ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೯೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಚರಿತ್ರೆ ೭೭ ಅವರ ಆದರ್ಶ ಸ್ವರೂಪವಾದ ಸಾಂಸಾರಿಕ ಜೀವನ ಮುಂತಾದ ವಿಚಾರಗಳು ಕೇವಲ ಉಪಯುಕ್ತವಾಗಿದ್ದರೂ ಗ್ರಂಥವಿಸ್ತಾರ ಭಯ ದಿಂದ ಅವನ್ನು ಇಲ್ಲಿ ಬರೆಯಲು ಹಿಂತೆಗೆಯುವವು. “ ಶ್ರೀ ಶ್ರೀರಾ ಮಕೃಷ್ಣ ಲೀಲಾಪ್ರಸಂಗ” ವನ್ನು ಓದಿ ಪಾಡಕರು ಅವೆಲ್ಲವನ್ನೂ ತಿಳಿದುಕೊಳ್ಳಬಹುದು. ಚೋಪ್ರ ಬಹುಳ ಅಮಾವಾಸ್ಯೆ. ಆ ದಿನ ಜಗದಂಬೆಯ ಪೂಜೆಗಾಗಿ ಬೇಕಾದ ಸಾಮಗ್ರಿಗಳೆಲ್ಲ ಸಿದ್ಧವಾಗಬೇಕಾದರೆ ರಾತ್ರಿ ಒಂಬತ್ತು ಗಂಟೆಯಾಯಿತು. ಪರಮಹಂಸರು ಪೂಜೆಮಾಡುವುದಕ್ಕೆ ಮೊದಲು ಶಾರದಾದೇವಿಗೆ ಹೇಳಿ ಕಳುಹಿಸಿದರು. ಆಕೆಯು ಒಂದ ನಂತರ ಪೂಜೆಗೆ ಆರಂಭವಾಗಿ ಕಲಶಾರ್ಚನೆ ಶಂಖಾರ್ಚನೆಗಳು ಮುಗಿದುವು. ಆಗ ಪರಮಹಂಸರು ಶಾರದಾದೇವಿಯನ್ನು ಪೂಜಾ ಸನದ ಮೇಲೆ ಹೋಗಿ ಕುಳಿತುಕೊಳ್ಳುವಂತೆ ಹೇಳಲು ಆಕೆಯ ಭಾವಾವಿಷ ಳಾಗಿ ತಾನು ಏನು ಮಾಡುತ್ತೇನೆಂಬುದೇ ತಿಳಿಯದೆ ಹೋಗಿ ಕುಳಿತುಕೊಂಡಳು. ಪರಮಹಂಸರು ಯಥಾವಿಧಿಯಾಗಿ ಆಕೆಗೆ ಷೋಡಶೋಪಚಾರ ಪೂಜೆಯನ್ನು ಮಾಡಿ ಮಂತ್ರವನ್ನು ಉಚ್ಚರಿಸುತ್ತ ಉಚ್ಚರಿಸುತ್ತ ಸಮಾಧಿಮಗ್ನರಾದರು. ಪತ್ನಿಯನ್ನು ದೇವಭಾವದಿಂದ ಪೂಜೆ ಮಾಡಿದ ಪರಮಹಂಸರ ಮಹತ್ವವನ್ನು ಪಾಮರರಾದ ನಾವು ಗ್ರಹಿಸುವುದು ಹೇಗೆ ? ಸ್ವಲ್ಪ ಹೊತ್ತಾದಮೇಲೆ ಬಾಹ್ಯ ಜ್ಞಾನದ ಚಿಹ್ನೆಗಳು ಕಾಣಿಸ ಲಾರಂಭಿಸಿದುವು. ಎಚ್ಚರವಾದಮೇಲೆ ತಮ್ಮ ಸಾಧನಗಳ ಫಲ ವನ್ನೂ, ಜಪಮಾಲೆ ಮುಂತಾದ ಸಮಸ್ಯಸಾಧನ ಸಾಮಗ್ರಿಗಳನ್ನೂ