14 \ * *
- \ \। * \ 1 # \ # , \ \ "
೨೨ ಸತ್ಯವತಿಚರಿತ್ರೆ པར་སངས་ ས་དང་ ་ ང་ ན་ དང་ ಅವಲಂಬಿಸಿ ಕಲಹವನ್ನು ನಿರ್ಮಲಮಾಡುವುದಕ್ಕೆ ಪ್ರಯತ್ನಿ ಸಲೆಂದು ಬಯ ಸುತ್ತೇನೆ. ಹೀಗೆ ಮಳೆಬಂದು ನಿಂತಂತೆ ನಿಶ್ಯಬ್ದವಾಗಿ ಅತ್ತೆಯ, ಸೊಸೆಯರೂ, ಮುಖ ತಿರುಗಿಸಿಕೊಂಡು ಒಂದು ಸ್ಥಳದಲ್ಲಿ ಕುಳಿತಿದ್ದರು. ಆಗ - ಜೀರಿಗೆ ಮಾವಿ ನ ಹಣ್ಣು ಬೇಕು ಜೀರಿಗೆ ಮಾವಿನಹಣ್ಣು ' ಎಂದು ಕೂಗುತ್ತಾ ಒಬ್ಬ ಹಸುರುವಾ ಇಂಗಡಿಯವನು ಬಂದನು. ರಾಮಾನುಜಮ್ಮನು ಅದನ್ನು ಕೇಳಿ ಹಣ್ಣು ಕೊ೦ಡು ಕೊಡು-ಎಂದು ಅಜ್ಜಿಯ ಸೀರೆ ಹಿಡಿದುಕೊಂಟು ಎಳೆಯಲಾರಂಭಿಸಿದಳು. ಯ-ಅಯ್ಯೋ ! ಇವರ ಮನೆ ಹಾಳಾಗ, ಎಲ್ಲರೂ ನನ್ನನ್ನೇ ಕಿತ್ತು ಕೊಂಡು ತಿನ್ನು ತಕ, ಏನಾದರೂ ಬೇಕಾದರೆ ನಿಮ್ಮ ಅಮ್ಮನನ್ನೂ ಅಪ್ಪನನ್ನೂ ಹಿಡಿದು ಕೊಂಡು ಅಳಬಾರದೆ ?-ಎಂದು ಗದರಿಸಿಕೊಂಡು ಮೊಮ್ಮಗಳನ್ನು ನೂಕಿಬಿ ಟ್ಕಳು, ಆಮೇಲೆ ರಾಮಾನುಜಮ್ಮನು-ಹಣ್ಣು ಕೊಂಡುಕೊಡು-ಎಂದು ಅಳುತ್ತಾ ತನ್ನ ತಾಯಿಯಹತ್ತರ ಹೋದಳು. ತಾಯಿ ಚನ್ನಾಗಿ ಬಯ್ದು ಬೆನ್ನಿನ ಮೇಲೆ ಎರಡುಸಾರಿ ಗುದ್ದಿದಳು. ಅನಂತರ ಆ ಮಗು ಮತ್ತಷ್ಟು ಅಳುತ್ತಾ ಆ ಅಳುವಿನಲ್ಲಿಯ-ಅಮ್ಮಾ ಹಣ್ಣು, ಅಮ್ಮಾ ಹಣ್ಣು- ಎಂದು ಕೂಗುತ್ತಲೇ ಇದ್ದಿತು. ಸಾಧಾರಣವಾಗಿ ನಮ್ಮ ದೇಶದ ಸ್ತ್ರೀಯರು, ತಮಗೆ ಹೆದರಮೇಲೆ ಕೋಪ ಬಂದಾಗ ಮಾತನಾಡುವುದನ್ನೂ ತಿಳಿಯದ ಮಕ್ಕಳನ್ನು ನಿಷ್ಕಾರಣವಾಗಿ, ಹೊಡೆ ದು ಬಯ್ಯುವರು. ಇದನ್ನು ಓದಿದವರು ಅಂತಹ ಅವಿವೇಕ ಕಾಠ್ಯವನ್ನು ಎಂದಿ ಗೂ ಮಾಡಲಾರರಲ್ಲವೆ ? ಆಗ ಸತ್ಯವತಿಯು ತನ್ನ ಪೆಟ್ಟಿಗೆಯನ್ನು ತೆರೆದು ಎರಡು ದುಡ್ಡು ಗಳನ್ನು ತೆಗೆದುಕೊಂಡು ಮಗುವನ್ನೆತ್ತಿಕೊಂಡು ಬಂದು, ಹಣ್ಣು ಕೊಂಡು ಕೊಟ್ಟು ಸಮಾಧಾನ ಪಡಿಸಿದಳು, ಯಶೋದಮ್ಮನು ಅದನ್ನು ನೋಡಿ ಕಿಡಿಕಿಡಿ ಯಾಗಿ ಸೊಸೆಯ ಮೇಲೆ ಸಿಟಿಗೆ ಮುರಿದು ಭಾಗ್ಯವಂತರ ಮನೆಯ ಹೆಣ್ಣು ಮ ಕ್ಕಳು ; ಬೇಕಾದುದನ್ನೆಲ್ಲಾ ಕೊಂಡುಕೊಟ್ಟು ಮಕ್ಕಳಿಗೆ ಮಂಕುತನ ಕಲಿಸುತ್ತಾರೆ ಎಂದು ತನ್ನಲ್ಲಿ ತಾನು ಗೊಣಗುಟ್ಟುತ್ತಿದ್ದಳು, ಇಷ್ಟರಲ್ಲಿ ಶ್ರೀರಾಮನ ಮನೆಯ ದಾಸಿ ಬಂದು-ನಿಮ್ಮನ್ನೂ ನಿಮ್ಮ ಸೊಸೆಯರನ್ನೂ ಅಮ್ಮನವರು ಬರಹೇಳಿದರುಎಂದು ಕರೆದಳು. ಆಗ ನಾನು ಬಾರೆನೆಂದು ಸುಂದರಮ್ಮನೂ, ನೀನು ಬಾರದಿ ದ್ದರೆ ನಾನೂ ಹೋಗೆನೆಂದು ಯಶೋದಮ್ಮನೂ ಛಲವನ್ನು ಹಿಡಿದು ಕದಲದೆ ಕುಳಿ ದ್ದರು. ಸತ್ಯವತಿ ಅವರಿಬ್ಬರನ್ನೂ ಬೇಡಿ ಕೊಂಡು, ಅವರೆಷ್ಟು ಮರುದೂರ