21
ವಾದ ನೀರು ಶ್ರೇಷ್ಠವೋ? ಇವೆರಡರಲ್ಲಿ ಯಾವುದು ನಿನಗೆ ನಿಜವಾಗಿಯೂ ಹೆಚ್ಚು ಪ್ರಯೋಜನಕಾರಿ ಎಂದು ತೋರುತ್ತದೆ?" ಎಂದು ಆತನು ಪ್ರಶ್ನೆ ಮಾಡಿದನು. ಅದಕ್ಕೆ ಸುವರ್ಣಶೇಖರನು, "ಆಹಾ! ನಿರ್ಮಲೋದಕವೇ ನಿನಗಿಂತಲೂ ಪ್ರಪಂಚದಲ್ಲಿ ಶ್ರೇಷ್ಠವಾದ ವಸ್ತುವಿನ್ನೊಂದಿದೆಯೆ? ಎಂದು ನಿಟ್ಟುಸಿರುಬಿಟ್ಟನು.
"ಸುವರ್ಣಶೇಖರನೇ, ನಿನಗೆ ಸುವರ್ಣಸ್ಪರ್ಶವೇ ಬೇಕೊ, ರೊಟ್ಟಿಯ ಚೂರು ಸಿಕ್ಕಿದರೆ ಸಾಕೋ?" ಎಂದು ಪುನಃ ಆ ಅಪರಿಚಯಸ್ಥನು ಕೇಳಲು, ಅದಕ್ಕೆ ಸುವರ್ಣಶೇಖರನು, "ಪ್ರಪಂಚದ ಚಿನ್ನವನ್ನೆಲ್ಲ ಸೇರಿಸಿದರೂ ಒಂದು ರೊಟ್ಟಿಯ ತುಂಡಿಗೆ ಸಮಾನವಾದೀತೇ?” ಎಂದು ಉತ್ತರಕೊಟ್ಟನು. ಇನ್ನೂ ಪರೀಕ್ಷಿಸಿ ನೋಡೋಣವೆಂದು ಅ ಮಹಾಪುರುಷನು ಪುನಃ ಸವರ್ಣಶೇಖರನನ್ನು ಕುರಿತು, “ಸುವರ್ಣ ಸ್ಪರ್ಶವೇ ಇರಲೊ, ಅದಕ್ಕೆ ಪ್ರತಿಯಾಗಿ ನಿನ್ನ ಮುದ್ದುಗುವರಿಯಾದ ಸುವರ್ಣಸುಂದರಿಯು ಸಜೀವಳಾದರೆ ಸಾಕೊ?” ಎಂದು ಕೇಳಿದನು. ಆಗ ಸುವರ್ಣಶೇಖರನು ಹಾ। ನನ್ನ ಮುದ್ದು ಕಂದಾ! ನನ್ನ ಪ್ರಾಣ ಪದಕವೆ! ಭೂಮಿಯೇ ಚಿನ್ನದ ಗಟ್ಟಿಯಾಗಿ ಅದರ ಬೆಲೆಯನ್ನು ನಿನಗಾಗಿ ಕೊಡುತ್ತೇನೆಂದರೂ ನಾನು ನಿನ್ನನ್ನು ಬಿಟ್ಟಿರುವುದಕ್ಕೆ ಸಮ್ಮತಿಸುತ್ತಿರಲಿಲ್ಲವಲ್ಲಾ!” ಎಂದು ಕೈಗಳನ್ನು ಮುರಿದುಕೊಂಡನು. ಆಗ ಆ ಮಹಾಪುರುಷನು ಅರಸನನ್ನು ಕುರಿತು "ಎಲೈ ಸುವರ್ಣಶೇಖರನೆ, ನಿನಗೆ ಈಚೆಗೆ ಜ್ಞಾನೋದಯವಾದಂತೆ ತೋರುತ್ತದೆ. ನಿನ್ನ ಹೃದಯವಿನ್ನೂ ಚಿನ್ನದ ಗಟ್ಟಿಯಾದಂತೆ ಕಾಣುವುದಿಲ್ಲ. ಹಾಗಿದ್ದರಂತೂ ನಿನ್ನ ಆಸೆಯೇ ಇರುತ್ತಿರಲಿಲ್ಲ. ಸಮಸ್ತ ಜನರೂ ರಾತ್ರಿ ಹಗಲು ಕಷ್ಟಪಟ್ಟು ಸಂಪಾದಿಸಬೇಕೆಂದು ಪ್ರಯತ್ನ ಪಡುವ ಚಿನ್ನ ಬೆಳ್ಳಿಗಿಂತಲೂ, ಸಮಸ್ತರಿಗೂ ಸುಲಭಸಾಧ್ಯವಾಗಿರುವ ವಸ್ತುಗಳೇ ಹೆಚ್ಚು ಪ್ರಯೋಜನವುಳ್ಳವುಗಳೆಂಬುದು ಈಗಲಾದರೂ ನಿನಗೆ