ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೮೮ - ಶ್ರೀ ರಾಮಕೃಷ್ಣ ಪರಮಹಂಸರ Qy ಜ್ಞಾನದಾಯಕವಾದ ಗುರುಭಾವವು ಎಂದಿಗೂ ಮಾನುಷಿಕವಲ್ಲ. ಅದು ದೈವಿಕ. ಆದ್ದರಿಂದ ಗುರುವು ಒಬ್ಬನೇ. ಆದರೆ ಆ ಗುರು ಭಾವವು ಮಾತ್ರ ಬೇರೆ ಬೇರೆ ದೇಹಗಳ ಮೂಲಕವಾಗಿ ಪ್ರಕಾಶಿತ ವಾಗಬಹುದು. ಆ ಗುರುಭಾವವು ಯಾವ ದೇಹದ ಮೂಲಕ ವ್ಯಕ್ತ ನಾಗುವುದೋ ಅದನ್ನು ಗುರುವೆಂದು ಕರೆಯುವುದು ವಾಡಿಕೆ. ಆ ಶರೀರವನ್ನು ಅವಲಂಬಿಸಿಕೊಂಡ ಗುರುಪೂಜೆಯನ್ನು ಮಾಡ ಬೇಕು. ಅದೇ ನಮಗೆ ಶ್ರೇಯಸ್ಕರ. ರಾಮಕೃಷ್ಣ ಪರಮಹಂಸರು ಗುರುಗಳಿಗೆ ಬೋಧಿಸಿದುದರಲ್ಲಿ ಹೊಸವಿಷಯವೇನು ? ಯಾರೂ ಹೇಳಿಲ್ಲದ ವಿಷಯವನ್ನು ಅವರೇನು ಹೇ... ದರು? ಎಂದು ಕೇಳಬಹುದು. ಧರ್ಮವಿಚಾರದಲ್ಲಿ ಹೊಸದಾಗಿ ಹೇಳುವುದೇನಿದೆ ? ಎಲ್ಲವೂ ಹಿಂದೆ ರಾಷ್ಟ್ರದಲ್ಲಿ ಉಕ್ತವಾಗಿರುವುದೇ : ಎಲ್ಲವೂ ಹಿಂದೆ ಅವತಾರ ಪುರುಷರು ಬೋಧಿಸಿರುವುದೇ ; “ ನರಿಗಳು ಕೂಗುವುದೆಲ್ಲ ಒಂದೇ ವಿಧ” ವೆಂದು ಪರಮಹಂಸರು ಹೇಳುತ್ತಿದ್ದರು. ಮತಾಪುರುಷರಾದವರು ಎಂದಿಗೂ ರಾಸ್ತ್ರಕ್ಕೆ ವಿರುದ್ಧವಾದ ಅಥವಾ ಹೊರಗಾದ ವಿಷಯಗಳನ್ನು ಬೋಧಿಸುವದಿಲ್ಲ. ವಾಸ್ತಸಂಪ್ರ ರಾಯವನ್ನು ರಕ್ಷಿಸುವುದು ಅವರ ಮುಖ್ಯ ಕರ್ತವ್ಯ. ಅದೇ ಅವರ ಲಕ್ಷಣ. * ಮಹಾತ್ಮರು, ಅವತಾರಮಾಡುವುದು ಶಾಸ್ತ್ರದಲ್ಲಿದೆ ಹೊಸ ವಿಷಯವನ್ನು ಹೇಳುವುದಕ್ಕಲ್ಲ. ಔಾಲಗುಣದಿಂದ ಧರ್ಮದ ಮೇಲೆ ಬಿದ್ದಿರುವ ದೂಳನ್ನು ತೊಡೆದು, ದೇಶಕಾಲ ಮುಂತಾದುವು ಗಳಿ೦ದ ಬದಲಾಯಿಸಿರುವ ನಮ್ಮ ಮನೋಭಾವಗಳಿಗೆ ತಕ್ಕಂತೆ ಆ ಹಳೆಯ ವಿಷಯವನ್ನೇ ವಿವರಿಸಿ ಅದೇ ಸತ್ಯವೆಂದು ಸ್ಥಾಪಿಸುವು ದಕ್ಕೆ; ಆ ಕಾಲದಲ್ಲಿ ಉಂಟಾದ ಧರ್ಮಗ್ಲಾನಿಯ ಮೂಲಕಾರಣ ವನ್ನು ಕಿತ್ತು ಹಾಕಿ ಎಲ್ಲರಿಗೂ ದಾರಿಯನ್ನು ತೋರಿಸಿ ಮೇಲ್ಪಂಕ್ತಿ ಯಾಗಿರುವಂತೆ ತಾವು ಜೀವಿಸಿಕೊಂಡಿದ್ದು ತತ್ಕಾಲಕ್ಕೆ ಅನುಕೂಲ ವಾದ ರೀತಿಯಲ್ಲಿ ಬೋಧಿಸಿ ಹೋಗುವುದಕ್ಕೆ, Tuuu-11- 17 Cf. I have come to fulfil and not to destroy, Christ.