಲ್ಲಿಯ ವರೆಗೆ ಗಣೇಶದೇವನು ಅವಳ ಪರಿಣತ ಪತಿಯಾಗುವದಿಲ್ಲವೋ, ಅಲ್ಲಿಯವರೆಗೆ ವಿಪುಲ ದ್ರವ್ಯಐಶ್ವರ್ಯ-ಅಧಿಕಾರಗಳಿಂದ ಆ ಅತ್ಯಂತ ಮಾನೀ ಸ್ವಭಾವದ ಶಕ್ತಿಮ ಯಿಗೆ ಸುಖವೆನಿಸಬಹುದೇ? ದುಡ್ಡಿನ ಸುಖವು ಯಾರಿಗೆ? ಯಾರು ಕೇವಲ ದ್ರವ್ಯಲೋಭಕ್ಕಾಗಿ, ಸುಖದ ಆಶೆಗಾಗಿ ಸ್ವದೇಶವನ್ನು ವಿಕ್ರ ಯ ಮಾಡಿ ಕೊಳ್ಳುವಂಥ ಗರ್ಹಣೀಯ ಕೆಲಸಕ್ಕೆ ಕೈ ಹಾಕಿ ಆತ್ಮ ಸನ್ಮಾನವನ್ನು ಕೂಡ ಮಣ್ಣು ಪಾಲು ಮಾಡಲು ತತ್ಪರರಾಗುವರೋ ಅವರಿಗೇ ಆ ನಿರ್ಜಿವ ದುಡ್ಡಿನ ಸುಖವು; ಆದರೆ ಶಕ್ತಿಯು ದುಡ್ಡಿನ ಲೋಭದಿಂದ ನವಾಬನ ಕೈ ಹಿಡಿದಿದ್ದಳೇನು? ಇಲ್ಲ, ಹಾಗಿಲ್ಲ; ನವಾ ಬನನ್ನು ಕೈವಶಮಾಡಿಕೊಂಡು ಅವನಿಂದಕುಮಾರ ಗಣೇಶದೇವನ ಹಾಗು ಅವನ ತಾಯಿಯ ಸೇಡು ತೀರಿಸಿಕೊಳ್ಳುವ ಹವ್ಯಾಸಕ್ಕಾಗಿ• ಅವಳು ಪ್ರಯತ್ನ ಪಡುತ್ತಿದ್ದಳು. ಆದರೆ ಈಗ ಸೇಡಿನ ಭ್ರಾಂತಿಯಡಗಿ ಆತ್ಮ ಮರ್ಯಾದೆಯು ಕೂಡ ಲೋಪವಾಗುವ ಪ್ರಸಂಗವು ಅವಳ ಕಣ್ಣಿಗೆ ಕಟ್ಟಲು ಅವಳು ತನ್ನನ್ನು ಕುರಿತು- ಶಕ್ತಿ, ಇದೇ ಏನು ನಿನ್ನ ಸೇಡು ತೀರಿಸಿಕೊಳ್ಳೋಣವು? ಎರಡನೆಯವರನ್ನು ಕೊಲ್ಲಲಿಚ್ಚಿಸಿದ ನೀನು ಸ್ವತಃ ಸಾಯುತ್ತಿರುವಿಯಲ್ಲ' ಎಂದು ಹಿಯ್ಯಾಳಿಸಿಕೊಂಡಳು. ಆಕೆಯು ಈಗ ಒಬ್ಬ ಮುಸಲ್ಮಾನ ನವಾಬನ ಹೆಂಡತಿಯಾದ್ದರಿಂದ ಥಟ್ಟನೆ ಹೋಗಿ ಸ್ವಜನರನ್ನು ಕೂಡ ಕಡುವಂತಿದ್ದಿಲ್ಲ. ಅದ ರಿಂದ ಪಿಶಾಚಿಯಂತೆ ಅವಳ ಮನಸ್ಸು ಚಂಚಲವಾಯಿತು, ಕೆಲ ಹೊ