ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'94 ಶ್ರೀಮದ್ರಾಮಾಯಣವು [ಸರ್ಗ' . ಆದರೆ ಎಂದಿಗೂ ಸತ್ಯವನ್ನು ಬಿಡತಕ್ಕವನಲ್ಲ. * ಬಹುಶ್ರುತರೆನಿಸಿಕೊಂಡಿ ರುವ ವೃದ್ಧರಾದ ಬ್ರಾಹ್ಮಣರಲ್ಲಿಗೆ ತಾನಾಗಿ ಹೋಗಿ, ಅವರನ್ನು ಉಪಾಸನೆಮಾಡಿ, ಸಾರಗ್ರಹಣವನ್ನು ಮಾಡತಕ್ಕವನು. ಇದರಿಂದಲೇ ಆತ ತಿಗೆ ಮಹಾಗುಣಾಡ್ಯನೆಂಬ ಕೀರ್ತಿಯೂ, ಬಹಳ ಪರಾಕ್ರಮಿಯೆಂಬ ಖ್ಯಾ ತಿಯೂ, ಶತ್ರುಗಳನ್ನ ಡಗಿಸತಕ್ಕ ಮಹಾವೀರವೂ ದಿನದಿನಕ್ಕೆ ಹೆಚ್ಚುತ್ತಿರು ವುದು. ದೇವತೆಗಳೂ, ರಾಕ್ಷಸರೂ, ಮನುಷ್ಯರೂ ಉಪಯೋಗಿಸತಕ್ಕ ಅ ಸವಿಸೇಷಗಳೆಲ್ಲವನ್ನೂ ಆತನು ಚೆನ್ನಾಗಿ ತಿಳಿದಿರುವನು. ಆತನು+ಸಾಂಗವಾ ಗಿ ವೇದಾಧ್ಯಯನವನ್ನು ಮಾಡಿ, ಅನೇಕವ್ರತಗಳನ್ನು ನಡೆಸಿ, *ಸಮಾವರ್ತ ನವನ್ನು ಹೊಂದಿರುವನು. ಗಾನಶಾಸ್ತ್ರದಲ್ಲಿ ಈ ಲೋಕದಲ್ಲಿ ಆತನನ್ನು ಮೀರಿಸಿದವರೊಬ್ಬರೂ ಇಲ್ಲ. ಈತನ ಮಾತೃಪಿತೃವಂಶಗಳೆರಡೂ ಬಹಳ ಪರಿಶುದ್ಧವಾದುವು. ಬಹಳ ಸಾಧುವೆನಿಸಿದ್ದರೂ ದೈನ್ಯವನ್ನು ತೋರಿಸದ 1.. . ಯೋಚಿತವಾಗಿಮಾತ್ರವೇ ರಾಮನು ಈ ನಿಯಮಂದಿರ ಮಾತಾಡತಕ್ಕವನಲ್ಲ. (ಭೂತಾನಾಂ) ಸಾಮಾನ್ಯವಾಗಿ ಯಾವಪ್ರಾಣಿಗಳಲ್ಲಿಯೂ ಈ ನಿಯಮವನ್ನೇ ಆನು ಸರಿಸಿ ಮಾತಾಡುವವನೆಂದು ಭಾವವು, (ರಾಘವ:) ರಘುವಂಶದಲ್ಲಿ ಹುಟ್ಟಿದವರಿಗೆ, ಪ್ರಿಯವಾಗಿಯೂ, ಸತ್ಯವಾಗಿಯೂ ಮಾತಾಡುವುದೇ ಕುಲಕ್ರಮಾಗತವಾದ ಧರ ವೆಂದು ಘರಾಕ್ಷಸಸಂವಾದಗಳಲ್ಲಿ ವ್ಯಕ್ತವಾಗಿರುವುದರಿಂದ, ಆ ವಂಶದವನಾದ ಈತ ನಿಗೆ ಅದು ಸಹಜಧರವೆಂದೂ ಭಾವವು.

  • ಇಲ್ಲಿ ಬಹುಶ್ರುತರೆಂದರೆ ಅನೇಕಾಚಾರರಲ್ಲಿ, ಅನೇಕ ಕಾಲಗಳವರೆಗೆ, ಅನೇಕ ಶಾಸ್ತ್ರಗಳನ್ನು, ಅನೇಕ ವಿಧವಾಗಿ ಕೇಳಿ ತಿಳಿದವರೆಂದೂ, ವೃದ್ದರೆಂದರೆ, ಜ್ಞಾನವೃದ್ಧ ರಾಗಿಯೂ, ವಯೋವೃದ್ಧರಾಗಿಯೂ, ಅನುಭವವೃದ್ಧರಾಗಿಯೂ ಇರುವವರೆಂದೂ ಅರವು. - + (“ಶಿಕ್ಷಾ ವ್ಯಾಕರಣ, ಛಂದೋ ನಿರುಕ್ಕಂ ಜ್ಯೋತಿಷಂ ತಥಾ | ಕಲ್ಪನೆ ಷಡಂಗಾನಿ ವೇದಸ್ಯ” ಎಂಬಂತೆ ಆರು ವೇದಾಂಗಗಳನ್ನು ತಿಳಿದವನೆಂದರು. - + (ವಿದ್ಯಾವ್ರತಸ್ನಾತಃ” ಎಂದರೆ, 'ವೇದವಧೀತ್ಯ ಸ್ನಾಯಾತ ಎಂಬ ಸ್ಮತಿ ಪ್ರಮಾಣದಿಂದ, ಸಮಸ್ತ ವೇದಾಧ್ಯಯನವ್ರತಾಚರಣವಾದಮೇಲೆ ಮಾಡಬೇಕಾದ ಸ್ನಾನ ಕರಗಳನ್ನು ಮಾಡಿದವನೆಂದರು.