ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜ್ಯ ಕಾಂಡ. G೧೭ d•••• • • • • • • • - -- ... ... . ~- ನೋಡಿಕೊಂಡು ಬಾ' ಎಂದು ಆಜ್ಞಾಪಿಸಿದರು. ಬಳಿಕ ಶಿಷ್ಯಸು ಆಯೋಧ್ಯೆ ಗೆ ಬಂದು ನೋಡುವಷ್ಟರಲ್ಲಿ ಶ್ರೀ ರಾಮನು ಸಭೆಯಲ್ಲಿ ಇಂದ್ರ, ಕಲ್ಪವೃಕ್ಷ ಪುರಿಬಂತಕುಸುಮಗಳು, ಸಭಾಸದರು ಇವರೊಡನೆ ಪರಮ ಸಂತೋಷದಿಂದ ಕುಳಿತಿದ್ದರು. ಇದಲ್ಲವನ್ನೂ ನೋಡಿ, ಶಿಷ್ಯನು ದೂರ್ವಾಸರ ಬಳಿಗೆ ಹೋಗಿ ಸಮಸ್ತ ವಿಷಯವನ್ನೂ ತಿಳುಹಿದನು. ಶಿಷ್ಯನ ಮಾತುಗಳನ್ನು ಕೇಳಿದೊಡನೆ ದೂ ರ್ವಾಸರು ಅಯೋಧ್ಯೆಗೆ ತೆರಳಿದರು. ಶ್ರೀ ರಾಮನು ನದಿಯಿಂದ ಬಂದ ಕುಹ ರ್ಷಿಗಳನ್ನು ಉಚಿತವಾದ ಆಸನದಲ್ಲಿ ಕುಳ್ಳಿರಿಸಿ ಶಿವಪೂಜೆಗಾಗಿ ಪಾರಿಜಾತವನ್ನ ಗಳನ್ನು ಸಮರ್ಪಿಸಿದನು. ಈ ಕಸುಮಗಳನ್ನು ಅದುವರೆಗೂ ಭೂಲೋಕದಲ್ಲಿ ಯಾರೂ ನೋಡಿರಲಿಲ್ಲ, ಬಳಿಕ ದೂರ್ವಾಸದ ವಿಧ್ಯುಕ್ತವಾದ ಕ್ರಮದಿಂದ ಶಿವಪೂಜೆಯನ್ನು ನೆರವೇರಿಸಿದರು. ಶ್ರೀ ರಾಮನು ಸಮಸ್ತ ಭೋಜನಕದಾರ್ಥ ಗಳನ್ನು ಸಿದ್ಧ ಪಡಿಸುವಂತೆ ಸೀತಾದೇವಿಗೆ ಆಜ್ಞಾಪಿಸಿದನು, ಆ ಪತಿವ್ರತೆಯು ಶುದ್ಧ ವಸ್ತ್ರಗಳನ್ನು ಧರಿಸಿ ಮಂಗಳದ್ರವ್ಯಗಳಿ೦ದ ಕಲ್ಪವೃಕ್ಷವನ್ನು ಪೂಜಿಸಿ, ಭಕ್ಕೆ ಭೋಜ್ಯಗಳನ್ನು ಕೊಡಬೇಕೆಂದು ಪ್ರಾರ್ಥನೆ ಮಾಡಿದಳು, ಆ ಕಲ್ಪವೃಕ್ಷವು ನಾನು ವಿಧವಾದ ಸುವರ್ಣ ಪಾತ್ರೆಗಳನ್ನೂ, ಭಕ್ಷ್ಯಭೋಜ್ಯಗಳನ್ನೂ ಲೆಣ್ಣವಿಲ್ಲದಂತೆ ಸೀತೆ ದೇವಿಗೆ ಸಮರ್ಪಿಸಿತ್ತು. ಬಳಿಕ ದೂರ್ವಾ ಸರೇ ಮೊದಲಾದ ಸಮಸ್ತ ಋಷಿಗಳೂ ಭೋಜನಕ್ಕೆ ಕುಳಿತರು. ಅಷ್ಟು ಜನರಿಗೂ ಯಾವ ಪದಾರ್ಥವು ಕಡಿಮೆಯ ಗದಂತೆ ಕಲ್ಪವೃಕ್ಷವು ಆಗಾಗ್ಗೆ ಹೊಸಹೊಸ ಭಕ್ಷ್ಯಭೋಜ್ಯಗಳನ್ನು ಸಿದ್ಧಪಡಿಸುತ್ತಿ ತು, ದೂರ್ವಾಸರು ಅರವತ್ತು ಸಾವಿರ ಶಿಷ್ಯರೊಡನೆ ಪರಮಾನಂದದಿಂದ ಭೋಜನ ಮಾಡಿ, ಕೈತೊಳೆದುಕೊಂಡು ಯೋಗ್ಯವಾದ ಆಸನದ ಮೇಲೆ ಕುಳಿತು ಕಾಮಚಂದ್ರಾ, ನಿನ್ನ ಸಾಹಸದಿಂದ ಕಲ್ಪವೃಕ್ಷ ಪಾರಿಜಾತದ್ರುವಗಳು ಭೂಲೋ ಕಕ್ಕೆ ಬಂದವು' ಎಂದು ನಾನಾ ಪ್ರಕಾರವಾಗಿ ಸ್ತೋತ್ರಮಾಡಿ-ಈ ಪ್ರಭೋ, ಆವೃಕ್ಷಗಳು ನಿನ್ನ ಅವತಾರ ಸಮಾಪ್ತಿಯಾಗುವವರೆಗೂ ಭೂಲೋಕದಲ್ಲಿ ರುವವು. ಮುಂದೆ ನಿನ್ನೊಡನೆ ಸ್ವರ್ಗವನ್ನೇ ಸೇರಲಿ' ಎಂದು ಹೇಳಿ, ಶ್ರೀ ರಾಮನ ಅಪ್ಪಣೆ ಯನ್ನು ಪಡೆದು ತಪೋವನಕ್ಕೆ ಪ್ರಯಾಣ ಮಾಡಿದರು. `ವಿಷ್ಣು ದಾಸರು ರಾಮದಾಸರನ್ನು ಕುರಿತು-ಗುರುಗಳೇ, ಈಶ್ವರನ ಅನ ತರಗಳಲ್ಲಿ ಮು-ಕೃಷ್ಣಾವತಾರಗಳೇ ಪೂರ್ಣಾವತಾರಗಳೆಂದು ಹೇಳಿದರಷ್ಟೇ ಅವೆರಡಲ್ಲಿ ಯಾವ ಅವತಾರವು ಶ್ರೇಷ್ಠವಾದದ್ದು.' ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಆಮದಾಸರು ಹೇಳುತ್ತಾರೆ:-ಎಲೈ ಶಿಷ್ಯನೇ ಕೇಳು ಈ ವಿಷಯದಲ್ಲಿ