ಪುಟ:ಸಂತಾಪಕ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಂತಾಪಕ.

೧೯


ನನ್ನನ್ನು ತಡೆಯುವುದಕ್ಕೆ ನೀನಾರು ? ನಾನು ತೋರಿದಂತೆ ಮಾಡು
ವೆನು " ಎಂದಳು. ಲಜ್ಜೆಯು ಸಾಮಾನ್ಯಳಲ್ಲ. ಅವಳು ಸ್ತ್ರೀಸ್ವಭಾವ
ವನ್ನು ಚೆನ್ನಾಗಿ ಅರಿತವಳು. ಲೋಕದಲ್ಲಿ ಮೂರುಪಾಲು ಜನರು
ಇವಳನ್ನು ಪುರಸ್ಕರಿಸುತ್ತಿರುವರು. ಕೆಲವರಿಗೆ ಇವಳಿಂದ ಹಠಾತ್ತಾಗಿ
ಸಂಘಟಿಸಿದ್ದ ಲಾಭಗಳು ಕೈತಪ್ಪಿಹೋಗಿರುವುವು. ಇನ್ನು ಕೆಲವರಿಗೆ
ಪ್ರಾಣಾಂತಕರವಾದ ವಿಪತ್ತು ಸಂಭವಿಸಿರುವುದು. ಪ್ರಕೃತದಲ್ಲಿ ಕುಮಾರಿ
ಯೇನೋ ಇವಳನ್ನು ಜಯಿಸಿದಳು. ಯುವಕನು ಕುಮಾರಿಯ ಗಲ್ಲವನ್ನು
ಹಿಡಿದಲುಗಿಸಿ " ಕಮಲೆ ! ನನಗೇನುಹೇಳುವೆ ? " ಎಂದನು.
ಕಮಲೆ :- ನಾನೇನುಹೇಳಲಿ ?
ಯುವಕ :- ಕಮಲೆ ! ನೀನು ನನ್ನನ್ನು ಮದುವೆಯಾಗುವೆಯೋ
ಇಲ್ಲವೊ ?
ಈ ಪ್ರಶ್ನೆಗೆ ಕುಮಾರಿಯ ಬಾಯಿಂದ ಉತ್ತರ ಹೊರಡುವುದ
ರೊಳಗಾಗಿ ಅವಳ ದೃಷ್ಟಿಯೂ ಭಾವವೂ ನಾನು ಮೊದಲು, ತಾನು ಮೊದ
ಲೆ೦ದು ಅವಳ ಅಂಗೀಕಾರಗರ್ಭಿತವಾದ ಅಭಿಪ್ರಾಯವನ್ನು ತೋರ್ಪಡಿಸಿ
ದುವು. ಯುವಕನು " ನೀನು ನನ್ನನ್ನು ಯಾರೆಂದು ಭಾವಿಸಿರುವೆ ? "
ಎಂದು ಕೇಳಿದನು.
ಕಮಲೆ :-ಕುಮುದಿನೀಚಂದ್ರನಲ್ಲವೆ ?
ಯುವಕ :- ಆದುದರಿಂದಲೇ ನೀನು ಮದುವೆಯಾಗುವುದಕ್ಕೆ ಒಪ್ಪಿರ
ಬಹುದಲ್ಲವೆ ?
ಕಮಲೆ :- ಅಲ್ಲ.
ಯುವಕ :- ಮತ್ತೇಕೆ ?
ಕಮಲೆ :- ನಿನ್ನನ್ನು ನೋಡಿದುದರಿಂದನನಗೇಕೋ ಬಹು ಸಂತೋಷ
ವುಂಟಾಗಿರುವುದು, ಆದುದರಿಂದ ನಿನ್ನನ್ನೇ ಮದುವೆಯಾಗುವೆನು.
ಯುವಕ :- ಈ ಸಂತೋಷವು ನಿನಗೆ ಹೀಗೆಯೇ ಇರುವುದೇ ?
ಕಮಲೆ :- ಇರಲಾರದೆ ?
ಯುವಕ :- ಒಂದುವೇಳೆ ಕಾರಣಾಂತರದಿಂದ ಈ ಸಂತೋಷವು
ಭಗ್ನವಾಗಿಹೋದರೋ ?