ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು

ಜೀವಿರೋಧಕ ಮದ್ದುಗಳು (Antibiotics) ಈ ಶತಮಾನದ ಆದಿಯಲ್ಲಿ ಲಭ್ಯವಾದುವು. ನೋವು ನಿವಾರಣೆಯ ಸಮಸ್ಯೆಯನ್ನು ಹಿಂದೆ ಬಿಟ್ಟು ಜಿಗಿಯುತ್ತಿದ್ದ ಶಸ್ತ್ರ ಚಿಕಿತ್ಸಾ ಪದ್ದತಿ ಈಗ ನಾಗಾಲೋಟದಿಂದ ಓಡಲಾರಂಭಿಸಿತು!

  ಇಂಥಾ ಪ್ರಗತಿಗಳ ಜೊತೆ ಜೊತೆಗೇ ಕಾಯಿಲೆಗಳ ಉದ್ಭವ, ಬೆಳವಣೆಗೆ, ಮತ್ತು ರೋಗ ನಿರ್ಣಯಗಳಿಗೆ ಸಹಕಾರಿಯಾಗುವ ಪ್ರಾಯೋಗಿಕ ಪರೀಕ್ಷೆಗಳು, ಪರೀಕ್ಷಾ ಉಪಕರಣಗಳು ಶೋಧನಾಯಂತ್ರಗಳು ಕೂಡಾ ಪ್ರಚಾರಕ್ಕೆ ಬಂದವು. ಸೂಕ್ಷ್ಮದರ್ಶಕ ಯಂತ್ರ, ಎಕ್ಸರೇ ಯಂತ್ರ, ಅಂತರ್ದರ್ಶಕ ದುರ್ಬೀನು, ಸ್ಕಾನಿಂಗ್ ಮೆಷೀನ್ (C.T. Scan, Ultra Sound) ಮುಂತಾದವುಗಳನ್ನು ಇಲ್ಲಿ ಉದಾಹರಿಸಬಹುದು.
   ಶಸ್ತ್ರಚಿಕಿತ್ಸಾ ವಿದ್ಯೆಯ ಕಲಿಯುವಿಕೆ, ಮತ್ತು ತರಬೇತಿಯ ವ್ಯವಸ್ಥೆಗಳು ಈಗ ಅತ್ಯಂತ ದಕ್ಷ ಹಾಗೂ ಕಾರ್ಯ - ಕೌಶಲ್ಯದ ವೈದ್ಯರನ್ನು ತಯಾರು ಮಾಡುವಂತಾಗಿವೆ.ಈಗ ಅದೊಂದು ಅತ್ಯಂತ ನಯ, ನಾಜೂಕು, ಶ್ರದ್ಧೆ, ಸಹನೆ,ಬುದ್ಧಿವಂತಿಕೆಗಳಲ್ಲೊಂದಾಗಿದೆ. ಶಸ್ತ್ರ ಚಿಕಿತ್ಸೆಯ ಕಲೆಯು ಬಹಳ ನವುರು, ನಯ, ನಾಜೂಕಿನ ಶ್ರೇಷ್ಠ ಕಲೆಯಾಗಿ ಮಾರ್ಪಟ್ಟಿದೆ. ಎಷ್ಟೇ ದುಸ್ಥಿತಿಯಲ್ಲಿರುವ ರೋಗಿಯನ್ನು ಸೂಕ್ತ ಚಿಕಿತ್ಸೆಯಿಂದ ಸುಸ್ಥಿತಿಗೆ ತಂದು ಶಸ್ತ್ರ ಚಿಕಿತ್ಸೆಯಿಂದ ಬದುಕಿಸಲು ಸಾಧ್ಯವಾಗುತ್ತಿದೆ. ಆಧುನಿಕ ಶಸ್ತ್ರ ವೈದ್ಯರ ಕರಕುಶಲತೆಯ ಚಮತ್ಕಾರಕ್ಕೆ ಈಗ ದೇಹದಲ್ಲಿ ನಿಲುಕದ ಅವಯವಗಳಿಲ್ಲ. ದುರ್ಬಲವಾದ ಮೂತ್ರಪಿಂಡ, ಹೃದಯಗಳಂಥ ಪ್ರಮುಖ ಅಂಗಗಳನ್ನು ರೋಗಿಯಿಂದ ತೆಗೆದು ಹಾಕಿ ಬೇರೆಯವರಿಂದ ದಾನವಾಗಿ ಪಡೆದ ಅವಯವಗಳನ್ನು ನಾಟಿ ಹಾಕುವ ವಿಧಾನಗಳಿಂದ ಸಾವಿನ ದವಡೆಯಲ್ಲಿರುವವರನ್ನು ಬದುಕಿಸಲು ಸಾಧ್ಯವಾಗುತ್ತಿದೆ. ಸೋಜಿಗದ ಸಂಗತಿಯೆಂದರೆ, ಕೆಲವು ವರ್ಷಗಳ ಹಿಂದೆ ಅಪರೂಪದ ಚಿಕಿತ್ಸಾ ವಿಧಾನವಾಗಿದ್ದ ಇವು ಈಗ, ದಿನನಿತ್ಯ ಜರುಗುವ ಚಿಕಿತ್ಸೆಗಳಾಗಿರುವುದು.
  ಅತ್ಯಂತ ಪ್ರಧಾನ ಹಾಗೂ ಲಘು ಶಸ್ತ್ರ ಚಿಕಿತ್ಸೆಗಳು ಈಗ ಪ್ರಪಂಚದೆಲ್ಲೆಡೆ ತುಂಬಾ ಯಶಸ್ವಿಯಾಗಿ ನಡೆಯುತ್ತಿವೆ. ಕೀವು, ನೋವು ಮತ್ತಿತರ ಅಡ್ದ ಪರಿಣಾಮಗಳು ಬಹುಪಾಲು ಕಡಿಮೆಯಾಗಿವೆ; ಆದರೂ ಶಸ್ತ್ರ ಚಿಕಿತ್ಸೆಗೊಳಗಾಗಬೇಕಾದ ಪ್ರಮೇಯ ಒದಗಿದಾಗ ಜನ ಹಿಂಜರಿಯುವುದು ತಪ್ಪಿಲ್ಲ. ಕಾಯಿಲೆಗಳು ಮತ್ತು ಅವುಗಳ ಚಿಕಿತ್ಸಾ ವಿಧಾನಗಳ ಬಗೆಗೆ ಜನರಲ್ಲಿ ಸರಿಯಾದ ಅರಿವು ಉಂಟಾಗದಿರುವುದೇ ಈ ತರಹೆಯ ಅಂಜಿಕೆಗೆ ಕಾರಣವೆನ್ನಬಹುದು. ಇಂಗ್ಲಿಷ್ ನಂತಹ ಜಾಗತಿಕ ವ್ಯಾಪ್ತಿಯ ಭಾಷೆಯಲ್ಲಿ ಈ ತರಹದ ಅರಿವು