ಪುಟ:ಹನುಮದ್ದ್ರಾಮಾಯಣಂ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19 ಹಮಮದ್ರಾಮಾಯಣ. ಮಾನಿನಿ ಮೊಗವೆರುತೀಕ್ಷಿಸಿ | ತಾನೊರ್ವನನಲ್ಲಿ ಕಾಣದಿರಲಿಂತೆಂದಳ್ || ೧೨೭ | ಕನಸಿದೋ ಚಿತ್ತಭ್ರಾಂತಿಯೋ | ದನುಜರ ಮಾರಣವೊ ಕಾಣೆನೆನ್ನಯ ಕರ್ಣ ! ಕ್ರಿನಿದಾದುದು ನಿಜವಾದೊಡೆ | ಸನಿಹದೊಳಂ ಕೇಳಲೆನುತೆ ಸುಮ್ಮನೆ ಕುಳಿತಳ || ೧೨೮ || ರಾವಣನೆನ್ನಂ ಮೋಹಿವೊ | ಡೀ ವಾನರರೂಪಮಾಂತು ಬಂದನೋ ಎನುತುಂ || ತೀವಿದ ಭಯದಿಂ ಜಾನಕಿ | ತಾವರೆಯೆಲೆನೀರ ತೆರದೆ ನಡುಕಂಗೊಂಡಲ್ || ೧೨೯ | ಏನತಿಭಕ್ತನೊ ಮಾರುತಿ | ಸಾನಂದದೆ ಮರದಿನಿಳಿದು ಬಂದುಂ ಸೀತಾ || ಮಾನಿನಿಗಂ ವಂದಿಸಿ ಸ | ನ್ಯಾನಿಸುತಂ ಪೇಳನವಳೊಳತಿವಿನಯದೊಳಂ {೧೩೦ || ತಾಯೆ ವಿಲೋಕಿಪುದೆನ್ನಂ || ಮಾಯಾವಿಯ ರಾಮಚ್ಛತನಲ್ಲಮೆ ನೋಡೌ || ವಾಯುಕುಮಾರಂ ವಾನರ | ನಾಯಕನುರುಸಚಿವಮುಖ್ಯನೆಂ ತಾನೆಂದಂ || ೧೩೧ } ಅನುಚರನೆನ್ನೆ ನರೇಂದ್ರನ | ಮನುಜರ್ಗಂ ವಾನರರ್ಗೆ ಸಂಗತಿಯೇನಮ್ || ಮನಕನುಮಾನಂ ತೋರ್ಪ್ಪುದು | ಮೆನುತಂ ಭೂಜಾತೆ ಕೇಳೊಡೆಂದಂ ಹನುಮಂ ! ೧೩೨ || ವರಋಷ್ಯಮೂಕಗಿರಿಗಂ || ಧರಣಿಪರೆಯ್ತಂದು ಶಬರಿಯಾಶ್ರಮದೊಳಗಂ | ದಿರೆ ಕಳಿಸಿದನೆನ್ನಂ ಕಪಿ | ವರನಲ್ಲಿಗೆ ಬಂದು ಕಂಡೆನಿನವಂಶಜರಂ | ೧೩೩ | ಹೆಗಲೇರಿಸಿಕೊಂಡವರಂ | ನಗಶಿಖರಕೆ ನೆಗೆದು ರವಿಜನಂ ತೋರಂ || ದೊಗುಮಿಗೆ ಹರ್ಷ೦ಗೊಂಡರ್‌ | ಖಗಜಂಗಾತಂಗೆ ಸಖ್ಯ ಮಾಯ್ ದೇವೀ | ೧೩೪ ||