ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

409 ಸಂಸ್ಕೃತಕವಿಚರಿತೆ ಇವನು ಎರಡನೆಯ ಪ್ರತಾಪರುದ್ರನೆಂದೂ ಕಾಕತೀಯರಾಣಿಯಾದ ರುದ್ರಾಂಬೆಯು ತನ್ನ ಮುಮ್ಮಗ ಎರಡನೆಯ ಪ್ರತಾಪರುದ್ರನಿಗೆ ಸಿಂಹಾಸನವನ್ನು ಕೊಟ್ಟಂತೆಯೂ ಇವನು ಕ್ರಿ. ಶ. ೧೨೯೧ರಲ್ಲಿ ಸಿಂಹಾಸನವನ್ನು ಹತ್ತಿದಂತೆಯೂ ಇವನ ಕಾಲದಲ್ಲಿಯೇ ತೆಲಂಗಾಣರಾಜ್ಯವು ಮಹಮ್ಮದೀಯರ ಪಾಲಾದುದಾ ಗಿಯೂ ತಿಳಿಯಬರುತ್ತದೆ.… ಹಿಂದೆ ಹೇಳಿದ ಕಾಕತೀಯರ ವಂಶಾವಳಿಯಲ್ಲಿ ಪ್ರತಾಪರುದ್ರನೆಂಬ ಅರ ಸನು ಒಬ್ಬನೇ ಇದ್ದು ದಾಗಿ ಖಂಡಿತವಾಗುತ್ತದೆ. ಮೇಲಣ ಹೇಳಿಕೆಯಲ್ಲಿ ಇವ ನನ್ನು ಎರಡನೆಯ ಪ್ರತಾಪರುದ್ರನೆಂದು ಕರೆದಿದೆ. ಹೀಗೆ ಹೇಳಿರುವುದರಿಂದ ಕಾಕ ತೀಯರಾಜರಲ್ಲಿ ಮೊದಲನೆಯು ಪ್ರತಾಪರುದ್ರನಾರೆಂಬ ಶಂಕೆಯು ಉಂಟಾಗು ವುದು ಸಹಜವಾಗಿದೆ. ಆದರೆ ಓರಗಲ್ಲಿನಲ್ಲಿ ಆಳಿದ ಗಣಪತಿ ಅರಸರ ವಂಶಾ ವಳಿಯಲ್ಲಿ:- ತ್ರಿಭುವನಮಲ್ಲ ಪೋಲರಾಜ + ಕುಪ್ಪಮ್ಮ (ಇವನ ಹಿಂದೆ ಹತ್ತು ಜನ ರಾಜಪುತ್ರರು ಆಳಿದುದಾಗಿ ತೋರುತ್ತದೆ. ಪ್ರತಾಪರುದ್ರ (7) ಗಣಪತಿದೇವ (ಇವನು ಸತ್ತನಂತರ ಇವನ ಮಗಳು ರುದ್ರಾಂಬೆಯು ಕ್ರಿ. ಶ. ೧೨೫೭ ೧೨೯೫ರವರೆಗೆ ಆಳಿದಳು.) ರುದ್ರಾಂಬೆಯಮಗಳು: ಮಹಾದೇವ ಪ್ರತಾಪರುದ್ರ (೨) ೧೨೯೫-೧೩೨೩ (ಇವನು ದೆಹಲಿಗೆ ಸೆರೆಯೊಯ್ಯಲ್ಪಟ್ಟನು) ಎಂದು ಹೇಳಲ್ಪಟ್ಟಿದೆ.$ ಇದ ರಿಂದ ಪೋಲರಾಜನ ಅನಂತರಬಂದ ಮೊದಲನೆಯ ಪ್ರತಾಪರುದ್ರನು ಹಿಂದೆ ಹೇಳಿದ ಕಾಕತೀಯವಂಶಾವಳಿಯಲ್ಲಿ ಎರಡನೆಯ ಪೊಲನ ಅನಂತರ ಹೇಳಿರುವ ರುದ್ರದೇವನಾಗಿರಬೇಕೆಂದು ಸ್ಪಷ್ಟವಾಗುತ್ತದೆ. ಈ ಕಾರಣಗಳಿಂದ ಮುಮ್ಮ ಡಾಂಬೆಯವರ ಪ್ರತಾಪರುದ್ರನನು ಎರಡನೆಯ ಪ್ರತಾಪರುದ್ರನೆಂದು ಕರೆಯ ಬೇಕಾಗುವುದು, 5 South India & ber mabamedan Invaders P. 66. $ The never to be Forgotta Empire Geneology P.9