& ಸಂತಕವಿಚರಿತ _._ _ . ಜಾತಿ ವಿಹಾಯ ಕನಕೀ ರಸತೇ ಪನ ಭರ್ತಾ ಭೀಭರ್ತಿ ಶಿರಸಾ ಕೃಪಣಃ ಕಪರ್ದಂ ರಾಜೇತಿ ವಕ್ರರಶಿನ ತಿಲಕಿ:ಕರೋತಿ ತಸ್ಮಾದಸ ಪರಿಭನಾಸ್ಪದವಿಶ್ವರೂಪಿ || ೩-೪. ಈಶ್ವರನು (ಸುವಾಸನೆಯುಳ್ಳ) ಮಾಲತೀಕುಸುಮವನ್ನು ಬಿಟ್ಟು (ಎ.ಸನಾ ಹೀನವಾದ) ಇತರಕುಸುಮಗಳಲ್ಲಿ ಸಂತೋಷಿಸುತ್ತಾನೆ ಅಥವಾ ಜಾತಿವ್ಯವಹಾರ ವನ್ನು ಅನುಸರಿಸದೆ (ಎಂದರೆಇತರರಂತೆ ವಸನಭೂಷಿತನಾಗದೆ) ಸುವರ್ಣಾಜಿನದಲ್ಲಿ ಆಶೆಗೊಳ್ಳುತ್ತಾ, ತಲೆಯಲ್ಲಿ ಜಟೆಯನ್ನೋ ಅಥವಾ ಕವಡೆಯನ್ನೋ ಧರಿಸುತ್ತಾನೆ ರಾಜನೆಂದು ವಕ್ರಚಂದ್ರನನ್ನು ತಿಲಕವನ್ನಾಗಿ ಮಾಡಿಕೊಂಡಿರುತ್ತಾನಾದುದ ರಿಂದಲೆ? ಈಶ್ವರನು ಲೋಕದಲ್ಲಿ ಪರಿಭನಾಸ್ಪದನಾಗಿರುವನಲ್ಲವೆ ! ಆನಂದೋsಯಮುಖಂಡಸುಂದರವಪುರ್ಮೂಥಸಂಸಾರಿಣ: - ಪ್ರಚ್ಚ ನ್ಯೂ ವಸತಿ ಸ ನ ಹಿ ನೃಣಾಂ ನಾಸೀಸ್ ಗೋಬರಃ ಸಂನ್ಯಾ ಸೆನ ಕೃತಾಕೃತೆ: ಪ್ರಶಮಿ ತೇ ಜ್ಞಾನೇನ ಮೋಹೇ ಹರೇ ಧನ್ನೊತನನ್ಯಧನೋ ನಿರಂತರಮಮುಂ ಮೋಕ್ಷಂ ಜನೋ ಭೋಕ್ಷ್ಯತೇ|| ೫-೧೦ ಮೂಢನದ ಸಂಸಾರಿಯ ಶರಿ?ರವು, ಆನಂದದಾಯಕವೆಂದು ತಿಳಿದು ಅದ ರಲ್ಲಿ ಗೋಪ್ಯವಾಗಿ ವಾಸಮಾಡುತ್ತಾನಾದುದರಿಂದಲೇ ಇವನು ಜನರಮನಸ್ಸಿಗೆ ಗೋಚರನಾಗುವುದಿಲ್ಲ, ಇದನ್ನು ಬಿಟ್ಟು ಸಂನ್ಯಾಸವನ್ನು ಸ್ವೀಕಾರಮಾಡಿ ಜ್ಞಾನಾ ರ್ಜನೆಯಿಂದ ಮೋಹವು ನಾಶಗೊಳಿಸಲ್ಪಟ್ಟು ದಾದರೆ ಆಗ ಮನುಷ್ಯನು ಮತ್ತಾವ ವಿಧವಾದ ಪ್ರತ್ಯಾಶೆಯೂ ಇಲ್ಲದೆ ಮೋಕ್ಷವನ್ನು ಹೊಂದುತ್ತಾನೆ. ನಾ ರಾ ಯಣ ಭಟ್ಟ ಇವನು ಕೇರಳೀಯ ಬ್ರಾಹ್ಮಣನು, ಮಾತೃದತ್ತನ ಮಗನು, 'ಮಪ್ಪ ತ್ತೂರು ಇಲ್ಲಂ' ಎಂಬ ಗ್ರಾಮದವನು. ಇದು ಉತ್ತರ ಮಲಬಾರಿನಲ್ಲಿ ನೀಲಾ ನದಿಯ ಉತ್ತರಕ್ಕಿರುವ 'ತಿರುನಾವಾ' ಎಂಬ ಪ್ರಸಿದ್ಧ ದೇವಾಲಯದ ಬಳಿಯಣ ಪೆರುವನಂ ಎಂಬದಕ್ಕೆ ಸೇರಿದುದು ಇವನು ಆಗ ಪ್ರಸಿದ್ಧನಾಗಿದ್ದ 'ಅಚ್ಯುತ ಪಿಷರೋದಿ' ಎಂಬವನಲ್ಲಿ ವ್ಯಾಕರಣವೇ ಮೊದಲಾದವುಗಳನ್ನು ಕಲಿತನು. ಕಾಲ ಕ್ರಮದಲ್ಲಿ ಮಹಾಕವಿಯೆಂದು ಸಕಲರಿಂದಲೂ ಗೌರವಿಸಲ್ಪಡುತ್ತಿದ್ದುದನ್ನೂ ಅವನು ಬರೆದ ಗ್ರಂಥೋತ್ಕರ್ಷತೆಯನ್ನೂ ಕೇಳಿ (ಅಂಬಲಪೂಷ' ಕ್ಕೆ ರಾಜನಾದ ದೆವನಾರಾಯಣನು ತನ್ನ ಆಸ್ಥಾನಕ್ಕೆ ಬರಮಾಡಿಕೊಂಡು ಅವನಿಗೆ ಆಶ್ರಯ
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೮೨
ಗೋಚರ