ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೩೬ ಶ್ರೀಮದ್ರಾಮಾಯಣವು [sರ್ಗ ೧, ಶಾಲಾಕ್ಷಿಯ ಸಮೀಪಕ್ಕೆ ಸೇರಿಸಬಹುದಲ್ಲವೆ?ವತ್ಸನೆ ! *ಕಾಡಿನಲ್ಲಿ ಪುಷ್ಟಿ ತಗ ಳಾದ ವೃಕ್ಷಗಳಮೇಲೆ ಸೇರಿ ಕೂಗುತ್ತಿರುವ ಈ ಪಕ್ಷಿಗಳ ಧ್ವನಿಯನ್ನು ಕೇಳಿದೆ ಯಾ?ಈ ಧ್ವನಿಯು ಎಷ್ಟು ಮದವರ್ಧಕವಾಗಿರುವುದು ನೋಡು ಇದೋ ಇ ಅಭಮರವು, ಕಾಮಮದದಿಂದ ಅತ್ತಿತ್ತಚದರಿ ಓಡುತ್ತಿರುವಪ್ರಿಯೆಯನ್ನು ಕಾಮಾತುರನಾದ ನಾಯಕನು ಫಕ್ಕನೆ ಹಿಡಿದು ನಿಲ್ಲಿಸುವಂತೆ,ಗಾಳಿಯಿಂದ ಲುಗುತ್ತಿರುವ ಈ ತಿಲಕವೃಕ್ಷದ ಶಾಖೆಯನ್ನು ವೇಗದಿಂದೇರಿ ಹಿಡಿಯುತ್ತಿ ರುವುದನ್ನು ನೋಡು ಎಲೆವನೆ' +ವಿರಹಿಗಳಿಗೆ ವಿಶೇಷವಾಗಿ ಶೋಕವನ್ನು ಹೆಚ್ಚಿಸುವ ಈ ಅಶೋಕವೃಕ್ಷವು ಗಾಳಿಯಿಂದಲುಗುತ್ತಿರುವ ತನ್ನ ಹೂ ಗೊಂಚಲುಗಳಿಂದ, ನನ್ನನ್ನು ಕೈಯಾಡಿಸಿ ಹೀಗಳೆವಂತಿದೆ ನೋಡು ಇದ ನ್ನು ನೋಡಿದರೆ ಈ ವೃಕ್ಷವು ನನ್ನನ್ನು ಕೊಲ್ಲುವುದಕ್ಕಾಗಿ ಮನ್ಮಧನು ಸಮೆ ದಿಟ್ಟಿರುವ ಬಾಣವನ್ನು ನನಗೆ ತೋರಿಸುವಂತಿರುವುದು ಇದೋ ಇಲ್ಲಿ ಪುಷ್ಟಿ ತವಾದ ಮಾವಿನಮರವು, ಪುಷ್ಟಚಂದನಾದಿಗಳಿಂದ ಮೈಯನ್ನಲಂಕರಿಸಿ ಕೊಂಡು ಗರ್ವದಿಂದುಬ್ಬಿ ನಿಂತಿರುವ ಕಾಮುಕನಂತೆ ತೋರುತ್ತಿರುವುದು ನೋಡು ಲಕ್ಷಣಾ' ಈ ಪಂಪಾತೀರದಲ್ಲಿ ಸಾಲಾಗಿರುವ ಚಿತ್ರವಿಚಿತ್ರಗ ಳಾದ ಈ ವನಪರಂಪರೆಗಳಲ್ಲಿ, ಅಲ್ಲಲ್ಲಿ ಎಷ್ಟೋ ಮಂದಿ ಕಿನ್ನರರುಕೊಡ ಸೈ ಚೈಯಿಂದ ವಿಹರಿಸುತ್ತಿರುವರು ನೋಡು ಇದೋ ಇಲ್ಲಿ ಸುತ್ತಲೂ ಸುವಾ ಸನೆಯನ್ನು ಹೊರಡಿಸುತ್ತಿರುವ ತಾವರೆಗಳು ಈ ಸರೋವರದ ನೀರಿನ ಒಂ ದೊಂದು ತರಂಗದಮೇಲೆಯೂ ಕಾಣುತ್ತ, ಒಂದೊಂದಲೆಯಲ್ಲಿಯೂ ಪ್ರತಿ ಬಿಂಬಿಸಿರುವ ಬಾಲಸೂ‌ನಂತಿರುವುದು ನೋಡುಎಲವತ್ರನೆ' ಸರೋವರ ದ ತಿಳಿಸೀರಿನ ಸೊಗಸನ್ನೂ,ಇದರಲ್ಲಿರುವ ಪದ್ಮಸೌಗಂಧಿಕಾರಿಪುಷ್ಪಗಳ ಸ ಮಹವನ,ಇದರಲ್ಲಿ ಕಿವಿಗಿಂಪಾಗಿ ಕೂಗುತ್ತಿರುವ ಹಂಸಕಾರಂಡವಾದಿ

  • ಇದರಿಂದ ಜ್ಞಾನಪ್ರಭನವಾದ ಪರ ಮಪದದಲ್ಲಿ ನಿತ್ಯಮುಕ್ತರು ನಡೆಸತಕ್ಕ ಸಾಮಗಾನವು ಸೂಚಿತವು.

↑ ಇದರಿಂದ ಸಂಸಾರಿಗಳನ್ನುದ್ಧರಿಸದಿರುವ ನನ್ನನ್ನು ಜ್ಞಾನಿಗಳು ಲಜ್ಜಿತನ ಸ್ನಾಗಿ ಮಾಡುವರೆಂದು ಭಾವವು.

  • ಇಲ್ಲಿಂದಮುಂದೆ ಪಂಪೆಯೇ ವಿರಳಾಭಾವದಿಂದ ವರ್ಣಿಸಲ್ಪಡುವುದಾಗಿ ಗ್ರಾಹ್ಯವು,