ಷಷ್ಣಾ ಶ್ರಾ ಸ . -+ಳX ವೃತ್ರ | ವೀರ ವಿಶ್ವ ವಿನಾಯಕಂ ಕುವಲಯಶ್ಯಾಮಂ ನತೋದ್ದಾರಕಂ | ಧೀರಂ ಧೀನಿವುಣಂ ಸುರೇಶವಿನತಂ ಸದ್ಘಾಷಿತೋದ್ಭಾಸಕಂ || ಮಾರಾರಿಪುಣತಂ ಪ್ರಮೋದಿಹೃದಯಂ (ರ್ವಾಣಸಂಸೇವಿತಂ | ಶ್ರೀರಾಮಂ ಮನಮೊಲ್ಕು ಮಾಳೆಮಗೆ ನಿಚ್ಚಂ ಮಾನಸಾಭೀಷ್ಟಮಂ ||೧|| ಕಂದ || ಶರನಿಧಿಲಂಘನಧೀರಂ || ಶರಣಾಗತಪೋಷನಸುರಕುಲಸಂಹಾರಂ || ಧರಣಿಸುತಾನಂದಕರಂ | ದುರಿತಾಚಲವಿ ಪೊರೆಗೆ ಪವನಕುಮಾರಂ || 9 | ಹನುಮಂ ಮುಂದೇಗೆಯಂ | ಸನಯಂ ತತ್ಯಧೆಯನೈದೆ ಬಿತ್ತರಿಸುಗುಮೆಂ || ದೆನುತಿರಲಾ ಮುನಿಸಂಕುಲ | ಕನುವಿಂ ಮುಂಗತೆಯನೆಯೇ ಸೂತಂ ಪೇಳ್ತಂ 1 ೩ | ಆಲಿವುದನಿಲಕುಮಾರನ | ಲೀಲೆಯನಾನೊರೆವೆನೈದೆ ವೃಕ್ಷಾಗ್ರದೊಳಂ || ಕಾಲಾಂತಕನೊಲೆ' ಕುರ | ಲಾಲೋಚನೆಗೆಯ್ನೊಂದು ಕಾರ್ಯಾ೦ತರಮಂ - ||೪|| ಸರಸಿಜನೇತ್ರನ ಕೃಪೆಯಿಂ | ಧರಣಿದೆಯಂ ಕಂಡು ಧನ್ಯನಾದೆಂ ದಶಕಂ || ಧರನಂತಸ್ಸ ಮನರಿತುಂ | ಮರಳಪೆನೆಂಬಾಗಳ ಸಖನುದಯಿಸಿದಂ || ೫ || ಗಗನಮನಿ ವಾರ್ಧಿಯೋಳಂ | ದೊಗೆದಾ ಚೆಂಗುಡಿಯ ಲತೆಯೂ ಖಚರಾಂಗನೆಯರ್ || ತೆಗೆದುಟ್ಟ ರಕ್ತಚೇಲದ | ಬಗೆಯೋ ಎನೆ ಕೆಂಪುವಣ್ಣಮೆಸೆದುದು ನೋಡಲ್ || ೬ || ಇನನೆಂಬೆ ಬರಿದೆ ನೀನಿಂ | ದನುವಿಂ ನೆರೆಯೆಂದು ಚುಂಬಿಸುವ ಪೂರ್ವದಿಶಾಂ ||
ಪುಟ:ಹನುಮದ್ದ್ರಾಮಾಯಣಂ.djvu/೧೧೫
ಗೋಚರ