119 ಷಷ್ಮಾ ಶ್ವಾಸ. ಪುರಜನಪರಿಜನನಿಕರಂ | ತರುಣಿಯರುಂ ಬಾಲವೃದ್ಧರುಂ ಖೇದದೊಳಂ || ಪಂದೋಡಿದರತ್ತಲ್ ದಶ | ಶಿರನಂ ಸಲೆ ಬಯ್ಯುತೆ ಹಾಹಾರವದಿಂ || ೯೦ || ಧರಣಿಜೆಯೆಂತಿರ್ಪ್ಪಳೊ ತ | ಚರಣಮವೀಕ್ಷಿಸುವೆನೆಂದು ವಾಲಧಿಯಂ ಸಾ 11 ಗದೊಞ್ಞಾನಂಗೆಯಿಸಿ | ಭರದಿಂ ನಡೆತಂದಶೋಕವನಮಂ ಸಾರ್ಧ್ವಂ || ೯೧ || ವಿನಮಿತನಾಗಿ ಧರಾಸುತೆ | ಗನುವಿಂ ತಾನೆಸಗಿದಮಿತಕಾರ್ಯಗಳಂ ಪಾ || ವನೆಯೊಡನೆ ಬಿನ್ನವಿಸಿ ರಘು | ಜನ ಪೊರೆಗಪ್ಪಣೆಯನೀವುದೆಂದಂ ಹನುಮಂ 1 ೯೨ {| ಬಾಳಕ ಬಳಿ ನೀನೀ || ಕೂಳರ ದೆಸೆಯಿಂದಮಿನ್ನು ನಿಲ್ಲದೆ ಭರದೊಳ್ | ನೀಳಾಂಗನೆಡೆಗೆ ಗಮಿಸುತೆ | ಪೇಳಯ್ ಮಾರ್ತೆಯೆಲ್ಲಮಂ ನಲವಿಂದಂ 1 ೯೩ | ನೀವಿಲ್ಲಿದ್ದು Fದರಿಂ ಮ || ನ್ಯಾನಸದುರುಚಿಂತೆಯಳಿಯೆ ಸೊಗದಿಂದಿರ್ದ್ದೆo || ನೀನೆಂದಿಗೆ ಕರೆತರ್ಪ್ಪೆಯೋ | ದಾನವನುಪಟಳದೊಳೆಂತು ಜೀವಿಸೆನೆಂದಳ್ || ೯೪ | ಹೆಗಲೇರಿಸಿ ಕೊಂಡುಹೈಂ | ರಘುಜನ ಸನ್ನಿಧಿಗೆ ನಿಮ್ಮನತಿಸತ್ವರದಿಂ || ಜಗದಂಬಿಕೆ ಚಿತ್ರದೊಳಂ || ಬೆಗಡುಂಗೊಳೆವೇಡಿಮೆಂದೊಡವಳಿಂತೆಂದಳ್ 11 ೯೫ | ನಿನ್ನೊಡನಾನೆರೆ ಮನ | ದನ್ನನ ಮನಕೆಂತು ತೋರೆವರ್ಫುದೊ ಕಾಣೆಂ || ಮುನ್ನೀರಂ ಬಂಧಿಸಿ ಬಳಿ | ಕೆನ್ನಂ ಶ್ರೀರಾಮನುಯ್ಯುದುಚಿತವೆನಿಕ್ಕು || ೯೬ | ದನುಜಾವಳಿಯಂ ಸದೆಬಡಿ | ದನಿಮಿಷರುಂ ಮೆಚ್ಚುವಂತೆ ರಾಘವನೆನ್ನಂ ||
ಪುಟ:ಹನುಮದ್ದ್ರಾಮಾಯಣಂ.djvu/೧೨೭
ಗೋಚರ