ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಳ ಯಲ್ಲಿ ಹಿಡಿದು ವಣನ ಮೇಲೆ ಬಾಣಗಳ ವೃಷ್ಠಿ ಕರೆದನು - ರಾವಣನ ಶಿರಸ್ಸುಗಳನ್ನು ಶ್ರೀರಾಮನು ಖಂಡಿಸಿದ ಹಾಗೆ ಅವು ಮತ್ತೂ ಚಿಗಿಯ ಹತ್ತಿದವ, ಇದನ್ನು ನೋಡಿ ಶ್ರೀ ಕಾಮನಿಗೆ ಆಶ್ಚರ್ಯವಾಯಿತು, ಆತನು ಇದರ ಕಾರಣವೇನೆಂದು ವಿಭೀಷಣನನ್ನು ಕೇಳಿದನು. ಕವಣನ ಹೃದಯದಲ್ಲಿ ಅಮೃತವಿರುವದೆಂಬ ವರ್ತಮಾನವನ್ನು ವಿಭೀಷಣನಿಂದ ತಿಳಿದು, ದಶರಥಿಯು ಆಸ್ಟ್ರೇಯಾಸ್ತ್ರವನ್ನು ಪ್ರಯೋಗಿಸಿ, ಆತನ ಹೃದಯದೊಳಗಿರುವ ಅಮೃತವನ್ನೆಲ್ಲ ಹೀರಿಸಿದನು. ಬಳಿಕ ರಾವಣನ ಒಂಬತ್ತು ಶಿರಸ್ಸುಗಳನ್ನೂ ಹದಿನೆಂಟು ಹಸ್ತಗಳನ್ನೂ ಛೇದಿಸಿದನು. ಆದರೂ ರಾವಣನು ಎರಡೇ ಭುಜಗ ಳಿಂದ ಬಹಳ ಹೊತ್ತಿನ ವರೆಗೂ ಯುದ್ಧ ಮಾಡಿದನು. ಅನಂತರ ಶ್ರೀ ಕಾಮನು ದಾರುಕನ ಸೂಚನೆಯಂತ ಸಮಯವನ್ನರಿತು, ಬ್ರಹ್ಮಾಸ್ತ್ರದಿಂದ ರಾವಣನ ಶಿರಸ್ಸನ್ನು ಆಕಾಶಕ್ಕೆ ಹಾರಿಸಿದನು. ಆ ಕಾಲದಲ್ಲಿ ರಾವಣನ ಶರೀರ ದಿಂದ ಒಂದು ದಿವ್ಯವಾದ ತೇಜಸ್ಸು ಹೊರಟು, ಶ್ರೀ ರಾಮನಲ್ಲಿ ಅಕ್ಕಹಂದಿ ಶು ಆಗ ಎಲ್ಲ ಕಡೆಗಳಲ್ಲಿ ಜಿಯ ಜಿಯ ಶಬ್ದಗಳು ಕೇಳಿಸಲಾರಂಭವಾದವು. ದೇವತೆಗಳು ಶ್ರೀ ರಾಮನು ಸತ್ರಮಾಡಲಾರಂಭಿಸಿದರು. ಮಹರ್ಷಿಗಳು ಆಶೀರ್ವದಿಸಿದರು. ಗಂಧರ್ವಕಸ್ಯೆಯರು ಶ್ರೀ ರಾಮನ ಮೇಲೆ ಪಷ್ಟವರ್ಷಣ ಮಾಡಿದರು. ಬಳಿಕ ಮಂಡೋದರಿಯು ಪತಿಯ ದೇಹದೊಡನೆ ಅಗ್ನಿ ಪ್ರವೇಶ ಮಾಡಿದಳು ಆ ದಂಪತಿಗಳಿಬ್ಬರೂ ವಿಮಾನಾರೂಢonಗಿ ವೈಕುಂಠಕ್ಕೆ ತೆರಳಿದ ರು. ಶ್ರೀ ರಾಮನು ವಿಭೀಷಣನಿಂದ ರಾವಣನೇ ಮೊದಲಾದ ಬಂಧುಗಳ ಉತ್ತರ ಕ್ರಿಯೆಗಳನ್ನು ಯಥಾಶಾಸ್ತ್ರವಾಗಿ ನಡೆಸಿದನು, ಇಷ್ಟಾದ ಬಳಿಕ ರಾಮಚಂದ್ರನು ವಿಭೀಷಣನಿಗೆ ಲಂಕಾಂಶಜ್ಯದ ಪಟ್ಟಾಭಿಷೇಕ ಮೂಡುವಂತ ಸೌಮಿತ್ರಿಯನ್ನು ಆ ಜ್ಞಾಪಿಸಿದನು. ಆಗ ವಿಭೀಷಣನ ಪಟ್ಟಾಭಿಷೇಕ ಮಹೋತ್ಸವವು ಬಹು ವಿಜೃಂ ಭಣೆಯಿಂದ ನಡೆಯಿತು. ಅನಂತರ ರಾಮನು, ಲಕ್ಷಣ, ಲಂಕೇಶನಾದ ವಿ ಭೀಷಣ, ಸುಗ್ರೀವ, ಅಂಜನೇಯ ಇವರೇ ಮೊದಲಾದ ಪರಿವಾರದೊಡನೆ ಅಶೋ ಕವನವನ್ನು ಪ್ರವೇಶಿಸಿ, ಸೀತಾದೇವಿಗೆ ಸಮಸ್ತ ವೃತ್ತಾಂತವನ್ನೂ ತಿಳುಹಿದನು M