ವಿಷಯಕ್ಕೆ ಹೋಗು

ಪುಟ:ಸುವರ್ಣಸುಂದರಿ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

23

ವಾದುವು. ನದಿಗೆ ಹೋಗಿ ಕೂಡಲೇ ಮೈಮೇಲಿನ ಬಟ್ಟೆಯನ್ನು ಕೂಡ ತೆಗೆಯದೆ ನೀರಿನಲ್ಲಿ ಮುಳುಗಿದನು. ಕೂಡಲೆ ತಲೆಯನ್ನೆತ್ತಿ "ಅಹಹ ಎಷ್ಟು ಆನಂದವಾಗಿದೆ. ಈ ಸ್ಥಾನವು ಸುವಣಿಸ್ಪರ್ಶವನ್ನು ಸಂಪೂರ್ಣವಾಗಿ ನಾಶಪಡಿಸಿರಬಹುದು. ಇರಲಿ, ಈ ಪಾತ್ರೆಯಲ್ಲಿ ನೀರು ತುಂಬಿಕೊಳ್ಳುವ' ಎಂದು ಆ ಹೂಜಿ ಯಲ್ಲಿ ನೀರನ್ನು ತುಂಬಿಕೊಂಡನು. ಹೀಗೆ ನೀರು ತುಂಬಿಕೊಳ್ಳುವುದಕ್ಕೆ ಪಾತ್ರೆಯನ್ನು ಅದ್ದಿದ ಕೂಡಲೆ ಅದು ಪೂರ್ವದ ಮಣ್ಣಿನ ಪಾತ್ರೆಯಾಯಿತು. ಅದನ್ನು ನೋಡಿ ಸುವರ್ಣಶೇಖರನು ಆನಂದ ಪರವಶನಾದನು. ಮನಸ್ಸಿನಲ್ಲಿಯೂ ಸಹ ಒಂದು ಬಗೆಯ ಭಾರವು ಕಡಿಮೆಯಾದಂತಾಯಿತು. ಅಲ್ಲಿಂದ ಆತನು ಅಲ್ಲಿಯೇ ಬೆಳದಿದ್ದ ಗಿಡಬಳ್ಳಿಗಳ ಒಳಿಗೆ ಹೋಗಿ ಹೂ ಕಾಯಿಗಳನ್ನು ಮುಟ್ಟಿದನು. ಅವು ಸ್ವಲ್ಪವೂ ವ್ಯತ್ಯಾಸ ಹೊಂದದೆ ಮೊದಲಿನಂತಯೇ ಇದ್ದುವು. ಅದರಿಂದ ತನಗೆ ಪ್ರಾಪ್ತವಾಗಿದ್ದ ಸುವರ್ಣಸ್ಪರ್ಶದ ಪಾಪವು ಬಿಡುಗಡೆಯಾಯಿತೆಂದು ಧೈರ್ಯಮಾಡಿಕೊಂಡು ಅಲ್ಲಿಂದ ಅರಮನೆಗೆ ಅವಸರವಸರದಿಂದ ಹೊರಟನು. ಹೀಗೆ ಸುವರ್ಣಶೇಖರನು ಮಣ್ಣಿನ ಪಾತ್ರೆಯಲ್ಲಿ ನೀರು ತರುತ್ತಿದ್ದುದನ್ನು ನೋಡಿ ಅರಮನೆಯ ಚಾಕರರೆಲ್ಲರೂ ವಿಸ್ಮಿತರಾದರು. ಅರಸನು ಅರಮನೆಗೆ ಬಂದಕೂಡಲೆ ಆ ನೀರನ್ನು ತನ್ನ ಮುದ್ದುಗುವರಿಯ ಮೇಲೆ ಪ್ರೋಕ್ಷಿಸಿದನು. ತಕ್ಷಣವೇ ಚಿನ್ನದ ಪ್ರತಿಮೆಯಂತಿದ್ದ ಸುವರ್ಣಸುಂದರಿಯ ಕೆನ್ನೆಗಳು ಗುಲಾಬಿ ಹೂವಂತೆ ಬಣ್ಣ ಹೊಂದಿ ಕೈಕಾಲುಗಳು ಅಲುಗಲಾರಂಭಿಸಿದುವು. ಇನ್ನೂ ನೀರನ್ನು ಎರಚಲು, “ಅಯ್ಯೋ, ತಂದೆಯೆ, ಇದೇನು, ಹೀಗೆ ನೀರು ಹಾಕುವೆ? ಈ ಹೊತ್ತು ತಾನೇ ಹಾಕಿಕೊಂಡ ಪಾವುಡೆಯು ಕೆಟ್ಟು ಹೋಯಿತಲ್ಲಾ!" ಎಂದಳು. ಅವಳಿಗೆ ಬೇರೇ ತಾನು ಚಿನ್ನದ ಪ್ರತಿಮೆಯಾಗಿದ್ದುದು ಗೊತ್ತಾಗಲಿಲ್ಲ; ತಾನು