ಪುಟ:ಸತ್ಯವತೀ ಚರಿತ್ರೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತ್ಯವತಿಚರಿತ್ರೆ ಆಕೆ ತನ್ನ ದೇಹಾರೋಗ್ಯಕ್ಕಾಗಿ ಶಯನಗೃಹವನ್ನು ಶುಚಿಯಾಗಿ ಇಟ್ಟು ಕೊಳ್ಳು ವಳು; ಗೋಡೆಗಳಿಗೆ ಚೆನ್ನಾಗಿ ಸುಣ್ಣ ತುಂಬಿಸುವಳು; ಗಾಳಿ ನಿರ್ಮಲವಾಗಿರಬೇ ಕೆಂಬ ಮನಸ್ಸಿನಿಂದ ಹಿತ್ತಿಲಲ್ಲಿ ಸೆಗಣಿಯ ಕುಪ್ಪೆ ಮುಂತಾದ ದುರ್ಗಂಧಪದಾರ್ಥ ಗಳನ್ನು ಆಗಾಗ್ಗೆ ತೆಗೆಯಿಸುವಳು; ಮಗ್ಗುಲ ಹಾಸಿಗೆಯನ್ನೂ ಉಡುವ ಸೀರೆ ಯನ್ನೂ ಮಾಸುವುದಕ್ಕಿಂತ ಮುಂಚೆ ಒಗೆಯಿಸುವಳು; ನಿರ್ಮಲವಾದ ನೀರನ್ನೇ ಕುಡಿಯುವಳು. ಆಕೆ ಸೀನೀರಿನ ತಂಬಿಗೆಗಳನ್ನೂ ಅಡಿಗೆ ಮಾಡುವ ಒಟ್ಟಲುಗ ಳನ್ನೂ ಬಳಸುವ ಪಾತ್ರೆಗಳನ್ನೂ ಪ್ರತಿದಿನವೂ ತೊಳೆದು ಬೆಳಗುವಳು, ಆದಕಾ ರಣ ಆಕೆಯ ಚಿಕ್ಕ ಮನೆಯಲ್ಲಿ ಸೊಳ್ಳೆಗಳೂ, ಇರುವೆಗಳೂ, ತಿಗಣೆಗಳೂ, ಕೈಯ್ಯ ಸ್ಥೆಯ ಕರೆಗಳೂ, ಇಲ್ಲಣವೂ ಯಾವುದೂ ಇಲ್ಲ, ಅದನ್ನು ನೋಡಿದರೆ ಪರಮಾ ನಂದವಾಗುವುದು, ಬೆಪ್ಪುತನದಿಂದ ಜೀವಿಸುವ ಹಲವು ಮಂದಿ ಪಾಮರ ಸ್ತ್ರೀಯರು ಅದನ್ನು ನೋಡಿ, ಸಹಿಸಲಾರದೆ ಸತ್ಯವತಿಯನ್ನು ದೊರೆಸಾನಿ ಎಂದೂ ಸೀಮೆಯ ರಾಣಿಯೆಂದೂ ಪರಿಹಾಸ ಮಾಡುತ್ತಿದ್ದರು. ಸತ್ಯವತಿಯ ಮೇಲೆ ಹೊರಿ ಸಿದ ನಾಲ್ಕನೆಯ ತಪ್ಪು ಊಾವುದೆಂದರೆ.-ನಿಯಮಗಳನ್ನೂ ವ್ರತಗಳನ್ನೂ ಮಾಡದಿರುವಿಕೆ, ಆಕೆ ಮನಸ್ಸಿನಲ್ಲಿ ಪರಮೇಶ್ವರನನ್ನು ಧ್ಯಾನಮಾಡಿ ಪ್ರಾರ್ಥಿಸು ವುದೇ ಹೊರತು ಒಂದು ದಿನವಾರೂ ವ್ರತಗಳ ಹೆಸರನ್ನು ಹೇಳಿ ಡಾಂಭಿಕರಂತೆ ಸುಮ್ಮನೆ ಕಾಲಹರಣ ಮಾಡಳು. ಏಕಾದಶಿಯೆಂದೂ ಶುಕ್ರವಾರವೆಂದೂ ಶಿವ ರಾತ್ರಿಯೆಂದ ಉಪವಾಸವನ್ನೂ ಒತ್ತನ್ನೂ ಜಾಗರಣೆಯನ್ನೂ ಮಾಡಿ ದೇಹ ವನ್ನು ಕೆಡಿಸಿಕೊಳ್ಳಳು; ದೇಹಕ್ಕೆ ವಿರೋಧವಾದೀತೆಂಬ ಭಯದಿಂದ ಒದ್ದೆಯಬಟ್ಟೆ ಯನ್ನು ಒಂದು ದಿನವಾದರೂ ಉಡಳು; ಅಗಸನ ಮನೆಯ ಮಡಿಯಲ್ಲಾದರೂ ಊಟಮಾಡುವಳು; ಬಿಸಿನೀರಿನಲ್ಲಿ ಸ್ನಾನಮಾಡುವಳೇ ಹೊರತು ಪೂಣ್ಯ ಬರುವು ದೆಂದು ನದಿಗಳಿಗೆ ಸ್ನಾನಕ್ಕೆ ಹೋಗಳು, ಯಶೋದಮ್ಮನು ಇದನ್ನೆಲ್ಲಾ ಕಂಡು ತನ್ನ ಸೊಸೆಯ ಹತ್ತಿರ ಆಚಾರವಿಲ್ಲವೆಂದೂ ಈ ಎರಡನೆಯ ಸೊಸೆಯಿಂದ ಅನಾ ಚಾರವು ಬಂದು ಸುತ್ತಿಕೊಂಡು ಮೈಲಿಗೆಯ ಕೂಳು ತಿನ್ನು ವ ಹಾಗಾಯಿತೆಂದೂ ಹಾಸಿಗೆಯಿಂದೆದ್ದ ಮೊದಲು ರಾತ್ರಿ ಕಣ್ಣಿಗೆ ನಿದ್ದೆ ಬರುವವರೆಗೆ ದೂರುತ್ತಿದ್ದಳು. ಈ ಸೊಸೆಯಲ್ಲಿ ಯಶೋದಮ್ಮನು ಹೊರಿಸಿದ ಐದನೆಯ ತಪ್ಪು ಯಾವುದೆಂದರೆ.. ಅವಳ ತಂದೆ ಭಾಗ್ಯವಂತನಾಗಿರುವುದೇ, ಆತನು ಪ್ರತಿ ತಿಂಗಳಲ್ಲಿಯ ತನ್ನ ಮಗಳಿಗೆ ಹತ್ತು ರೂಪಾಯಿಗಳನ್ನು ಕಳುಹಿಸುತ್ತಿದ್ದನು, ಆಕೆ ಆ ಹಣದಿಂದ ತನ್ನೊರಗಿತ್ತಿಯರಿಗೂ ಭಾವಂದಿರ ಮಕ್ಕಳಿಗೆ ಬಟ್ಟೆ ಬರೆ ಸೀರೆ ಕುಪ್ಪಸ