ದೃಢಪಡಿಸುವಂತಿಲ್ಲವಾದುದರಿಂದೆಯೂ, ಈಗ ನಿನ್ನನ್ನು ಅರ್ಥ ದಂಡದಮೇಲೆ, ಯೋಗ್ಯನಾದ ಒಬ್ಬ ಮನುಷ್ಯನ ಹೊಣೆಯಿಂದ ಮುಕ್ತನನ್ನಾಗಿ ಮಾಡಬೇಕೆಂದಿರುವೆನು ಇಲ್ಲಿ ಯಾರನ್ನಾದರೂ ಹೊಣೆ ಕೊಡಬಲ್ಲೆಯಾ ?
ವಿನೋದ-ಮಹಾಸ್ವಾಮಿ, ನಾನು ತಮ್ಮ ಕೃಪೆಗಾಗಿ ಕೇವಲ ವಿಧೇಯನಾಗಿರುವನು. ಆದರೆ, ನನ್ನ ಪಾಪಾಚರಣೆಯ ಫಲಾನುಭವಕ್ಕಾಗಿ ನನಗೆ ಮರಣವೇ ವರವಾಗಿರುವುದುoತೆ ಈಗ ನಾನು, ಯಾರನ್ನೂ ಹೊಣೆಯಾಗಿರಲು ಪ್ರಾರ್ಥಿಸಲಾರೆನು. ಅಂತಹ ಮಹನೀರರರಾರಾದರೂ ಇದ್ದರೂ, ಅವರಿಗೆ ಧನ್ಯವಾದವನ್ನು ಸಮರ್ಪಿಸಿ ಯಾವಜ್ಜೀವವೂ ಅವರಿಗೆ ಕೃತಜ್ಞನಾಗಿರುವೆನು.
ಈವರೆಗೂ ನಡೆಯುತ್ತಿದ್ದ ವಿದ್ಯಮಾನಗಳನ್ನು ನೋಡುತ್ತ ಸಂಭ್ರಾಂತನಾಗಿದ್ದ ಸುಜ್ಞಾನಶರ್ಮನು, ವಿನೋವನ ಮಾತಿಗೆ ಖೇದ ಮೋದಗಳಿಂದ ತಲ್ಲಣಿಸುತ್ತೆ ಧರ್ಮಾವತಾರನ ಮುಂದೆ ನಿಂತು ವಿನಯದಿಂದ ಕೇಳಿದನು, “ಸ್ವಾಮಿ, ಈ ವಿನೋದನಿಗಾಗಿ ನಾನು ಹೊಣೆಯಾಗಿರುವೆನು, ಇನ್ನು ಮುಂದೆ ಈತನಿಂದ ಎಂತಹ ಅಪರಾಧಗಳು ನಡೆಯಿಸಲ್ಪಟ್ಟರೂ ನಾನು ಶಿಕ್ಷೆಗೆ ಬದ್ಧನಾಗಲುಳ್ಳವನು. ಈತನನ್ನು ನನ್ನ ಹೊಣೆಯಮೇಲೆ ಬಿಟ್ಟು ಕೊಡಬೇಕಾಗಿ ಕೋರುವೆನು"
ಧರ್ಮಾವತಾರ-ವಿನೋದನಕಡೆಗೆ ತಿರುಗಿ; -"ವಿನೋದ, ನಿನ್ನ ಮೇಲೆ ಎರಡು ಅಪರಾಧಗಳು ಆರೋಪಿತವಾಗಿ, ಒಂದೊಂದಕ್ಕೂ ಅಯ್ದುನೂರು ರೂಪಾಯಿಗಳಂತೆ ಅರ್ಥದಂಡವು ವಿಧಿಸಲ್ಪಟ್ಟು, ಸುಜ್ಞಾನಶರ್ಮರ ಹೊಣೆಯಮೇಲೆ ಸೀನು ಬಿಡಲ್ಪಟ್ಟಿರುವೆ ! ಇನ್ನು ಮುಂದೆ ಇಂತಹ ಅಕ್ರಮಕ್ಕೆಡೆ