ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಕಾಂಡ. ರ್F --- -- -


ಎಂದಳು. ಈ ಮಾತುಗಳನ್ನು ಕೇಳಿ ಆವಣನು ಬಹಳ ಖಿನ್ನನಾಗಿ ತನ್ನ ಸಭಾ ದುಂಟಪಕ್ಕೆ ಹಿಂತಿರುಗಿದನು. ಇತ್ಯ ಶ್ರೀ ರಾಮನು ಲಂಕಾನಗರಿಯನು, ದಹನ ಮಾಡುವಂತೆ ಬಾ ನರರಿಗೆ ಆಜ್ಞೆ ಮಾಡಿದನು. ರಾಮಚಂದ್ರನ ಅಪ್ಪಣೆಯಂತೆ ಕಪಿವರರು ಲಂ ಕೆಯನ್ನು ಸುಡಲಾರಂಭಿಸಿದರು. ಆಗ ಮೊದಲಿನಂತೆ ನಗರದಲ್ಲಿ ಜನರ ಆ ಆರ್ತಧ್ವನಿಯು ಪ್ರಾರಂಭವಾಯಿತು, ರಾವಣನು ದಿವ್ಯಾಸ್ತ್ರಗಳಿಗಾಗಿ ಗು ಹೆಯಲ್ಲಿ ಯಜ್ಞ ಮಾಡಲು ಹೊರಟನು. ಅಲ್ಲಿ ಆತನು ರಕ್ತದಿಂದನಾನಮಾಡಿ, ರಕ್ತ ವಸ್ತ್ರಗಳನ್ನು ಟ್ಟು, ನರಶಿರಸ್ಸುಗಳ ಮಾಲಿಕೆಯನ್ನು ಕಂಠದಲ್ಲಿ ಧರಿಸಿ, ನರಶಿರ ಸುಗಳನ್ನು ಹೋಮ ಮಾಡುತ್ತ ಬಹಳ ಕ್ರೂರವಾದ ನಿಶ್ಚಯದಿಂದ ಕುಳಿತಿ ದ್ದನು. ಈ ವರ್ತಮಾನವನ್ನು ಕೇಳಿ ವಿಭೀಷಣನು ಶ್ರೀ ರಾಮನಿಗೆ ಬಹಳ ತ್ವರ ಮಾಡುವಂತೆ ಹೇಳಿದನು. ಬಳಿಕ ಶ್ರೀ ರಾಮನ ಆಜ್ಞೆಯಿಂದ ಸಮಸ್ತ ವಾನರರೋ ಲಂಕೆಗೆ ತೆರಳಿದರು. ಆ ಗುಹೆಯ ಬಳಿಯಲ್ಲಿ ಕಾದುಕೊಂಡಿದ್ದ ರಾಕ್ಷಸರನ್ನು ನಾಶಮಾಡಿ, ಆಂಜನೇಯನೇ ಮೊದಲಾದ ಕಪಿಶ್ರೇಷ್ಠರು ಗುಹೆಯ ಬಾಗಿಲನ್ನು ಹುಡುಕಲಾರಂಭಿಸಿದರು. ಆಗ ವಿಭೀಷಣನ ತಂಗೆಯಾದ ಸರಮಾ ಎಂಬ ಸ್ತ್ರೀ ಯು ಆ ಗುಹೆಯ ಬಾಗಿಲನ್ನು ತೋರಿಸಿದಳು. ಆಕ್ಷಣವೇ ವಾನರರು ಒಳಗೆ ಪ್ರವೇಶಿಸಿ, ರಾವಣನನ್ನು ಬಹಳ ಹಿಂಸೆಪಡಿಸಿದರು. ಆದರೂ ರಾವಣನು ಬಹಿ ರ್ಮುಖನಾಗಲಿಲ್ಲ. ಬಳಿಕ ವಾನರರು ಹತ್ತರದಲ್ಲಿದ್ದ ಮಂಡೋದರಿಯನ್ನು ತೊಂದರೆಪಡಿಸಲಾರಂಭಿಸಿದರು. ಆಕೆಯ ಆರ್ತಧ್ವನಿಯನ್ನು ಕೇಳಿ ರಾವಣನು ಬಹಿರ್ಮುಖನಾದನು. ಇದನ್ನು ನೋಡಿ ಸಮಸ್ತ ವಾನರರೂ ಶ್ರೀರಾಮನ ಬಳಿಗೆ ಪ್ರಯಾಣ ಮ ಡಿದರು. ರಾವಣನ ಯಜ್ಞವು ನಷ್ಟವಾಯಿತು. ಅತ್ತಲಾ ಮಂಡೋದರಿಯು ರಾವಣನನ್ನು ಕುರಿತು-ಎಲೈ ವಲ್ಲಭನೆ, ನಮಗೆ ಮೃತ್ಯು-ಸ್ವರೂಪಿಯಾದ ಸೀ ಕಾದೇವಿಯನ್ನು ಶ್ರೀರಾಮನಿಗೆ ಒಪ್ಪಿಸಿಬಿಡು' ಎಂದು ಬಹು ವಿಧವಾಗಿ ಪ್ರಾರ್ಥಿ ಸಿದಳು. ಆದರೂ ಅದಕ್ಕೆ ಪ್ರಯೋಜನವೇನೂ ದೊರೆಯಲಿಲ್ಲ. ಆಗ ರಾವಣ ನು ಮಂಡೋದರಿಗೆ-'ಎಲ್ಲೆ ಪ್ರಿಯಳೇ, ಆ ರಾಮನು ಸಾಕ್ಷಾತ್ ವಿಷು ಎಂದು ನಾನು ಬಲ್ಲೆನು, ಸಾಯುಜ್ಯ ಪದವಿಯನ್ನು ಹೊಂದುವದಕ್ಕಾಗಿ ನಾನು ಆತನ ಹಸ್ತದಿಂದಲೇ ಮೃತನಾಗುವೆನು, ಬಳಿಕ ನೀನೂ ನನ್ನೊಡನೆ ಸಹಗಮನ ಡು' ಎಂದು ಹೇಳಿ, ಕೊನೆಯ ಯತ್ನವನು ದೂಡುವದಕ್ಕೋಸ್ಕರ ರಣರಂಗಕ್ಕೆ