ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಸಂಸ್ಕೃತಕವಿಚರಿತ [ಕ್ರಿಸ್ತ ವಿದ್ಯಾಧೀತ ಸಂಪನ್ನನಾಗಿ ತಿರುಮಂಗೈ ಎಂಬ ಕನೈಯನ್ನು ವರಿಸಿ ಗೃಹಸ್ಥಾಶ್ರಮಿ ಯಾಗಿ ಕಂಚಿಯಲ್ಲಿ ವಸಿಸುತ್ತಿದ್ದು, ಅನಂತರ ಯಾತ್ರಾರ್ಥಿಯಾಗಿ ದಿವ್ಯದೇಶ ಕ್ಷೇತ್ರ ಗಳನ್ನು ಸುತ್ತಲಾರಂಭಿಸಿಮೊದಲು ತಿರುವಹೀಂದ್ರಪುರಕ್ಕೆ ಹೋಗಿ ಅಲ್ಲಿ ಗರು ತೋಂತನನ್ನೂ ಸಕಲ ವಿದ್ಯಾಪ್ರದಾತನಾದ ಹಯಗ್ರೀವನನ್ನೂ ಸ್ತುತಿಸಿ ವರಪ್ರಸಾದ ಲಬ್ಬನಾಗಿ ಹೊರಟು ಹಾಗೆಯೇ ಸುತ್ತುತ್ತ ಕ್ರಿ. ಶ ೧೨೯೧-೯೩ ರಲ್ಲಿ ಹಯ ಗ್ರಿವಸ್ತೋತ್ರ ಗರುಡಪಂಚಾಶತ್ ಎಂಬ ಸ್ತೋತ್ರಗಳನ್ನು ತಮ್ಮ ಅಭಿಮಾನ ದೇವತೆಗಳಮೇಲೆ ಬರೆದುದಲ್ಲದೆ ಪ್ರಾಕೃತದಲ್ಲಿ ಅಚ್ಯುತಶತಕವನ್ನೂ ಅನಂತರ ದೇವನಾಯಕ ಪಂಚಾಶತ್, ರಘುವೀರಗದ್ಯ, ಗೋಪಾಲವಿಂಶತಿ ಮೊದಲಾದವುಗ ಇನ್ನು ಬರೆದು ಉತ್ತರಕ್ಕೆ ಹೊರಟು ತಿರುಪತಿಯನ್ನು ಸಾರ್ದು ಅಲ್ಲಿ ದಯಾಶತಕವೇ ಮೊದಲಾದ ಗ್ರಂಥಗಳನ್ನು ಬರೆದನು. ಇವುಗಳಲ್ಲದೆ ಭೂಸ್ತುತಿ, ಶ್ರೀಸ್ತುತಿ. ದಶಾವತಾರಸ್ತೋತ್ರ, ತತ್ವಮುಕ್ತಾಕಲಾಪ, ನ್ಯಾಯಸಿದ್ದಾಂಜನ, ಸೇಶ್ವರಾನಾಂ ಸಾ, ಸಚ್ಚರಿತ್ರರಕ್ಷಾದಿ ಗ್ರಂಥಗಳನ್ನೂ, ಪ್ರಬೋಧಚಂದ್ರೋದಯವನ್ನು ನೋಡಿ, ವಿಶಿಷ್ಟಾದೈತ ಮತ ತತ್ವಭೋಧಕವಾದ ಸಂಕಲ್ಪ ಸೂದಯವೆಂಬ ನಾಟಕ ವನ್ನೂ, ಡಿಂಡಿಮಕವಿಕೃತ ರಾಘವಾಭ್ಯುದಯ ಕಾವ್ಯವನ್ನು ನೋಡಿ ಯಾದವಾ ಭ್ಯುದಯ ಕಾವ್ಯವನ್ನೂ, ಮೇಘ ಸಂದೇಶವನ್ನು ನೋಡಿ ಹಂಸಸಂದೇಶವನ್ನೂ ಬರೆದುದಲ್ಲದೆ ಪಾದುಕಾ ಸಹಸ, ಗರುಡದಂಡಕ, ಶಾರೀರಕಭಾಷ್ಯ, ದ್ರವಿಡೋಪನಿ ಸತ್ಸಾರ, ಗೀತಾರ್ಥಸಂಗ್ರಹರಕ್ಷಾ, ರಹಸ್ಯತ್ರಯಸಾರ, ಅಧಿಕರಣಸಾರಾವಳಿ ತಾತ್ಪರಚಂದ್ರಿಕಾ, ತತ್ವಟಕಾಮೊದಲಾದ ಎಷ್ಟೋ ಗ್ರಂಥಗಳನ್ನು ಬರೆದುದಲ್ಲದೆ ತಮಿಳಿನಲ್ಲಿಯೂ ಅನೇಕ ಗ್ರಂಥಗಳನ್ನು ಬರೆದಿರುವನು, ಮಣಿಪ್ರವಾಳ ಮತ್ತು ಪರಮ ತಭಂಗ, ಶತದೂಷಿಣಿ ಮೊದಲಾದ ಗ್ರಂಥಗಳು ತಮಿಳಿನಲ್ಲಿ ಬರೆಯಲ್ಪಟ್ಟಿರುವುವು. ಈ ಸಮಯದಲ್ಲಿಯೇ ಬರೆದುದಾಗಿಹೇಳುವ ಸಮಸ್ಯಾಸಹಸ್ರ ವೆಂಬುದು ಈಗ ಉಪಲಬ್ಧವಿಲ್ಲ. ಈ ಸಮಯದಲ್ಲಿ ಓರುಗಲ್ಲಿನಲ್ಲಿ ಆಳುತ್ತಿದ್ದ ಪಾಳ್ಯಗಾರ ಸರ್ವಜ್ಞ ಸಿಂಹನಾಯಕನು ವೆಂಕಟನಾಥನ ವಿದ್ಯತ್ರಭೆಯನ್ನು ಕೇಳಿ ಶ್ರೀ ವೈಷ್ಣವಮತ ತತ್ವ ನಿರ್ಧಾರಣವನ್ನುಂಟು ಮಾಡಿಕೊಡಬೇಕೆಂದು ಕೇಳಿಕೊಂಡುದಕ್ಕೆ ಆಚಾರ ಪುರಾಣಾ ಣವಾದಿಷ್ಟ ಸಾಧಾರಣ ಪ್ರಿ: ಸುಭುತಿ ಲೋಕೇಷನಂತರ ಸೂರೇಃ || ಜಟಾವರ್ಣಚರ್ಚಾ ಡೈನೇಕ ಪ್ರಕಾರ ತ್ರಯಿಲಕಚ್ಚಾ ರಣೇ ವ್ಯಾಸಕಲ್ಪ: ತಧಾಕಲ್ಪ ಸೂತ್ರ ಪ್ರಯೋಗದ ಭಿಜೊ ಜಯತ್ಯಸಂಸರತಂತ್ರ ಸ್ವತಂತ್ರ: || - ಸಪ್ತ ತಿರತ್ನ ಮಾಲಿಕೆ) ಆತ್ಮೀಯರಾಮಾನುಜರಿಗೆ, ( ಅಪ್ಪುಳಾರ್ " ಎಂದೂ ಹೆಸರು

  • ತಿರುವಹೀಂದ್ರಪುರದಲ್ಲಿ ಸುಮಾರು ೧೭ ವರ್ಷಗಳು ಇದು ದಾಗಿ ಹೇಳಿದೆ.

(Arcot Gazetteer P. 321)