ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

429 ಸಂಸ್ಕೃತಕವಿಚರಿತ [ಕ್ರಿಸ್ತ ಈ ವಿ ಕ ಣ ೯ ಈ ರ ಇವನ ನಿಜವಾದ ಹೆಸರು ಪರಮಾನಂದಸೇನನೆಂದು. ಚೈತನ್ಯಪ್ರಭುವಿನ ಅನುಗ್ರಹದಿಂದ ಬಾಲ್ಯದಲ್ಲಿ ಕವಿತೆಯನ್ನು ಮಾಡುವ ಪ್ರತಿಭಾಸಂಪನ್ನ ನಾದಂತೆಯೂ ತನ್ನ ಗ್ರಂಥಾರಂಭದಲ್ಲಿ:- - ಶ್ರವಣೋಃ ಕುವಲಯಮರಂಜನಮುರಸೋ ಮಹೇಂದ್ರಮಣಿದಾಮ ವೃಂದಾವನರಮಣೀನಾಂ ಮಂಡನಮುಖಿಲಂ ಹರಿರ್ಜಯತಿ || ಎಂದು ಹೇಳುವಾಗ ಕರ್ಣಾಭರಣಾರ್ಥವಾಚಕ ಕುವಲಯ ವಿಶೇಷಣವನ್ನು ಹೇಳಿಕೊಂಡಿರುವುದರಿಂದ ಇವನನ್ನು (ಕವಿಕರ್ಣಪೂರ' ಎಂದು ಕರೆದಿರುವುದಾಗಿ ಜನಶ್ರುತಿಯಿರುವುದು. ಈ “ಶಿವಾನಂದಜೀನಸ್ಯ ತನುಜೀನ ನಿರ್ಮಿತಂ ಪರಮಾನಂದದಾಸ ಕವಿನಾ' ಎಂಬ ಸೂತ್ರಧಾರನ ಹೇಳಿಕೆಯಿಂದ ಕವಿಯ ಹೆಸರು (ಪರಮಾನಂದದಾಸ? ಎಂದು ಸ್ಪಷ್ಟಪಡುತ್ತದೆ. $ ಈ ಗ್ರಂಥದ ಭೂಮಿಕಾರಂಭದಲ್ಲಿ:- (ಕವಿಕರ್ಣಪೂರಾಪರನಾಮಧೇಯಃ ಪರಮಾನಂದದಾಸಕವಿಃ' ಎಂದು ಹೇಳಿರುವುದರಿಂದ ಈ ಪರಮಾನಂದದಾಸ' ಕನಿಗೆ ( ಕವಿಕರ್ಣಪೂರ ಎಂಬ ಮತ್ತೊಂದು ಹೆಸರೆಂದು ಸ್ಪಷ್ಟವಾಗುತ್ತದೆ. (ಕವಿಕರ್ಣಪೂರ' ಎಂಬ ಹೆಸರಿನ ಚಳುವಳಿಯಲ್ಲಿ ( ಪರಮಾನಂದದಾಸ ' ಎಂಬ ನಿಜವಾದ ಹೆಸರು ಲೀನವಾಗಿ ಹೋಗಿದೆ. ಮಹಾಕವಿರಯಂ ವಂಗಪ್ರದೇಶೇ ನದಿಯಾಪ್ರಾಂತ್ಯವರ್ತಿಾ ಕಾಂಚನ ಸಲ್ಮಾ..... ಜನ್ಮಲೆಭೇ' ಎಂದು ಹೇಳಿರುವುದರಿಂದ ಇವನು ವಂಗದೇಶಕ್ಕೆ ಸೇರಿದ ನದಿಯಾಪ್ರಾಂತ್ಯದ ಬಳಿಯಣ ಒಂದಾನೊಂದು ಗ್ರಾಮದವನೆಂದು ಸ್ಪುಟ ವಾಗುತ್ತದೆ. $ ವಂಗಸಾಹಿತ್ಯ ಚರಿತೆಕಾರರಾದ ದಿನೇಶಚಂದ್ರಸೇನರು ಪರವಾನಂದ ವಾಸಕವಿಯು 'ಫುಲ್ಲಶ್ರೀ' ಎಂಬ ಊರಿನಲ್ಲಿ ಜನ್ನಿಸಿದುದಾಗಿ ಸ್ಥಳನಿರ್ದೇಶಮಾಡಿ ಹೇಳಿರುವರು. ಅಲ್ಲದೆ - ಫುಲ್ಲ ' ಎಂಬದು ಕವಿಕರ್ಣಪೂರನಿಗೆ: ಅಲ್ಲದೆ ವಿಶ್ವವಾಜ್ಯದಲ್ಲಿ ಹೆಸರುಗೊಂಡು ಸ್ಮೃತಿಶೆಷರಾಗಿರುವ ಕವೀ೦ದ್ರ ತ್ರಿಲೋಚನ ದಾಸ, ಜಾನಕೀನಾಥಕವಿಕಂಠಹಾರ, ಭವಾನೀನಾಥದಾಸಸರಸ್ವತಿ, ರಘುರಾಮ ದಾಸಕಂಠಾಭರಣ, ಮುಂತಾದ ಮರ್ಹಾ ಮರ್ಹಾ ಕವಿಗಳ ಜನ್ಮಸ್ಥಳವಾಗಿದ್ದಿ

  • ಚೈತನ್ಯ ಚಂದ್ರೋದಯದ ಭೂಮಿಕಾ ಪುಟ ೧

S Ibid P3 $ Ibid. introduction P, 1