ಗಿರಿಯಮ್ಮ - ಅದು ತುಂಬಾ ಗುಟ್ಟಾಗಿರಬೇಕಮ್ಮ.
ವೆಂಕಮ್ಮ - ಹಾಗಿದ್ದರೆ, ಮೆಲ್ಲಗೆ ಹೇಳಿ; ಅವಳ ಗಂಡನು ಹಜಾರದಲ್ಲಿರುವನು. ನಿಮ್ಮ ಮನೆಯವರರೂ ಇರುವರು.
ಗೀಯಮ್ಮ - ಅವರಿಗೆ ನಾನು ಹೆದರಲೊ? ಆ ಪೋರ ನನ್ನ ಮುಂದಿನವನು. ನಮ್ಮ ಮನೆಯವರಿಗೆ ಎಲ್ಲಾ ವಿಷಯವೂ ತಿಳಿದೇ ಇದೆ.
ಮೀನಾಕ್ಷಮ್ಮ - ಹಾಗಾದರೆ ಹೇಳಿಯೇ ಬಿಡಿ?
ಗಿರಿಯಮ್ಮ - ಅವಳು ಯಾವನನ್ನೋ ಎತ್ತಿಕೊಂಡು ಓಡಿಹೋಗಲು ಸಮಯ ನಿರೀಕ್ಷಣೆಯಲ್ಲಿರುವಳು.
ವೆಂಕಮ್ಮ - ಯಾರನ್ನು? ಯಾರು ಹೇಳಿದರು?
ಗಿರಿಯಮ್ಮ - ಯಾವನೋ ಒಬ್ಬ ತಲೆಮಾಸಿದವನನ್ನು | ಯಾವರಂಡೆ ಬಲ್ಲಳು? ಯಾರೋ ಹೇಳಿದರು. ನಿನ್ನಯೇ ಓಡಿಹೋಗಬೇಕೆ೦ದಿದ್ದಳು. ಪಾಪ! ಅವನು ಒಳ್ಳೆಯವನಾಗಿದ್ದುದರಿಂದ ಹೆದರಿ, ಮತ್ತೆ ಬರುವೆನೆಂದು ಹೇಳಿ ಬಂದನಂತೆ! ತುಂಟನಾಗಿದ್ದರೆ,...
ವೆಂಕಮ್ಮ - ಕುಲದ ಗೌರವವನ್ನು ಹಾಳುಮಾಡುವವರು ಇದ್ದರೇನು? ಸತ್ತರೇನು? ಅವಳ ಗಂಡನಿಗೇನು ಬುದ್ದಿಯಿಲ್ಲವೆ? ಅವನೇನು ಬಳೆ ತೊಟ್ಟಿರುವನೇ! ಎಂತಹ ಷಂಡ........?
ವಿನೋದನಿಗೆ ಭಯವಿಸ್ಮಯಗಳು ಹೆಚ್ಚಿದುವು. ಮೇಲಕೆದ್ದು ಘಟ್ಟಿಯಾಗಿ ಹೇಳಿದನು, - 'ಅಮ್ಮ | ಗಿರಿಯಮ್ಮ! ಒಂದೇ ಒಂದು ಪ್ರಶ್ನೆಯನ್ನು ಕೇಳಬೇಕು; ದಯೆಯಿಟ್ಟು ಸ್ವಲ್ಪ ಇತ್ತಬನ್ನಿರಿ?'
ಗಿರಿಯಮ್ಮನು ಬಂದು ದರ್ಪಿತಸ್ವರದಿಂದ, - ಏನಪ್ಪ, ಅದು? ಉಡುಗೊರೆ|'