ಯನ್ನು ನೋಡಿ ! ಅವರು ಓದುವುದು ಬರೆಯುವುದನ್ನೇನೋ ಕಲಿತುಕೊಂಡರು. ಆದರೆ ಲೌಕಿಕವಿದ್ಯೆ ಯಾವುದನ್ನೂ ಕಲಿಯಲು ಅವಕಾಶವಾಗಲಿಲ್ಲ. ಕೊನೆಯವರೆಗೂ “ ಈ ಅಕ್ಕಿ ಬಾಳೆ ಹಣ್ಣು (ಬೇಳೆ ?) ಸಂಪಾದನೆ ಮಾಡುವ ವಿದ್ಯೆ ಏಕೆ ?” ಎಂದು ಹೇಳುತ್ತಿದ್ದರು. ಪುರಾಣ ಪುಣ್ಯಕಥೆಗಳೆಂದರೆ ಕೇವಲ ಆಸಕ್ತಿ; ಅವ್ರಗಳನ್ನು ಹೇಳುತ್ತಿರುವ ಕಡೆಗೆ ಹೋಗಿ ಆದರದಿಂದ ಕೇಳುತ್ತಿದ ರಲ್ಲದೆ ಅವುಗಳನ್ನು ಹೇಗೆ ಹೇಳಿದರೆ ಸ್ವಾರಸ್ಯವಾಗಿರಬಹುದು, ಹೇಗೆ ಹೇಳಿದರೆ ಮನಸ್ಸಿಗೆ ಅ೦ಟಬಹುದು ಎಂಬುದನ್ನು ಚೆನ್ನಾಗಿ ಗಮನಿಸುತ್ತಿದರು. ಅಸಾಧಾರಣವಾದ ಜ್ಞಾಪಕಶಕ್ತಿ ಇದ್ದರಿಂದ ಇವುಗಳ ಬ್ಲೊಂದನ್ನೂ ಮರೆಯದೆ ಮುಂದೆ ಸಮಯೋಚಿತವಾಗಿ, ಶಿಷ್ಟರಿಗೂ ಭಕ್ತರಿಗೂ ಹೇಳುತ್ತಿದ್ದರು. ದೇವರೆಂದರೆ ಮೊದಲಿಂದಲೂ ಕೇವಲ ಭಕ್ತಿ. ದೇವಮೂರ್ತಿಗಳನ್ನು ಮಾಡುವುದೂ ಬರೆಯುವುದೂ ಬಹು ಚೆನ್ನಾಗಿ ಬರುತ್ತಿತ್ತು. ದೇವತೆಗಳ ವೇಷವನ್ನು ಧರಿಸಿ ಬಹು ಚೆನ್ನಾಗಿ ಅಭಿನಯಿಸುವುದಕ್ಕೆ ಬರುತ್ತಿತ್ತು. ಹೇಗೋ ಗೋಸಾಯಿಗಳೂ ಬೈರಾಗಿಗಳೂ ಸನ್ಯಾಸಿಗಳ ಗಂಟು ಬಿದ್ದು ಅವರ ನಡತೆ, ಭಕ್ತಿ, ವೈರಾಗ್ಯ ನಿತ್ಯಾನಿತ್ಯವಸ್ತು ವಿಚಾರ ಮುಂತಾದುವುಗಳೇ ಮಂದಟ್ಟಾಗುತ್ತ ಬಂದುವು. ಜನರ ಒಂದೊಂದು ಮಾತನ್ನೂ ಒಂದೊಂದು ಕಾರವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ, ಒಳ್ಳೆ ಯದು ಕೆಟ್ಟದ್ದು ಎಲ್ಲವನ್ನೂ ಗ್ರಹಿಸುತ್ತಿದ್ದರು. ಇದರಿಂದ ಮುಂದೆ ಭಕ್ತರ ಮನಸ್ಸಿಗೆ ಹಿಡಿಯುವಂತೆ ಬೋಧಿಸುವುದು ಮಾತ್ರವಲ್ಲದೆ, ಹೆಂಗಸರು ಗಂಡಸರನ್ನು ಮೋಹಗೊಳಿಸುವ ರೀತಿ, ಗಂಡಸರು ಹೆಂಗಸರನ್ನು ಮೋಹಗೊಳಿಸುವ ರೀತಿ ಮುಂತಾದುವುಗಳನ್ನು ಸಹಜವಾಗಿರುವಂತೆ ಅಭಿನಯಿಸಿಕೂಡ ತೋರಿಸುತ್ತಿದ್ದರಂತೆ! ಬಾಲ್ಯ ಕಳೆದಮೇಲೆ, ತಂದೆ ತೀರಿಹೋದನು. ಅಣ್ಣನು ಕಲ್ಕತ್ತೆಗೆ ಏರಬೇಕಾಯಿತು. ಅಣ್ಣನ ಹಿಂದೆ ತಮ್ಮನೂ ಬರಬೇಕಾಯಿತು. ಹೊಸದಾಗಿ ಕಟ್ಟಿದ ರಾಣಿರಾಣಿಯ ದೇವಸ್ಥಾನದಲ್ಲಿ ಮೊದಲು
ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೦೨
ಗೋಚರ