ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ) ವೆಂಕಟನಾಥ ೩೧ ದೇಶಿಕನು ಸಂತುಷ್ಟನಾಗಿ ಸುಭಾಷಿತನೀವೀ ತತ್ವಸಂದೇಶ, ರಹಸ್ಯಸಂದೇಶವೆಂಬ ಗ್ರಂಥಗಳನ್ನು ವ್ಯಾಖ್ಯಾನದೊಡನೆ ಬರೆದುಕಳುಹಿಸಿದನು. ಈತನು ಬರೆದಿರುವ ಸಣ್ಣ ಸಣ್ಣ ಸ್ತುತಿಗಳಲ್ಲಿ ಗೋಪಾಲವಿಂಶತಿ ಭೂಸ್ತುತಿ, ವರದಪಂಚಾಶತಿ, ಪ್ರಾರ್ಥ ನಾಷ್ಟಕ, ಹಯಗ್ರೀವಸ್ತುತಿ ಇವೇ ಮೊದಲಾದವು ಮುಖ್ಯವಾದವುಗಳು. ಈತನಿಗೆ ಕ್ರಿ ಶ. ೧೩೧೭ ರಲ್ಲಿ ಪುತ್ರೋತ್ಸವವಾಯಿತು. ಶಿಶುವಿಗೆ 'ವರದಾಚಾರ್' ಎಂದು ನಾವು ಕರಣವಾದುದು. ಈತನು ವಿಶಿಷ್ಟಾದೈತಮತ ಪ್ರಸಾರಕ್ಕಾಗಿಯೇ ತನ್ನ ಜೀವ ಮಾನವೆಲ್ಲವನ್ನೂ ಕಳೆದು ಕ್ರಿ ಶ ೧೩೬೮ ರಲ್ಲಿ ತನ್ನ೦ತಿರುವ ಶಿಲಾಪ್ರತಿಮೆ ಯೊಂದನ್ನು ಮಾಡಿ ಶಿಲ್ಪಾರ್ಥಸಾರ ಸಂಗ್ರಹವೆಂಬ ಗ್ರಂಥವನ್ನು ಬರೆದು ಕ್ರಿ. ಶ. ೧೩೬೯ ರಲ್ಲಿ ಕಿರಿ ಶೇಷನಾದನು:- ವೆಂಕಟನಾಥನ ಚರಮ ಶ್ಲೋಕವು ಹೀಗಿರುವುದು, ಅಬೈನೆ ಮೈಚಮರೇಗತವತಿತರಣ್‌ವೃಶ್ಚಿಕಕೃತಿಕಕ್ಕೆ ರಾಕಯಾಂವೆಂಕೆಟೇ ಶೋಯತಿನೃಪತಿಮತಂಸರ್ವತಃಸ್ಟಾಸಯತ್ತು, ವೇದಾಂತಾಬಲ್ಯ ನಾಮವಿರಚಿತ ವಿವಿಧು ನೇಕ ದಿವ್ಯ ಪ್ರಬಂಧ ಶ್ರೀಶೈಲಾಧೀಘಂಟಾಕೃತಿವಪುರಭವದೇಶಿಕೇಂದ್ರೋದಯಃ || ಈತನಿಗೆ ತಪ್ಪಿಲ್ ಸಿಳ್ಳೆ, ವೆಂಕಟೇಶ, ಘಂಟಾವತಾರ, ಕವಿತಾರ್ಕಿಕಸಿಂಹ, ಸರ್ವತಂತ್ರ ಸ್ವತಂತ್ರ, ವೇದಾಂತಾಚಾರ ನಿಗಮಾಂತಮಹಾದೇತಿಕ, ವೇದಾಂತ ದೇತಿಕ, ದೇತಿಕರೆಂಬ ಉಪನಾಮಗಳು, ವೇದಾಂತದೇಶಿಕನೆಂಬ ರೂಢವಾಚಕದಲ್ಲಿ ವೆಂಕಟನಾಥನೆಂಬ ನಿಜವಾದ ಹೆಸರು ಅಂತರ್ಹಿತವಾಗಿ ' ಹೋಗಿದೆ ಆಚಾರದೇಶಿಕನ ವೈಭವಚರಿತೆಯನ್ನು ಹೇಳುವ ಸಮಾರಂಭದಲ್ಲಿ ಚರ್ಚಾ ಸ್ಪದವಾದ ಚಾರಿತ್ರಿಕ ವಿಚಾರಗಳನೇಕಗಳು ಸಮಾವೇಶಗೊಂಡಿವೆ. ಅವುಗಳ ನಾರಾನಾರ ವಿವೇಚನೆಯ ಹೊರ್ತು ವೆಂಕಟನಾಥನ ಚರಿತೆಯು ಪೂರ್ಣವಾಗದು' (೧) ವಿದ್ಯಾರಣ್ಯರ ಸಂಬಂಧ (೨) ಕೃಷ್ಣ ಮಿಶರ ದರ್ಶನ (೩) ಅಕ್ಟೋಭ್ಯತೀರ್ಥರವಾದ (೧) ವಿದ್ಯಾರಣ್ಯರ ಸಂಬಂಧ:-- (ಅ) ಒಂದಾನೊಂದು ದಿವಸ ವೇದಾಂತದೇಶಿಕನು ಮಾರ್ಗವಶಾತ್ ತುಂಗ ಭದ್ರಾ ತೀರದಲ್ಲಿ ಒಂದು ನಗರ ಸಮೀಪದಲ್ಲಿರುವ ಭಗವತ್ಪನ್ನಿಧಿಯಲ್ಲಿರಲು ಆಗ ಬಾಲ್ಯದಿಂದಲೂ ಸಹಪಾಠಿಗಳಾದ ವಿದ್ಯಾರಣ್ಯರು ವೈರಾಗ್ಯದಿಂದ ಸಂನ್ಯಾಸಮಂ