ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಿಂಗಭೂಪಾಲ ಭದ್ರಾಂ ಕೌತುಕವೇದಿಮಾಗತವರನ್ಯೂನ್ಯಮಾಸೇದುಷೋಃ , ಶೈಲೈರ್ಮರಹಿಮಾಚಲಪ್ರಭತಿಭಿರ್ದೇವೈರ್ಹರೀಂದ್ರಾದಿಭಿಃ ವ್ಯಾಪಾಂ ಪಾರ್ಶ್ವಯುಗೇ ಪುರೋಂಬುಜಭುವಾ ಪಕ್ಕಾಚ ಮೇನಾದಿಭಿಃ ಸಾಲ್ಟಿಭಿಃ ಶಿವಯೋರಪಾಂಗಸರರ್ಣಿವಾಹಿಕೀ ಪಾತುವಃ || # ಎಂಬ ಪ್ರತಾಪರುದ್ರ ಕಲ್ಯಾಣದ ನಾಟಕದ ಮಂಗಳಾಚರಣವನ್ನು ಹಾಗೆ ಹಾಗೇ ಉದಾಹರಿಸಿಕೊಂಡಿರುವನು. ಈ ನಾಟಕದಲ್ಲಿ ಯಾವುದಾದರೊಂಮ ಹೇಳಿಸಿಕೊಳ್ಳುವಂತಹ ವಿಚಾರಗ ಳೊಂದೂ ಕಂಡುಬರುವುದಿಲ್ಲವಾದುದರಿಂದ ಈ ನಾಟಕವನ್ನು ಸಹೃದಯದಿಂದ ವಿವೇಚಿಸುವರಿಗೆ ಪ್ರತಾಪರುದ್ರಯವೆಂಬ ಲೋಕೋತ್ತರ ಅಲಂಕಾರ ಗ್ರಂಥವನ್ನು ಬರೆದು ಕೀರ್ತಿಶೇಷನಾಗಿರುವ ವಿದ್ಯಾನಾಧನೂ, ಪ್ರತಾಪರುದಕಲ್ಯಾಣನಾಟಕ ವನ್ನು ಬರೆದಿರುವ ವಿದ್ಯಾನಾಥನೂ ಭಿನ್ನ ವ್ಯಕ್ತಿಗಳೇ ಅಥವಾ ಏಕವ್ಯಕ್ತಿಯೇ ಹೇಗೆಂಬ ಸಂದೇಹಕ್ಕೆಡೆಗೊಡುತ್ತದೆ. ಏಕವ್ಯಕ್ತಿಯೆನ್ನುವುದಾದರೆ ವಿದ್ಯಾನಾಥನು ಕೇವಲ ಬಾಲ್ಯದಲ್ಲಿ ಪ್ರತಾಪರುದ್ರ ಕಲ್ಯಾಣ ನಾಟಕವನ್ನು ಬರೆದು ಕಾಲಕ್ರಮದಲ್ಲಿ ಪ್ರತಾಪರುದ್ರನ ಆಶ್ರಯಯೋಗವನ್ನು ಹೊಂದಿ ಪ್ರತಾಪರುದ್ರೀಯ” ಎಂಬ ಅಲಂಕಾರ ಗ್ರಂಥವನ್ನು ಬರೆದು ಉದಾಹರಣಕ್ಕೆ ತಾನು ಬರೆದಿರುವ ನಾಟಕವನ್ನೇ ಹೇಳಿಕೊಂಡಿರಬೇಕಾಗಿ ಯೊಚಿಸಲಾಗುತ್ತದೆ, ಆದರೆ ಈ ಎರಡು ಗ್ರಂಥಗಳ ಸಮ್ಯಕ್ಷರಿಶೀಲನದಿಂದಲೂ, ತ್ಸುನಾತ್ಮಕ ದೃಷ್ಟಿಯಿಂದ ವಿವೇಚಿಸುವರಿಗೆ ಪರಸ್ಪರ ಭಿನ್ನ ವ್ಯಕ್ತಿಗಳಾಗಿರಬೇಕೆಂದು ತೋರುತ್ತದೆ. ಇದು ಸರಿಯೆಂದು ನಮಗೆನಿಸು ತದೆ. ನಾಟಕರಚನೆಯೂ ಸಾಧಾರಣ, ವರ್ಣನೆಯೂ ಸಾಧಾರಣ, ವಿಷಯವೂ ಸಾಧಾರಣ, ಶೈಲಿಯೂ ಸಾಧಾರಣವಾಗಿರುವುದರಿಂದ ಯಾವನೋ ವಿದ್ಯಾನಾಥ ನಾಮಸಾಮ್ಯದ ಸಾಧಾರಣ ಕವಿಯೊಬ್ಬನು ಬರೆದಿರಬಹುದಾಗಿ ತೋರುತ್ತದೆ. ಹೇಗೂ ಚರ್ಚಾಸ್ಪದವಾದ ವಿಚಾರ. ಸಿ೦ಗ ಭೂ ಪಾ ಲ ಇವನು “ರೇಚಿಲ್ಲ'ವಂಶದವನು. ಇವನರಾಜ್ಯವು ವಿಂಧ್ಯಾದಿಗೂ ಶ್ರೀಶೈಲಕ್ಕೂ ಮಧ್ಯದಲ್ಲಿ ಇದ್ದಿತೆಂದೂ, ಇದಕ್ಕೆ CC ರಾಜಾಚಲಂ ” ಎಂಬದು ವಂಶಪಾರಂಪಯ್ಯ ವಾಗಿ ರಾಜಧಾನಿಯಾಗಿತ್ತೆಂತಲೂ ತಿಳಿಯಬರುತ್ತದೆ. ಇವನ ತಂದೆಯ ಹೆಸರು ಅನಂತ ತಾಯಿಯ ಹೆಸರು ಅನ್ನಮಾಂಬಾ, ಈ ಅನಂತನಿಗೆ ಅನ್ನ ಪೋತನೆಂದೂ

  1. (ಪ್ರತಾಪರುದ್ರಯೇ ನಾಟಕಪ್ರಕರಣಂ ಪುಟ ೯4.