ಸಂಸ್ಕೃತಕಏಚರಿತ [ಕ್ರಿಸ್ತ ಚೈತನ್ಯ ಚಂದ್ರೋದಯನಾಟಕ:-ಇದು ರೂಪಕಭೇದವಾದ ಪ್ರಕರಣ ಜಾತಿಗೆ ಸೇರಿದುದು. ಇದರಲ್ಲಿ ಹತ್ತು ಅಂಕಗಳಿರುವುವು. ಇದರಲ್ಲಿ ಗೌರಾಂಗ ಅಥವಾ ಚೈತನ್ಯದೇವನ ಧರ್ಮಾಚರಣೆ, ಸದುಪದೇಶ ಗಳನ್ನು ತಿಳಿಸುವುದಾಗಿ, ಮುಮುಕ್ಷುಗಳಿಗೆ ಮಾರ್ಗದರ್ಶಕವಾಗಿ, ಮೃದು ಮಧುರ ಶೈಲಿಯನುಳ್ಳುದಾಗಿ ಸರ್ವವಿಧದಲ್ಲಿಯೂ ಪ್ರಬೋಧ ಚಂದ್ರೋದಯ ವನ್ನು ಅನುಸರಿಸಿ ಬರೆಯಲ್ಪಟ್ಟಿರುವುದು, ಇದರಲ್ಲಿ ಶಾಂತರಸವು ಪ್ರಧಾನವಾಗಿರು ವುದು. ಇದನ್ನು ಕಪಿಲೇಶ್ವರದೇವನ ಮುಮ್ಮಗನೂ, ಪುರುಷೋತ್ತಮನ ಮಗನೂ ಆದ ನೀಲಗಿರಿಯ ಅಧೀಶ ಗಜಪತಿಪ್ರತಾಪರುದ್ರದೇವನ ಕೋರಿಕೆಯಂತೆ ಬರೆದು ದಾಗಿ ತಿಳಿಯಬರುತ್ತದೆ. ಕವಿಯು ಈ ನಾಟಕವನ್ನು ಶಾ, ಸಂ. ೧೫೦೧ ಅಥವಾ ಕ್ರಿ. ಶ. ೧೫೭೯ರಲ್ಲಿ ತನ್ನ ೫೫ನೆಯ ವರ್ಷದಲ್ಲಿ ಬರೆದುದಾಗಿ ಹೇಳಿಕೊಂಡಿರುವನು. ಮೇಲೆ ಹೇಳಿದ ಗ್ರಂಥಗಳಲ್ಲಿ ಆರ್ಯಾಶತಕವು ಉಪಲಬ್ಧ ವಿಲ್ಲ. ಚೈತನ್ಯಚರಿತಾ ಮೃತವು ಹೆಸರಿಗೆ ತಕ್ಕಂತೆ ಚೈತನ್ಯನ ಚರಿತೆಯು ವರ್ಣಿತವಾಗಿದೆ. ಇದು ಮಹಾಕಾವ್ಯ. ಇದನ್ನು ಕವಿಯು ಕ್ರಿ. ಶ. ೧೫೪೨ರಲ್ಲಿ ತನ್ನ ೧೮ನೆಯ ವಯಸ್ಸಿನಲ್ಲಿ ಬರೆದುದಾಗಿ ಹೇಳಿದೆ. ಅನಂದವೃಂದಾವನ ಚಂಪೂಗ್ರಂಥವು ೨೨ ಸ್ತಬಕಗಳಿಂದ ಕೂಡಿರುವುದು. ಚಮತ್ಕಾರಚಂದ್ರಿಕೆಯು ಕೃಷ್ಣಲೀಲಾವರ್ಣನ ರೂಪವಾದ ಕಾವ್ಯ, ಅಲಂಕಾರಕೌಸ್ತುಭ ಎಂಬುದು ಲಕ್ಷಣಗ್ರಂಥ. ಇದಕ್ಕೆ 'ಕಿರಣ' ಎಂಬ ವ್ಯಾಖ್ಯಾನವಿರುವುದು. ಕೃಷ್ಣ ಲೀಲೋದ್ದೇಶದೀಪಿಕಾ, ಗೌರಗಣೋದ್ದೇಶದೀಪಿಕಾ ಇವು ಧರ್ಮ ಗ್ರಂಥಗಳು, ವರ್ಣಪ್ರಕಾಶ ಕೋಶವು ಅಮರಮಾಣಿಕ್ಯನ ಮಗ ರಾಜಾಧರನಿಗಾಗಿ ಬರೆದುದಾಗಿದೆ. ರಾಮ ಕೃಷ್ಣಾವತಾರೋತ್ಕರ್ಷತೆಯ ವಿಚಾರ ದಲ್ಲಿ ಕವಿಯಮತವು ಹೇಗೆಂಬುದನ್ನು ಈ ನಾಟಕದಲ್ಲಿ ರಾಜ ಮತ್ತು ಭಟ್ಟಾಚಾದ್ಯರ ಭಾಷಣದಲ್ಲಿ ಸೂಚಿಸಿರುವನು, ಅದುಹೀಗಿರುವುದು:- ಭಟ್ಟಾಚಾರ್ಯ:-ಮಹಾರಾಜ!ಇವೆರಡೂ ಸಮಾನಾರ್ಥದ್ಯೋತಕಗಳಾದರೂ ರಮಂತೇ ಯೋಗಿನೋsನಂತೇ ಸತ್ಯಾನಂದಚಿದಾತ್ಮನಿ ಇತಿರಾನಪದೇನಾಸೌ ಪರಂಬ್ರಹ್ಮಾಭಿಧೀಯತೇ || ೬-೨೧ ಕೃಷಿರ್ಭೂವಾಚಕಃ ಶಬ್ಯೂ ಅಶ್ವನಿರ್ವೃತಿವಾಚಕಃ ತಯೋಕ್ಯಂ ಪರಬ್ರಹ್ಮ ಕೃಷ್ಣ ಇತ್ಯಭಿಧೀಯತೇ || ೬-೨೩ ಸಹಸ್ರನಾಮಭಿಸ್ತುಲ್ಯಂ ರಾಮನಾಮವರಾನನೇ ಸಹಸ್ರನಾಮಾಂ ಪುಣ್ಯಾನಾಂ ತ್ರಿರಾವೃತಾ ತು ಯತ್ಕಲಂ ಏಕಾವತ್ತು ತುಕೃಷ್ಣಸ್ಯ ನಾಮ್ಮೆ ಕಂ ತತ್ನ ಯಚ್ಛತಿ ||" ( ಇತಿ ರಾಮನಾಮತಃ ಕೃಷ್ಣನಾಮ ಶ್ರೇಯಃ ” ಎಂದು ಕೃಷ್ಣನ ಉತ್ಕರ್ಷ ತಯು ಹೇಳಿರುವುದು. ಕವಿಯು ಕೃಷ್ಣಭಕ್ತನು. ಆದುದರಿಂದ ಕೃಷ್ಣನ ವಿಚಾ ರೊರ್ಹತೆಯ ಹೇಳಿಕೆಯು ಸಹಜವಾದುದು.
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೯೨
ಗೋಚರ