ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನುಮದ್ರಾಮಾಯಣ. ದಿನಿಯಣುಗಿಯನರಸುವೊಡಂ | ದಿನಪಸುತಂ ನೇಮಿಸಿ ನಡೆದ‌ ನಲವಿಂ ೬೭ || ಅವರೊಳಗೊರ್ವ೦ ತಾನೀ | ಭುವನಧಿಯಂ ದಾಂಟೆವಂದು ಕಂಡೆಂ ಸೀತಾ ! ಯುವತಿಯನಿನ್ನಿಲ್ಲಿಂದೆ | ಯ್ಯುವ ಸಮಯದೆ ಬಂದು ಕೊಂದರೆನ್ನಂ ದನುಜರ್ | ೬೮ | ಪ್ಲವಗತೆಯಿಂದಂ ರಸಮಯ | ನವಫಲಗಳನೈದೆ ನೆಗೆದು ತಿನೆ ಮನಬಂದಂ || ತಿವರದರಿಂದೆನ್ನಂ ತಿವಿ || ತಿವಿದು ಕಟ್ಟುತ್ತೆ ತಂದರೀ ಬವಣೆಗಳು | ೬೯ | ಭೂಸುರಕುಲದೊಳ್ಳನಿಸಿ ಮ | ಹೇಶನ ಕೃಪೆಯಿಂದ ಪಡೆದು ಸೌಭಾಗ್ಯಗಳಂ || ಭೂಸುತೆಯಂ ತಂದುಂ ಮಿಗೆ | ಪೇಸುಗೆಯಂ ಪೊತ್ತುಕೊಂಡೆಯಕಟ ನಿರರ್ಥo | ೭೦ || ರಮೆಯರಸನೊಳಂ ಕಲಹಂ | ಸಮಮೆನಿಪುದೆ ನಿನಗೆ ದುಷ್ಟ ಕಾರ್ಯಗಳಿಂದಂ || ವಿಮಲಪುಲಸ್ಯಾನ್ನಯಮಂ | ಯಮಯಾತನೆಗಿಳಿಸೆವೇಡಮೆಲೆ ದಶಕಂಠಾ | ೧ ! ಕೋಲದುಳಿವನೆ ರಾಮಂ ಖಳ | ಕುಲಮಂ ತವಪುತ್ರಮಿತ್ರಬಾಂಧವರಂ ಭೂ | ಲಲನಾತ್ಮಜೆ ಬಸಮಪ್ಪಳೆ | ಬಲಿಯಿಸಿದಮ್ ಪಾಪಕೃತ್ಯಮಂ ಮೂರ್ಖತೆಯೊಳ್ ||ಅ| ತನುವಿದು ಶಾಶ್ವತಮೇ ಸತಿ | ತನುಜಾದ್ಯರ್ಕಷ್ಟ ಕಾಲಕೊದವುವರೇ ಸು | ಮೈನೆ ಮಾಯಾವಶನಾಗದೆ | ಮನಗುಂದದ ರಾಮನಂಘ್ರಗಾನತನಾಗಾ | ೩ !! ಸೀತೆಯನೊಪ್ಪಿಸಿ ರಾಮಂ | ಗಾತನ ಸತ್ಕೃಪೆಯನೈದೆ ಪಡೆದುಂ ಬಹುಳ || ಖ್ಯಾತಿಯಿನಖಿಳ್ಳೆಶ್ವರ್ಯಮ | ಹಾತಿಶಯಮನುಳಿಸಿಕೊಳ್ಳುದೆಂದಂ ಹನುಮಂ \ 2೪ |