ವಿಷಯಕ್ಕೆ ಹೋಗು

ಪುಟ:ಸುವರ್ಣಸುಂದರಿ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

4

ತನ್ನ ಕಾಲವನ್ನೆಲ್ಲಾ ಚಿನ್ನದರಾಶಿಯನ್ನು ಕೂಡಿಹಾಕುವುದರಲ್ಲಿಯೇ ಕಳೆಯುತ್ತಿದ್ದನು. ಆಕಾಶವು ಹಳದಿಯ ಬಣ್ಣವಾಗಿ ಕಂಡರೆ, "ಅಯ್ಯೋ! ಇದು ಚಿನ್ನವಾಗಬಾರದಾಗಿತ್ತೆ! ನನ್ನ ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗಿದ್ದರೆ ಎಷ್ಟು ಚೆನ್ನಾಗಿತ್ತು!" ಎನ್ನುತ್ತಿದ್ದನು. ಮುದ್ದು ಮಗಳು ತೋಟದಿಂದ ಒಂದೆರಡು ಹಳದಿಯ ಹೂವನ್ನು ತಂದರೆ, ಅದನ್ನು ನೋಡಿ ಸುವರ್ಣ ಶೇಖರನು "ಚಿಃ!ಚಿಃ! ಮಗುವೆ, ಈ ಹೂಗಳು ವರ್ಣಕ್ಕೆ ತಕ್ಕಂತೆ ಸುವರ್ಣವಾಗಿಯೇ ಇದ್ದಿದ್ದರೆ, ಕಿತ್ತುದಕ್ಕೆ ಸಾರ್ಥಕವಾಗುತ್ತಿದ್ದಿತು. ಈಗ ಇವುಗಳಿಂದ ಪ್ರಯೋಜನವೇನು?" ಎಂದು ನಿಟ್ಟುಸಿರು ಬಿಡುತ್ತಿದ್ದನು.

ಈ ಬಗೆಯ ಹುಚ್ಚುಹಿಡಿಯುವುದಕ್ಕೆ ಮುಂಚೆ ಸುವರ್ಣ ಶೇಖರನಿಗೆ ಹೂ ಕಂಡರೆ ವಿಶೇಷಪ್ರೀತಿ ಇದಕ್ಕಾಗಿ ಆತನು ಅದ್ವಿತೀಯವಾದ ತೋಟವನ್ನು ಮಾಡಿಸಿ ಅದರಲ್ಲಿ ದೊಡ್ಡವಾಗಿಯೂ, ಅಂದವಾಗಿಯೂ, ಪರಿಮಳಯುಕ್ತವಾಗಿಯೂ ಇರುವ ಗುಲಾಬಿ ಹೂವಿನ ಗಿಡಗಳನ್ನು ಯಥೇಷ್ಟವಾಗಿ ಹಾಕಿಸಿದ್ದನು. ಸುವರ್ಣಶೇಖರನು ತನಗೆ ವಿರಾಮ ಸಿಕ್ಕಿದಾಗಲೆಲ್ಲಾ ಆ ತೋಟದಲ್ಲಿರುವ ಹೂಗಳನ್ನು ನೋಡುವುದರಲ್ಲಿಯೂ, ಅವುಗಳ ವಾಸನೆಯನ್ನು ಆಘ್ರಾಣಿಸುವುದರಲ್ಲಿಯೂ ಕಾಲ ಕಳೆದು ತೃಪ್ತನಾಗುತಿದ್ದನು.

ಹೀಗೆ ಸುವರ್ಣ ಶೇಖರನು ಆ ತೋಟವನ್ನು ನೋಡಿದಾಗಲೆಲ್ಲಾ ಅಲ್ಲಿರುವ ಹೂಗಳ ಒಂದೊಂದು ರೇಖೂ ಚಿನ್ನದ ರೇಖಾಗಿಯೂ, ಗುಲಾಬಿ ಪುಷ್ಟಗಳೆಲ್ಲವೂ ಸುವರ್ಣದ ಪುಷ್ಪಗಳಾಗಿಯೂ ಇದ್ದರೆ ತೋಟದ ಬೆಲೆ ಎಷ್ಟಾಗುತ್ತಿದ್ದಿತು ಎಂಬ ಲೆಕ್ಕಾಚಾರವನ್ನು ಹಾಕುತ್ತಿದ್ದನು. ಸುವರ್ಣಶೇಖರನಿಗೆ ಸಂಗೀತದಲ್ಲಿ ಅಭಿರುಚಿಯಿದ್ದರೂ, ಈಗ ಆತನಿಗೆ ಸವರ್ಣನಾಣ್ಯಗಳು ಒಂದ