ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸುಶೀಲೆ
೬೯

ಕರೆತಂದ ಕಾರಣ," ಇವೆಲ್ಲವನ್ನೂ ತಿಳಿಸಿದಳು, ಆ ಬಳಿಕ ಇನಸ್ಪೆಕ್ಟರ ವಿಚಾರಣೆಯಾಗಿ ಆತನು ಮಯೂರಿಯಿಂದ ತನಗೆ ತಿಳಿದ ಬಂದ ಘಾತವೃತ್ತಾಂತವನ್ನು ಯಥಾವತ್ತಾಗಿ ತಿಳಿಸಿದುದಲ್ಲದೆ, ಚಪ ಲೆಯ ಮರಣವು ತಂತ್ರನಾಥನ ಕಯ್ಯಿಂದಲೇ ನಡೆಯಿತೆಂಬುದನ್ನು ದೃಢಪಡಿಸಿದನು.

ನಾಲ್ಕನೆಯವನಾಗಿ ಸುಜ್ಞಾನಶರ್ಮನು ಬಂದು, ಸುಶೀಲೆಯನ್ನು ಮಯೂರಿಯೊಡನೆ ಇನಸ್ಪೆಕ್ಟರು ತನ್ನ ಮನೆಗೆ ಕಳಿಸಿದನ್ನೂ ಹೊಂಚಿನಿಂದ ಸಂಚುಕಾಯುತ್ತಿದ್ದ ತಂತ್ರನಾಥನು ಸುಶೀಲೆಯ ಮೇಲೆ ನಡಿಯಿಸಲು ಯತ್ನಿಸಿದ ಅತ್ಯಾಚಾರವನ್ನೂ ವಿವರಿಸಿದನು. ಅಲ್ಲದೆ ಕೃತಘ್ನನಾದ ತಂತ್ರನಾಥನಿಗೆ ತಕ್ಕ ಶಿಕ್ಷೆಯಾಗದೆ ಹೋದರೆ ಸುಶೀಲೆಗೂ, ಸಮಾಜಕ್ಕೂ ಹಾನಿ ತಟ್ಟುವುದೆಂದೂ ಮನವಿ ಮಾಡಿಕೊಂಡನು.

ಇದಾದ ಬಳಿಕ, ತಂತ್ರನಾಥನು ಕರೆಯಿಸಲ್ಪಟ್ಟನು, ಆ ವೇಳೆಯಲ್ಲಿ ಆತನು ಹೇಗಾಗಿದ್ದನೆಂಬುದನ್ನು ತಿಳಿಯ ಹೇಳಲು, ನಮಗಂತೂ ಅಳವಲ್ಲ, ಗ್ರಾಹಕಶಕ್ತಿಯಿದ್ದಷ್ಟೂ ಊಹಿಸಿ ತಿಳಿದುಕೊಳ್ಳುಬೇಕು, ಹೇಗೂ, ತಂತ್ರನಾಥನು ಕಂದುಬಣ್ಣಕ್ಕೆ ತಿರುಗಿ, ಸುಕ್ಕಿಹೋಗಿದ್ದ ಮುಖವನ್ನು ಮೇಲಕ್ಕೆತ್ತಿ ನ್ಯಾಯಾಧಿಕಾರಿಯನ್ನು ದೈನ್ಯದೃಷ್ಟಿಯಿಂದೆ ನೋಡುತ್ತೆ, ಕೇಳಿಕೊಂಡನು— "ಧರ್ಮಪ್ರಭೋ! ನಾನು ನಡೆಯಿಸಿರುವ ಕೆಲಸಗಳೆಲ್ಲವನ್ನೂ ನಿಜವಾಗಿ ಹೇಳುವೆನು . ಆದರೆ ನನ್ನನ್ನು ಬಿಡುವುದಾಗಿ ಮೊದಲು ವಾಗ್ದಾನಮಾಡಬೇಕು." ಧರ್ಮಾವತಾರನು 'ಆಗಬಹುದು' ಎಂದು ಅಭಯವಿತ್ತನು. ಅಲ್ಲದೆ ಈವರೆಗೆ ತನ್ನ ಅಕ್ರಮ ಸಂಬಂಧವಾಗಿ ಇತರರಿಂದ ಕೊಡಲ್ಪಟ್ಟ ಸಾಕ್ಷ್ಯಗಳಿಂದ ತಾನು ಹೇಗೂ ತಪ್ಪಿಸಿಕೊಳ್ಳುವಂತಿಲ್ಲವೆಂಬುದ