ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸುಶೀಲೆ
೫೫

ಆದರೂ ಅದೆಲ್ಲವನ್ನೂ ಮರೆತು, ಹೆಂಡತಿಯ ಮಾತಿಗೆ ಮರುಳಾಗಿ, ಇಲ್ಲಿಗೆ ಬರುವುದನ್ನೇ ಕಡಿಮೆ ಮಾಡಿರುತ್ತಾನೆ. ಅದರೆ ನಾನು ಚಾಕಚಕ್ಯದಿಂದ ಅವನಿಗೆ ಹೆಂಡತಿಯಲ್ಲಿ ದ್ವೇಷವುಂಟಾಗುವಂತೆ ಮಾಡಿರುವೆನು. ನಿನ್ನೆಯೇ ಅವಳ ಮೇಲೆ ಅಲ್ಲದ ಸಲ್ಲದ ದೋಷವನ್ನ ಹೊರೆಯಿಸಿ ಅವನನ್ನು ಚೆನ್ನಾಗಿ ಕೆರಳಿಸಿ ಕಳಿಸಿಕೊಟ್ಟನು. ಆದರೂ ನಿನ್ನೆ ಅವನು ಏತರಿಂದಲೋ ದುಡುಕಲಿಲ್ಲ. ಈ ದಿನ ನಿಮ್ಮ ಸಲಹೆ ದೊರೆತುದರಿಂದ ನಾನೇ ಹೋಗಿ, ಅಡಗಿದ್ದ ಉರಿಯನ್ನು ಮತ್ತೆ ಉರಿಮಾಡಿ ಹಬ್ಬಿಸಿಬಿಟ್ಟು ಬಂದೆನು. ಇಷ್ಟು ಹೊತ್ತಿಗಾಗಲೇ ಅವನ ಕೋಪಾಗ್ನಿಗೆ ಸಿಕಿ, ಸುಶೀಲೆ ಸುಟ್ಟು ಹೋಗಿರಬೇಕು! ಅಲ್ಲದೆ ಮಯೂರಿಯೂ ಬಲಿಯಾಗಿರಬೇಕು. ಅವನ ಕೃತಘ್ನತೆಗೆ ಇದೇ ಪ್ರತೀಕಾರವಲ್ಲವೆ!"

ತಂತ್ರ - ಅದೇನು?

ಚಪಲೆ - ನೀವು ಮಾತ್ರ ಹಾಗೆ ಮಾಡಬೇಡಿರಿ, ಅವನು ತನ್ನ ಆಸ್ತಿಯೆಲ್ಲವನ್ನೂ ನನ್ನ ಹೆಸರಿಗೆ ಬರೆದು ರಿಜಿಸ್ಟರ್ ಮಾಡಿಸಿ ಕೊಡುವೆನೆಂದು ಹೇಳಿ, ಸುಖಪಟ್ಟು ನನ್ನನ್ನು ಮೋಸಮಾಡಿರುವನು. ಅವನಿಂದಾದ ಹಿಂಸೆ ನನಗೆ ಅಷ್ಟಿಷ್ಟಲ್ಲ!! ಅದಕ್ಕೆ ಪ್ರತೀಕಾರ ಮಾಡಬೇಕೆಂದೇ ನಾನು ಈ ದಿನ ತಮ್ಮ ಸಹಾಯದಿಂದ ಮಾಡಿದ ಹೂಟವು ಹೇಗೂ ತಪ್ಪಿಹೋಗುವುದಿಲ್ಲವೆಂದು ನಂಬುವೆನು, ಇದಕ್ಕಾಗಿ ನಾನು ತಮಗೆ ಕೃತಜ್ಞಳಾಗಿರುವೆನು.

ತಂತ್ರನಾಥನು ಚಪಲೆಯ ಬೆನ್ನು ತಟ್ಟಿ - "ಭಲೆ! ಚಪಲೆ! ಭಲೆ!! ಈಗ ನಿನ್ನ ಮಾಟದ ಹೂಟವು ತಿಳಿಯಿತು. ಬಂದವರನ್ನು ಆದರಿಸುವುದರಲ್ಲಿಯೂ, ಸಂತೋಷಪಡಿಸುವುದರಲ್ಲಿಯೂ ನಿನ