ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕು. ವೆಂಕಟನಾಥ. ಆ ಎಂದಿರುವುದು, ಪ್ರಬೋಧಚಂದ್ರೋದಯದರಲ್ಲಿ 'ಭೂರಿಶ್ರೇಷ್ಠ ಕನಾಮ ಎಂಬುದನ್ನು ಹೇಳಿರುವುದರಿಂದ ಧನಮದವೇ ಅಹಂಕಾರಕ್ಕೆ ಮುಖ್ಯವೆಂದು ಹೇಳಿದೆ. ಸಂಕಲ್ಪ ಸೂಯ್ಯೋದಯದಲ್ಲಿ 'ಸ್ಕಂದಭೂಪಾಲವಂದ್ಯಃ' ಎಂಬುದನ್ನೂ, ಹೇಳಿ ಉತ್ತಮಕುಲದಲ್ಲಿ ಹುಟ್ಟೋಣವು ಅಹಂಕಾರಕ್ಕೆ ಮುಖ್ಯವೆಂದು ತೋರಿಸ ಲ್ಪಟ್ಟಿದೆ. ದುರೋಗದಿಂದ ಧನನಷ್ಟವಾದರೆ ಆ ಮದವೂ ಅದರೊಂದಿಗೆ ನಾಶ ವಾಗಿ ಹೋಗುತ್ತದೆ. ಶ್ರೇಷ್ಠ ಕುಲಸಂಜಾತನೆಂಬ ಮದವಾದರೋ ಆ ಮರಣಾಂ. ತವಿರುವುದಾದುದರಿಂದ ಇದೇ ಹೆಚ್ಚಿನದೆಂದು ಹೇಳಿದೆ. ಹೀಗೆ ಪ್ರಬೋಧ ಚಂದ್ರೋದಯದಲ್ಲಿ ಡಂಭನವಾಕ್ಯವು:- ಸದನಮುಪಗತೋಹಂ ಪೂರ್ವಮಂಭೋಜಯೋನೇ “ಪದಿ ಮುನಿಭಿರುಚ್ಚರಾಸನೇಷಜ್ಜಿಕೇಷು ಸಶಪಥವನುನೀಯ ಬ್ರಹ್ಮಣಾಗೋಮಯಾಂಭಃ ಪರಿತ್ಯಜಿತನಿಜೋರಾ ವಾಶು ಸಂವೇಶಿತೋಸ್ಮಿ || ಎಂದಿರುವುದು, ಸಂಕಲ್ಪ ಸೂಯ್ಯೋದಯದಲ್ಲಿ ಡಂಭನ ವಾಕ್ಯವು:- ಮಯಿಚರತಿಕದಾಚಿತ್ಯ ಲೋಕೋಪಕಂಠೇ ಸಪದಿಸನಕ ಮುಖ್ಯಸ್ಟಾಕ ಮಭ್ಯುಜ್ಜಿ ಹಾನಃ ಸವಿನಯನಿಭ್ರತಾಂಗಸ್ಪಶಃಾಲಿತೇನ" ಸ್ವಯಮದವಹದFಂಪಾಣಿನಾಪಯೋನಿಃ || ಎಂದಿರುವುದು. ಬ್ರಹ್ಮನಮನೆಗೆ ಹೋಗಿದ್ದಾಗ ಋಷಿಗಳೆಲ್ಲರೂ ತಮ್ಮ ತಮ್ಮಾಸನವನ್ನು ಬಿಟ್ಟು ಎದ್ದು ದಾಗಿಯೂ, ಬ್ರಹ್ಮನು ಆಣೆ ಭಾಷೆಗಳಿಂದ ಸಂತೈಸಿ ಗೋಮಯದಿಂದ ಸಾರಿ ಸಿದ ತನ್ನ ತೊಡೆಯಮೇಲೆ ಬ್ರಹ್ಮನು ತನ್ನನ್ನು ಕೂರಿಸಿಕೊಂಡುದಾಗಿಯೂ ಹೇಳಿದೆ. ಸಂಕಲ್ಪ ಸೂಯ್ಯೋದಯದಲ್ಲಿ ತಾನೊಂದಾವರ್ತಿ ಸತ್ಯಲೋಕದ ಸವಿಾಪಕ್ಕೆ ಹೋಗಿ ರುವುದನ್ನು ತಿಳಿದ ಕೂಡಲೇ ಬ್ರಹ್ಮನು ನನ್ನೆಡೆಗೆ ಜ್ಞಾನನಿಷ್ಠರಾದ ಸನಕಾದಿಗ ಳೊಡನೆ ಬಂದು ನನ್ನನ್ನು ಎದಿರುಗೊಂಡು ನಿವೃತ್ತಿಧರ್ಮವನ್ನಾಶ್ರಯಿಸಿ ಏಳು ಸಲ ತೊಳೆದುಕೊಂಡ ಕೈಯಿಂದ ತನಗೆ ಅರ್ಥ್ಯವಿತ್ತುದಾಗಿ ಹೇಳಿರುವುದು, ಇದ ರಲ್ಲಿ ಬರಬೇಕೆಂಬ ಸಂಕಲ್ಪವಿಲ್ಲದೇ ಹಠಾತ್ತಾಗಿ ಎಲ್ಲಿಯೋ ಬಂದಿರುವುದನ್ನು ಕೇಳಿದ ಕೂಡಲೇ ಸನಕಾದಿಗಳೊಡನೆ ಬಂದು ಒಂದುಸಲ ತೊಳೆದಮಾತ್ರದಿಂದಲೇ ಪರಿಶುದ್ದವಾಗಬಹುದಾದ ಕೈಯ್ಯನ್ನು ಏಳಾವರ್ತಿ ತೊಳೆದುಕೊಂಡು 'ಅರ್ಭ್ಯ ವನ್ನು ತಂದುದಾಗಿ ಹೇಳುವುದು ಡಂಭನಪರಾಕಾಷ್ಠತೆಯನ್ನು ತೋರಿಸುವು (37)