೨೪ ಸಂಸ್ಕೃತಕವಿಚರಿತೆ -- (೩) ಕ್ರಿ. ಶ. ೮೧೩ರಿಂದ ಅವಂತಿವರ್ಮನ ಆಳ್ವಿಕೆಯಾರಂಭವಾದ ಕ್ರಿ. ಶ. ೮೫೫ರ ವರೆಗಾಗುವ ೪೨ ವರ್ಷಗಳ ಕಾಲದಲ್ಲಿ ಎಷ್ಟೋ ಜನರು ಆಳಿ ಅಳಿದಿರಬಹು ವಾಗಿ ತೋರಿಬರುವುದರಿಂದ ಮೇಲೆ ಹೇಳಿರುವ ಕಲ್ಲಣನ ಶ್ಲೋಕದಂತೆ ರತ್ನಾಕ ರನು ಅವಂತಿವರ್ಮನ ಕಾಲದವನಾಗನೆಂದೂ, (೪) ಕವಿಯು ಹೇಳಿರುವುದನ್ನು ಬಿಟ್ಟು ಕಲ್ಲಣನು ಹೇಳುವಂತೆ ಕ್ರಿ. ಶ. ೯ನೆಯಶತಮಾನದ ಉತ್ತರಾರ್ಧದವನೆನ್ನು ವುದು ಅಸಂಗತವಾಗಿ ತೋರುವುದರಿಂದ ರತ್ನಾಕರನು ಕ್ರಿ. ಶ. ೯ನೆಯ ಶತಮಾನದ ಪೂರ್ವಾರ್ಧದಲ್ಲಿದ್ದವನೆಂದು ಹೇಳಿ ದರೆ ತಪ್ಪಾಗದು. ಗ್ರಂಥಗಳು:-ರತ್ನಾಕರನು (೧) ಹರವಿಜಯ (೨) ವಕ್ರೋಕ್ತಿ ಪಂಚಾಶಿಕಾ (೩) ಧ್ವನಿಗಾಧಾಪಂಚಿಕಾ ಎಂಬ ಮೂರು ಗ್ರಂಥಗಳನ್ನು ರಚಿಸಿ ದುದಾಗಿ ತಿಳಿಯಬರುತ್ತದೆ. ಹರವಿಜಯವೆಂಬುದು ಮಹಾಕಾವ್ಯವಾಗಿದ್ದು ೨೦ ಸರ್ಗಗಳಿರುವುವು. ಕಥೆ ಯನ್ನು ಸ್ಕಾಂದಪುರಾಣದಿಂದ ಆರಿಸಿಕೊಂಡಿರುವನು. ಶಿವನು ಅಂಧಕಾಸುರ ನನ್ನು ಸಂಹರಿಸಿ ದೇವತೆಗಳನ್ನು ಸಂತೋಷಗೊಳಿಸಿದನೆಂಬುದೇ ಈ ಮಹಾ ಕಾವ್ಯ ಕಥಾಸಾರಾಂಶವಾಗಿರುವುದು. ಈ ಕಾವ್ಯಕ್ಕೆ ರಾಜಾನಕ ಅಲಕನೆಂಬುವನು ವ್ಯಾಖ್ಯಾನವನ್ನು ಬರೆದಿರುವನು.
- ಎರಡನೆಯದಾದ - ವಕ್ರೋಕ್ತಿ ಪಂಚಾಶಿಕಾ' ಎಂಬುದು ಈಶ್ವರ ಮತ್ತು
ಪಾರ್ವತಿಯರ ವ್ಯಂಗ್ಯಾರ್ಧಕೌಶಲರೂಪವಾದ ಭಾಷಣಗಳನ್ನೊಳಗೊಂಡಿರು ವುದು. ಮೂರನೆಯದಾದ 'ಧ್ವನಿಗಾಧಾಪಂಚಿಕಾ' ಎಂಬುದು ನಮಗೆ ದೊರೆತಿರು ವುದಿಲ್ಲ, ವಸಂತತಿಲಕವೃತ್ತದ ಝೇಂಕಗಳುಳ್ಳ ಅನೇಕ ಸರ್ಗಗಳು ಹರವಿಜಯದಲ್ಲಿ ದೊರೆಯುವುವು. ಕ್ಷೇಮೇಂದ್ರನು ಸುವೃತ್ತ ತಿಲಕವೆಂಬ ತನ್ನ ಗ್ರಂಥದಲ್ಲಿ- ವಸಂತತಿಲಕಾರೂಢಾ ವಾಗ್ಯ ಗಾಢಸಂಗಿನೀ | ರತ್ನಾಕರಕ್ಕೊಲಿಕಾ ಚಕಾಸ್ಪ್ಯಾನನಕಾನನೇ || ೩-೩೨ - --- - -
- ಹರವಿಜಯ ಪುಟ ೧,