ಥನ ಕೊಡಲಿಯೇಟನ್ನು ತಪ್ಪಿಸಿಕೊಳ್ಳದಿದ್ದರೆ ಅದು ಚಪಲೆಯನ್ನು ಕೊಲ್ಲದಿದ್ದರೆ, ನಿಜವಾಗಿಯೂ ನಾನು ಇಂದಿನ ಈ ವಿಚಾರಣೆಗಾಗಿ ಇಲ್ಲಿಯವರೆಗೂ ಬರುವಂತಾಗುತ್ತಿರಲಿಲ್ಲ. ದೈವವಿಲಾಸದಿಂದ ಹಾಗಾಗಲಿಲ್ಲ. ಆ ವೇಳೆಯಲ್ಲಿ ಅವರಿಬ್ಬರನ್ನೂ ಕೊಲ್ಲಬೇಕೆಂದಿದ್ದ ದುರ್ಬುದ್ದಿಯು ಈಗ ಇಲ್ಲ. ಈಗ ತಂತ್ರನಾಥನನ್ನು ನೋಡಿ ಅತಿಯಾಗಿ ಕನಿಕರ ಪಡುತ್ತಿರುವೆನಲ್ಲದೆ, ನನ್ನ ಅಕಾರ್ಯಗಳಿಗಾಗಿ ನನ್ನನ್ನು ನಾನೇ ನಿಂದಿಸಿಕೊಳ್ಳುತ್ತಿರುವೆನು.” ಎಂದು ಹೇಳುತ್ತಿದ್ದಂತೆಯೇ ಅನುತಾಪಾಗ್ನಿಯಿಂದ ಸಂತಪಿಸುತ್ತೆ ಕೆಲವು ಹೊತ್ತು ಸ್ತಭ್ಧನಾಗಿ ನಿಂತಿದ್ದು, ಮತ್ತೆ ಚೇತರಿಸಿಕೊಂಡು - “ಧರ್ಮಪ್ರಭೊ! ನನ್ನ ಅಪರಾಧಗಳು ಅನೇಕವಾಗಿವೆ. ಧರ್ಮಪತ್ನಿಯಲ್ಲಿ ದ್ರೋಹಿ! ಸತೀಮಣಿಯಾದ ಪತ್ನಿಯ ಕೊಲೆಗಾಗಿ ಪ್ರಯತ್ನ ಪಟ್ಟ ಪಾಪಿ!! ಕುಲದ ಮಾನ-ಕೀರ್ತಿಗಳಿಗೆ ಕುಂದನ್ನು ತಂದ ನೀತಿಬಾಹಿರ!!! ಹೆಚ್ಚಾಗಿ ಹೇಳುವುದೇನು? ಆ ವೇಳೆಯಲ್ಲಿ ನನಗೆ ನಿವೇಚನಾಶಕ್ತಿಯೇ ಲೋಪವಾಗಿತ್ತೆಂದರೆ ಸಾಕಾಗಿದೆ. ಈಗ ಅದಕ್ಕಾಗಿ ಅನುತಾಪಪಟ್ಟು ನರಲುವುದೊಂದೇ ನನಗೆ ಫಲವಾಗಿದೆ. ನಿನ್ನ ದುಷ್ಕರ್ಮಗಳಿಗಾಗಿ ವಿಧಿಸಲ್ಪಡುವ ಕ್ರೂರಶಿಕ್ಷೆಯನ್ನು ಸಮಾಧಾನದಿಂದ ಅನುಭವಿಸಲು ಸಿದ್ಧನಾಗಿರುವೆನು. ಆದರೆ, ಆ ನನ್ನ ಧರ್ಮಪತ್ನಿಯನ್ನು ಒಮ್ಮೆ ಸಂದರ್ಶಿಸಿ, ಅವಳಲ್ಲಿ ಕ್ಷಮೆಬೀಡಿ, ಅನುಮತಿ ಹೊಂದಿ ಆ ಬಳಿಕ ಯಾವ ಶಿಕ್ಷೆಗೆ ಬೇಕಾದರೂ ಗುರಿಯಾಗುವೆನು. ಆ ಸಾದ್ವಿಯ ಉಪದೇಶವು, ಪ್ರತಿನಿಮಿಷದಲ್ಲಿಯೂ ನನ್ನ ಹೃದಯದಲ್ಲಿ ದವಾನಲದಂತೆ ಜ್ವಲಿಸುತ್ತಿರುವುದು, ಈ ಸಂತಾಪಶಮನಕ್ಕಾಗಿ ಆ ಪುಣ್ಯಮೂರ್ತಿಯಲ್ಲಿ ನನ್ನ ಅಪರಾಧ ಕ್ಷಮೆಯನ್ನು ಪ್ರಾರ್ಥಿಸಲು ನಿಶ್ಚಯಿಸಿರುತ್ತೇನೆ. ಅದುದರಿಂದ ಇದೊಂದು ಕೊರಿಕೆಯನ್ನು ಹೇಗಾದರು ಧರ್ಮಪ್ರಭುಗಳು ಅನುಗ್ರಹಿಸಬೇಕಾಗಿ ಬೇಡುತ್ತೇನೆ.
ಪುಟ:ಸುಶೀಲೆ.djvu/೬೯
ಗೋಚರ