ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

FO ಶ್ರೀಮದಾನಂದ ರಾಮಾಯಣ, ಅವನ ಮಂತ್ರಿಯು ಸ್ತ್ರೀವಧಮಾಡಬಾರದೆಂದು ರಾವಣನಿಗೆ ಬಹಳ ಉಪದೇಶಿಸಿ, ಆತನನ್ನು ಹಿಂತಿರುಗಿಸಿದನು. ಆಗ ರಾವಣನು ಶ್ರೀರಾಮನೊಡನೆ ಯುದ್ಧ ಮೂಡ ಲು ನಿಶ್ಚಯಿಸಿದನು. ಇತ್ತಲಾ ಇಂದ್ರಜಿತುವಿನ ದಕ್ಷಿಣ ಹಸ್ತವ ಅವನ ಪತ್ನಿಯಾದ ಸು ಲೋಚನೆಯ ಮನೆಯಲ್ಲಿ ಬಿದ್ದಿತ್ತು. ಅದನ್ನು ನೋಡಿ ಆ ತರುಣಿಯು ಬಹಳ ಶೋಕ ಮಾಡಿದಳು. ಆಗ ಆ ಹಸ್ತವ (ಎಲೈ ಸುಂದರಿಯೇ, ನಾನು ಪರ ಮಾತ್ಮನಿಂದ ಮರಣಹೊಂದಿರುವೆನು, ನನ್ನ ಸಲುವಾಗಿ ನೀನು ದುಃಖಪಡಲು ಕಾರಣವಿಲ್ಲ. ನೀನು ಈಗಲೇ ಶ್ರೀ ರಾಮನ ಬಳಿಗೆ ಹೋಗಿ, ಅಲ್ಲಿ ರುವ ನನ್ನ ಶಿರಸ್ಸನ್ನು ತಂದು ಅದರೊಡನೆ ನೀನು ಸಹಗಮನ ಮಾಡು, ಅಂದರೆ ನಿನಗೆ ನನ್ನ ದರ್ಶನವು ದೊರೆಯುವದು' ಎಂದು ನೆಲದ ಮೇಲೆ ಬರೆಯಿತು. ಇದನ್ನು ಓದಿ ಕೊಂಡು ಸುಲೋಚನೆಯು ಅತ್ತೆ ಮೂವಂದಿರ ಅಪ್ಪಣೆಯನ್ನು ಪಡೆದು, ಶಬಿಕೆಯ ಲ್ಲಿ ಕುಳಿತು, ಶ್ರೀರಾಮನ ಬಳಿಗೆ ತೆರಳಿದಳು, ಆ ತರುಣಿಯು ತನ್ನ ಗಂಡನ ಶಿರ ಸ್ಪನ್ನು ಕೊಡುವಂತೆ ಶ್ರೀ ರಾಮನನ್ನು ಪ್ರಾರ್ಥಿಸಿದಳು. ಬಳಿಕ ಆ ಪತಿವ್ರತೆಯು ಗಂಡನ ಶಿರಸ್ಸನ್ನು ಸ್ವೀಕರಿಸಿ, ಲಂಕೆಗೆ ಪ್ರಯಾಣ ಮಾಡಿದಳು. ಅದೀನಳಾದ ಸುಲೋಚನೆಯು ತನ್ನ ಅಂತಃಪುರವನ್ನು ಪ್ರವೇಶಿಸಿ, ಸಮಸ್ತ ದಾನಧರ್ಮಗಳನ್ನೂ ಸಾಂಗಮಾಡಿಕೊಂಡು, ಪತಿಯ ಶಿರಸ್ಸಿನೊಡನೆ ನಿಕುಂಭಲಿಯ ಬಳಿಯಲ್ಲಿ ರುವ ಯಜ್ಞಕುಂಡದಲ್ಲಿ ಹಾರಿ ಪತಿಯೊಡನೆ ವೈಕುಂಠಕ್ಕೆ ಪ್ರಯಾಣ ಮಾಡಿದಳು.

  • ಇತ್ತಲಾ ರಾವಣನು ಸಮಸ್ತ ಬಂಧುಗಳೊಡನೆ ಬಂದು, ಶ್ರೀ ರಾಮನೊಡನೆ ಯುದ್ಧ ಮಾಡಲು ಸಿದ್ಧನಾದನು. ಆಗ ರಾಮನು ಮಿಕ್ಕ ರಾಕ್ಷಸರನ್ನೆಲ್ಲ ತನ್ನ ಬಾಣ ಗಳಿಂದ ಸದೆಬಡೆದು ಭೂಮಿಯ ಮೇಲೆ ಉರುಳಿಸಿದನು. ಇಷ್ಟರಲ್ಲಿ ರಾವಣನು ಮಯನೆಂಬ ರಾಕ್ಷಸನಿಂದ ಒಂದು ಕೃತ್ರಿಮವಾದ ರಾಮನ ಶಿರಸ್ಸನ್ನು ನಿ ರ್ಮಾಣಮಾಡಿಸಿ, ಸೀತಾದೇವಿಯನ್ನು ಮೋಸಗೊಳಿಸಲುದ್ಯುಕ್ತನಾದನು. ಈ ವಿಷಯವನ್ನು ಮೊದಲೇ ಬ್ರಹ್ಮನು ಸೀತೆಗೆ ತಿಳುಹಿದ್ದನು. ರಾವಣನು ಮಗ ನಿಂದ ನಿರ್ಮಿತವಾದ ಶಿರಸ್ಸನ್ನು ತೆಗೆದುಕೊಂಡು ಹೋಗಿ, ಸೀತಾದೇವಿಯ ಎದುರಿ ಗಿರಿಸಿ “ಎಲೈ ಸೀತೆಯೇ, ಇಕೋ, ನೋಡು, ಶ್ರೀ ರಾಮನ ಶಿರಸ್ಸನ್ನು ತಂದಿರು ವೆನು ಎಂದನುಸೀತೆಯು ಈ ಕೃತ್ರಿಮವನ್ನು ತಿಳಿದವಳಾದ್ದರಿಂದ ಸ್ವಲ್ಪ ಹೊ ತ್ತು ಸುಮ್ಮನೆ ಇದ್ದು “ಎಲೈ ನೀಚನಾದ ಲವಣನೇ, ಇನ್ನು ಸ್ವಲ್ಪ ಕಾಲ ದೊಳಗೆ ಛಿನ್ನ ಗಾದ ನಿನ್ನ ಶಿರಸ್ಸುಗಳನ್ನು ದೈವಯೋಗದಿಂದ ನೋಡುವೆನು