ಪುಟ:ಸಂತಾಪಕ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦

ಕರ್ಣಾಟಕ ಚಂದ್ರಿಕೆ.




ಕಮಲೆ :- ಹಾಗಾಗದಿರುವಂತೆ ಪ್ರಯತ್ನಿಸುವೆನು.
ಯುವಕ :- ನಾನು ಕುಮುದಿನೀಚಂದ್ರನಲ್ಲದಿದ್ದರೋ ?
ಕಮಲೆ :- ನೀನು ಯಾರಾದರೂ ಸರಿ. ನಿನ್ನನ್ನು ಕಂಡರೆ ಬಹು
ಸಂತೋಷವಾಗುವುದು.
ಯುವಕ :- ನನ್ನ ಗುಣದೋಷಗಳನ್ನರಿಯದೆ ಮದುವೆಯಾಗುವೆಯಾ ?
ಕಮಲೆ :- ನಿನ್ನನ್ನು ನೋಡುವುದೂ ನಿನ್ನ ಮಾತುಗಳನ್ನು ಕೇಳು
ವುದೂ ಇದೆಲ್ಲವೂ ನನಗೆ ತಡೆಯಲಾರದಷ್ಟು ಸಂತೋಷವನ್ನುಂಟುಮಾ
ಡುತ್ತಿರುವುವು. ನೀನು ಯಾರಾದರೂ ಸರಿ. ಏನುಮಾಡಿದರೂ ಸರಿ.
ನಿನ್ನನ್ನೇ ಮದುವೆಯಾಗುವೆನು.
ಯುವಕ :- ಕಮಲೆ ! ಲೋಕಭಯಂಕರನಾದ ಸಂತಾಪಕನನ್ನು
ಬಲ್ಲೆಯಾ ?
ಕಮಲೆ :- ( ಭೀತಿಯಿ೦ದ ) ವರ್ತಮಾನಪತ್ರಿಕೆಗಳಲ್ಲಿ ಅವನ ವಿಷಯ
ವನ್ನು ಓದಿಬಲ್ಲೆನು ?
ಯುವಕ :- ನಾನು ಅವನಂಥವನಾಗಿದ್ದರೇನುಮಾಡುವೆ ?
ಕಮಲೆ :- ಆ೦ತಹ ಸ್ವಭಾವವು ನಿನ್ನಲ್ಲಿದ್ದರೆ ನನಗೆ ಸಂತೋಷವುಂ
ಟಾಗುತ್ತಲೇ ಇರಲಿಲ್ಲ. ಆದುದರಿಂದಲೇ ನಿನ್ನನ್ನು ಮದುವೆಯಾಗುವೆನು.
ಯುವಕ :- ಒಂದುವೇಳೆ ಹಾಗಿದ್ದರೊ ?
ಕಮಲೆ :- ಅದು ಹಾಗಿರಲಿ. ನನ್ನನ್ನು ಮದುವೆಯಾಗುವುದಕ್ಕೆ
ನೀನೊಪ್ಪುವೆಯೋ ಇಲ್ಲವೊ ?
ಯುವಕ :- ಒಪ್ಪುವುದು ಮಾತ್ರವೇ ಅಲ್ಲ. ನಿನ್ನ ಆಜ್ಞಾನುಸಾರ
ವಾಗಿ ನಡೆಯುವುದಕ್ಕೂ ಸಿದ್ಧನಾಗಿರುವೆನು.
ಕಮಲೆ :- ಹಾಗಾದರೆ ಯೋಚನೆಯೇಕೆ ? ನೀನೆಂಥವನಾಗಿದ್ದರೂ
ನಿನ್ನನ್ನೇ ಒಪ್ಪಿರುವೆನು.
ಯುವಕನಿಗೆ ಕುಮಾರಿಯ ಮನಸ್ಸು ಚೆನ್ನಾಗಿತಿಳಿಯಿತು. ಇನ್ನ
ವಳು ವಿಮನಸ್ಕಳಾಗುವ ಸಂಭವವಿಲ್ಲ. ಯುವಕನು ಗಂಭೀರವಾದ
ಸ್ವರದಿಂದ " ಕಮಲೆ ! ನಾನೇ ಸಂತಾಪಕ. ಈಗ ಹೇಳು. ನನ್ನನ್ನೇ
ಮದುವೆಯಾಗುವೆಯಾ ? " ಎಂದು ಕೇಳಿದನು. ಕುಮಾರಿಯು ಸ್ವಲ್ಪವಾ