ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂತಕವಿಚರಿತ ಶೈಶವವು ಕಳೆದು ವನವು ತಲೆದೋರಿರಬೇಕು. ಮಹಾರಾಜನಾದ ಚಿನ್ನ ತಿನ್ನನು ಅಷ್ಟೊಂದು ಸಭಾಪಂಡಿತರ ಮಧ್ಯದಲ್ಲಿ ದೀಕ್ಷಿತನ ವಿದ್ಯಾ ಕೌಶಲ್ಯಕ್ಕೆ ಮೆಚ್ಚಿ ಆಶ್ರಯವನ್ನು ಕೊಟ್ಟು "ಯಾದವಾಭ್ಯುದಯ' ಕಾವ್ಯಕ್ಕೆ ವ್ಯಾಖ್ಯಾನವನ್ನು ಬರೆಯಬೇಕೆಂದು ಪ್ರಾರ್ಥಿಸಬೇಕಾದರೆ ಅ ಕಾಲಕ್ಕೆ ದಿಕ್ಷಿತನಿಗೆ ಸುಮಾರು ೨೦-೨೫ ವರ್ಷಗಳಿಗೆ ಕಡಿಮೆಯಾಗಿರದಾಗಿ ಹೇಳಬಹುದಾಗಿದೆ. ಆದುದರಿಂದ ಬಾಲ್ಯಕಾಲದ ೨೨ ವರಗಳನ್ನು ರಾಜಾಶ್ರಯದಲ್ಲಿ ಕಳೆದ ೫೦ ವರ್ಷಗಳೊಂದಿಗೆ ಕೂಡಿಸಿ ದೀಕ್ಷಿತನ ಕಾಲವನ್ನು ಗೊತ್ತುಮಾಡಿ ಹೇಳಬಹುದಾಗಿದೆ. ಆದುದ ರಿಂದ ದೀಕ್ಷಿತನ ಜನ್ಮಕಾಲವು ಕ್ರಿ. ಶ. ೧೨೦ಕ್ಕೆ ಮುಂಚೆ ಆಗಿರಲಾರದಾಗಿ ಊಹಿಸಬಹುದಾಗಿದೆ. ಈ ಕಾಲವನ್ನು ಮತ್ತೊಂದುವಿಧವಾಗಿ ಗೊತ್ತುಮಾಡಿ ಹೇಳ ಬಹುದು. ಹೇಗೆಂದರೆ ಶಿವಾನಂದ ಯತೀಂದ್ರನು ದಿಕ್ಷಿತನಿಗೆ ನರಸಿಂಹ ಮತ್ತು ಚಿನ್ನ ಬೊಮ್ಮ ಈರಾಜರ ಆಶ್ರಯವನ್ನು ಹೇಳಿ ಚಂದ್ರಶೇಖರನೆಂಬ ಸಮಕಾಲಿನ ರಾಜನೊಬ್ಬನನ್ನು ಹೇಳಿರುವನು. ಚಿನ್ನ ಬೊಮ್ಮನ ವಿಚಾರವಾಗಿ ಮೊದಲೆ° ಸಾಕಾ ದಷ್ಟು ಹೇಳಿರುವೆವು. ಉಳಿದ ಇಬ್ಬರ ವಿಚಾರವಾಗಿ ಪ್ರಕೃತಹೇಳಬೇಕಾಗಿರುವುದು, ನರಸಿಂಹನು ಕ್ರಿ. ಶ. ೧೫೨ ರಿಂದ ಕ್ರಿ. ಶ. ೧೬.೨೮ರ ವರೆಗೆ ತಂಜಾವೂರಿ ನಲ್ಲಿ ಆಳಿದುದಾಗಿ, ಶಿವಾನಂದಯತಿ?೦ದ್ರನು ತಪ್ಪಾಗಿ ಬರೆದುಕೊಂಡಿರುವನಾ ದರೂ, ಆ ನರಸಿಂಹನೇ ಕ್ರಿ. ಶ. ೧೫೦೯-೧೫೩೦ ರವರೆಗೆ ಚೋಳರಾಜ್ಯದ ಸರ್ವಾ ಧಿಕಾರಿಯಾಗಿದ್ದ ತಂಜಾವೂರಿನ ವೀರನರಸಿಂಹನು ಹೊರ್ತು ಮತ್ತಾವನೂ ಅಲ್ಲ, ಕೊನೆಗೆ ಇವನು ರಾಜದ್ರೋಹಿಯಾಗಿ ತಿರುಗಿಬಿದ್ದುದರಿಂದ ಕ್ರಿ. ಶ. ೧೫೩೫ ರಲ್ಲಿ ಅಚ್ಚುತ ದೇವರಾಯನಿಂದ ಪರಾಜಯನ್ನು ಹೊಂದಿದನು. ಈ ನರ ಸಿಂಹನಿಗೆ ಚೆಲ್ಲಪ್ಪನೆಂಬ ಹೆಸರೂ ಇದ್ದಿತು. ಶಿವಾನಂದಯತೀಂದ್ರನ ಹೇಳಿಕೆ ಯಂತೆ ದೀಕ್ಷಿತನ ಆಶ್ರಯದಾತನು ವೀರನರಸಿಂಹನೆಂದು ಚಾರಿತ್ರಿಕ ದೃಷ್ಟಿಯಿಂದ ಸಿದ್ದಾಂತವಾಗುವುದಾದರೆ ನಿಜವಾಗಿ ದಿಕ್ಷಿತನಿಗೆ ಚಿನ್ನ ತಿಮ್ಮನಿಗಿಂತಲೂ ಪೂರೈ ಭಾವಿಯಾಗಿ ರಾಜಾಶ್ರಯವುದೊರೆತಿದ್ದಿ ತೆಂದು ಹೇಳಬೇಕಾಗುತ್ತದೆ. ದೀಕ್ಷಿತನ ಅಲಂಕಾರ ಗ್ರಂಥದಲ್ಲಿ ಒಬ್ಬ ನರಸಿಂಹನ ಏಚಾರವಾಗಿ ಹೇಳಿರು ವುದು ಕಂಡುಬರುತ್ತದೆ. ಆ ಶ್ಲೋಕಗಳು ದೀಕ್ಷಿತನಿಂದ ಬರೆಯಲ್ಪಟ್ಟುವುಗಳೆಂದು ಹೇಳುವ ಜನಜನಿತಕಥೆಗಳೂ ಹೇರಳವಾಗಿವೆ. ದ್ವಿರ್ಭಾವಃ ಪುಷ್ಪ ಕೇತೋರ್ವಿ ಬುಧ ವಿಟಿಪಿನಾಂ ಪೌನರುಕ್ತ ವಿಕಲ್ಪ ಶಿಂತಾರಸ ವೀಪ್ಪಾ ತಪನತನುಭವೋ ವಾಸವಸ್ಯ ದ್ವಿರುಕ್ತಿ: || ದೈತಂದೇವಸ್ಯ ದೈತ್ಯಾಧಿಪರುಧನಕಲಾ ಕೇಳಿಕಾರಸ್ಯ ಕುರ್ವ ನಾನಂದಂ ಕೋವಿದಾನಾಂಜಗತಿ ವಿಜಯಶ್ರೀನೃಸಿಂಹ ತೀಂದ್ರಃ|