ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಚರಿತ fಕ್ರಿಸ್ತ ಕೊಟ್ಟನು. ಹೀಗಾಗಿ ಚಂದ್ರಶೇಖರನು ಅಪ್ಪಯ್ಯ ದೀಕ್ಷಿತನ ವಿವಾಹ ಕಾರಣನಾ ದನು. ಇಪ್ಪತ್ತು ವರ್ಷಗಳ ವೇಳೆಗೆ ದೀಕ್ಷಿತನವಿದ್ಯಾಸಂಪತ್ತಿಯು ಎಲ್ಲೆಲ್ಲಿಯೂ ಹರಡಿಕೊಂಡಿದ್ದಿತು. ಈ ಮೇಲೆ ಹೇಳಿದ ಕಾರಣಗಳಲ್ಲೆಲ್ಲದರ ಪರಿಶೀಲನದಿಂದ ದೀಕ್ಷಿತನ ಕಾಲವು ಕ್ರಿ. ಶ. ೧೫೨೦-೧೫೯೩ರವರೆಗೆಂದೂ ಹೇಳುವುದುತಪ್ಪಾಗದು. ಇದಲ್ಲದೆ ಚತುಶ್ಲೋಕೀಭಾಷ್ಯದಲ್ಲಿ ಕಂಡುಬರುವ ಈತನ ವಿಷಯಕವಾದ:- (ವಿಕ್ರಮೇಭೂತಲಂಪ್ರಾಪ್ಯ ವಿಜಯಸ್ವರ್ಗಮಯ' || ಎಂಬದು ಮೇಲೆ ಹೇಳಿದ ಕಾಲಕ್ಕೆ ಸರಿಹೋಗುತ್ತದೆ : ಆದುದರಿಂದ ಈ ಕಾಲವು ದೀಕ್ಷಿತನ ಕಾಲವೆಂದು ಚಾರಿತ್ರಿಕ ಮತ್ತು ಶಾಸನಗಳಿಂದ ಸಿದ್ದವಾಗು ತದೆ. * ದೀಕ್ಷಿತನು ಅವಸಾನಕಾಲದಲ್ಲಿ ಹೇಳಿದುದೆನ್ನುವ ಶ್ಲೋಕದಿಂದ ಅವನಿಗೆ ೭೦ ವರ್ಷಗಳಿಗಿಂತಲೂ ಹೆಚ್ಚಾಗಿದ್ದಿ ತೆಂದು ಹೇಳಿರುವನು, ಚಿದಂಬರ ವು ಅವನ ಸೈಸರ್ಗಿಕಸಾಮ್ರಾಜ್ಯ, ತರುಣೇಂದು ಶೇಖರನು ಅವನ ಪರಾಪರವಸ್ತು, ಅವನ ಹೇಳಿಕೆಯು ಹೀಗಿರುವುದು:-- ಚಿದಂಬರಮಿದಂ ಪುರಂ ಪ್ರಧಿತಮೇವ ಪುಣ್ಯಸ್ಥಲಂ ಸುತಾಶ ವಿನಯೋಜ ಲುಃ ಸುಕೃತಯಶ ಕಾಶಿತಾಃ ) ವಯಾಂಸಿ ಮಮ ಸಪ್ತ ತೇರುಪಂ ನೈವ ಭೋಗೇ ಓ.ಹಾ ನಕಿಂಚಿದಹಮರ್ಥಯೇ ಶಿವಪದಂ ದಿವ್ಯಪರಂ|| ಆಭಾತಿ ಹಾಟಕಸಭಾನಟಪಾದಪದ್ಮ ಜ್ಯೋತಿರ್ಮಯೋ ಮನಸಿ ಮೇ ತರುಣಾರುಣೋsಯಂ || ಅಹೋ ! ಈ ಚಿದಂಬರವು ಪುಣ್ಯಕ್ಷೇತ್ರ, ವಿನೀತ ಪುತ್ರಸಂತಾನನಾದೆ. ಅನೇಕಾಮೂಲ್ಯ ಗ್ರಂಥರಚನೆಯೂ ಆದುದು. ನನ್ನ ವಯಸ್ಸಾದರೋ ೭೦ವರ್ಷಗ. ಆಮೇಲಾದುದು. ನಾನು ಆಶಿಸುವ ಐಹಿಕ ವಸ್ತುವು ಯಾವುದೂ ಇಲ್ಲ. ನನಗಾ ವುದೂ ಬೇಡ, ಶಿವಸದನಂ (ಹೊಂದಬೇಕೆಂಬ) ನೋಡಬೇಕೆಂಬ ಇಚ್ಛೆ, ಅಗೋ ! ನನ್ನ ಮನಸ್ಸಿನಲ್ಲಿ ಆ ನಟರಾಜನ ಪ್ರಭೆಯ ಬಾಲಸೂರಜ್ಯೋತಿಯು ಕಾಣು ತಿದೆ. ಮೇಲಣ ಅರ್ಧ ಶ್ಲೋಕವನ್ನು ಹೇಳುತ್ತಿದ್ದ ಹಾಗೆ ಅಪ್ಪಯ್ಯ ದೀಕ್ಷಿತನ ಜೀವನ ವಿಸರ್ಜನವಾದುದು. ಉಳಿದ ಅರ್ಧ ಶ್ಲೋಕವನ್ನು ಅವನ ಮಕ್ಕಳು ಹೇಳಿ ಮುಗಿಸಿದರೆಂದು ಹೇಳಿದೆ:-. ನೂನಂ ಜರಾಮರಣಘೋರಪಿಶಾಚಕೀರ್ಣಾ ಸಂಸಾರವೋಹರಜನೀ ನಿರತಿ ಪ್ರಯಾತು ||

  • The Journal of oriental Researcb. Madras

Vol 2 P. 225:237.