ವಿಷಯಕ್ಕೆ ಹೋಗು

ಪುಟ:ಸತ್ಯವತೀ ಚರಿತ್ರೆ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪ್ರಕರಣ 14,

  • * * * * \ P + ' * * * r\ ' +! ! , 1 * * * * * * # 4 4 ! * * *
  • f, * * * * * * * * * * * * * * * * * * * * * * * * * * * * * * * * * * * * * h/1

ಮುಂತಾದುವುಗಳನ್ನು ಕೊಂಡು ಕೊಡುತ್ತಾ ಇದ್ದಳು. ಮತ್ತು ಗೃಹಕೃತ್ಯಕ್ಕೆ ತೊಂ ದರೆಯಾಗಿರವಾಗ ಏನಾದರೂ ಕೊಡುತ್ತಾ ಅಪೇಕ್ಷಿಸಿದಾಗ ಗಂಡನಿಗೆ ಪುಸ್ತಕ ಮೊದಲಾದುವುಗಳಿಗಾಗಿ ಕೆಲವು ಹಣವನ್ನು ಕಳುಹಿಸುತ್ತಿದ್ದಳು. ಇದಲ್ಲದೆ ಕುರುಡರು, ಕುಂಟರು, ರೋಗಿಗಳು ಮುಂತಾದ ಬಡವರಿಗೆ ಸಹಾಯ ಮಾಡುತ್ತಾ ಇದ್ದಳೇ ಹೊರತು ತನ್ನ ತಿರುತಿಂಡಿಯ ನಿಮಿತ್ತವಾಗಿಯಾಗಲಿ, ಒಡವೆಗಳಿಗಾಗಿಯಾ ಗಲಿ, ಸೀಮೆ ಮುತ್ತಿಗಾಗಿಯಾಗಳು ಒಂದು ಕಾಸನ್ನೂ ವ್ಯಯಮಾಡಳು. ಹೀಗಿ ದ್ದರೂ ಯಶೋದಮ್ಮ ನು ತನಗೆ ಕೋಪಬಂದಾಗಲೆಲ್ಲಾ ಸೊಸೆಯನ್ನು ಮಹಾ ರಾಣಿಯವರೆಂದೂ ದೊಡ್ಡ ದೊರೆಸಾನಿಯವರೆಂದೂ ನವಾಬನ ಮಗಳೆಂದೂ ಹಣದ ಕೊಬೈಂದೂ ಬೈದು, ಧನಿಕರಾಗಿದ್ದುದರಿಂದ ಅವಳ ತಂದೆಯನ್ನೂ, ತಾಯಿ ಯನ್ನೂ ಶಪಿಸುತ್ತಿದ್ದಳು, ಈ ತಪ್ಪುಗಳಲ್ಲದೆ ಸತ್ಯವತಿಯಲ್ಲಿ ಬೇರೆ ಯಾವ ತವೂ ಕಾಣುವುದಿಲ್ಲ. ಇಂತಹ ದೋಷಗಳೇ ಎಲ್ಲಾ ಸ್ತ್ರೀಯರಲ್ಲಿಯೂ ಇದ್ದರೆ ದೇಶವು ಶೀಘ್ರವಾಗಿಯೇ ಒಳ್ಳೆಯಸ್ಥಿತಿಗೆ ಬರುವುದರಲ್ಲಿ ಏನೇನೂ ಅಡ್ಡಿಯಿಲ್ಲ. ಇpಸಿ ನಾಲ್ಕನೆಯ ಪ್ರಕರಣ. ಕೆಲವು ದಿನಗಳು ಕಳೆದ ಬಳಿಕ ಒಂದು ದಿನದ ರಾತ್ರಿ ಎರಡು ಮರು ಗಳಿಗೆ ಹೊತ್ತಾದಮೇಲೆ ಸುಂದರಮ್ಮನಿಗೆ ನೋವೆತ್ತಿತು. ಆಗ ವೆಂಕಟೇಶ ನಾರಾ ಯಣ ಮೂರ್ತಿ ಇವರಿಬ್ಬರೇ ಹೊರತು ಬೇರೆ ಗಂಡಸರು ಯಾರೂ ಮನೆಯಲ್ಲಿ ಇರಲಿಲ್ಲ, ಕೆಲವರು ಹೊಲಗಳಿಗೂ ಕೆಲವರು ಚಾವಡಿಗೂ ಹೊರಟುಹೋಗಿ ದ್ದರು. ಊರ ಬಯಲಿನಲ್ಲಿ ಒಂದು ಗ್ರಾಮದೇವತೆಯ ಗುಡಿಯುಂಟು. ಅದರ ಹತ್ತಿರದಲ್ಲಿಯೇ ಒಂದು ಅರಳೀಮರದ ಬುಡದಲ್ಲಿ ಬೇವಿನ ಮರ ಹುಟ್ಟಿ ಎರಡೂ ಸೇರಿ ಮೇಲೆ ಬ್ರಹ್ಮಾಂಡವಾಗಿ ವ್ಯಾಪಿಸಿವೆ. ಚಿಕ್ಕ ಗಿಡವಾಗಿದ್ದಾಗ ಕರಣಿ ಕನ ತಂದೆ ಅವನ್ನು ತಂದು ನೆಟ್ಟು ಎರಡಕ್ಕೂ ಮದುವೆ ಮಾಡಿದನಂತೆ, ಆ ಮರ ಗಳ ಸುತ್ತಲೂ ಗುಂಡಾಗಿ ವಿಶಾಲವಾದ ಒಂದು ಮಣ್ಣಿನ ಜಗುಲಿ ಇದೆ, ಅದನ್ನೇ ಜನರು ಚಾವಡಿಯೆಂದು ಕರೆಯುತ್ತಾರೆ. ಪ್ರತಿದಿನವೂ ಸಾಯಂಕಾಲದಲ್ಲಿ ಆ ಗ್ರಾಮದ ಕರಣಿಕನ ಮುನಸೀಫನ ಆ ಜಗಲಿಯಮೇಲೆ ಸೇರಿ ಜನಗಳ ವ್ಯವ